ಮೊಹರಂ ಹಬ್ಬ ಸರಳವಾಗಿ ಶಾಂತಿಯುತವಾಗಿ ಆಚರಿಸಿ ಪಿಎಸ್ಐ ಸಿದ್ದರಾಮಪ್ಪ

0
🌐 Belgaum News :

ಹುಕ್ಕೇರಿ : ಮೊಹರಂ ಹಬ್ಬ ಸರಳವಾಗಿ ಶಾಂತಿಯುತವಾಗಿ ಆಚರಿಸಿ ಪಿಎಸ್ಐ ಸಿದ್ದರಾಮಪ್ಪ ಉನ್ನದ ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸಾಂಕ್ರಾಮಿಕ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡದಂತೆ ಸರಪಳಿಯನ್ನು ಮುರಿಯಲು ಇನ್ನು ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ ಎಂದು ಪಿಎಸ್ಐ ಹುಕ್ಕೇರಿ ಅವರು ಸಭೆಯಲ್ಲಿ ಮೊಹರಂ ಹಬ್ಬದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳಬೇಕಾಗುತ್ತದೆ ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳನ್ನು ಪಂಜಾವನ್ನು ಸ್ಥಾಪಿಸುವುದು ಹಾಗೂ ತಾಜಿಯಾ ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ ಮೊಹರಂ ಸಂಬಂಧಿತ ಆಚರಣೆಗಳಲ್ಲಿ ಭಾಗವಹಿಸುವ ಭಕ್ತಾದಿಗಳು ಸೂಕ್ತ ಸಾಮಾಜಿಕ ಅಂತರದೊಂದಿಗೆ ಕನಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವುದು ಪಂಜಾ ಮತ್ತು ಆಲಂ ತಾಜಿಯತಗಳನ್ನು ಸಾರ್ವಜನಿಕರು ಮುಟ್ಟದೆ ದೂರದಿಂದಲೇ ತಕ್ಕದ್ದು.

 

ಖಬರಸ್ತಾನ ಒಳಗೊಂಡಂತೆ ಯಾವುದೇ ಖಾಲಿ ಜಾಗಗಳಲ್ಲಿ ಯಾವುದೇ ತರಹದ ಸಭೆ ಏರ್ಪಡಿಸುವುದನ್ನು ನಿರ್ಬಂಧಿಸಲಾಗಿದೆ ಖಬರಸ್ಥಾನ ಗಳಿಗೆ ಕೇವಲ ದಪ್ಪ ಮಾಡಲು ಮಾತ್ರ ಅನುಮತಿ ನೀಡಿದ್ದು ಅನುಮತಿಯಿರುವುದಿಲ್ಲ ಆಚರಣೆಗಳಿಗೆ ಅನುಮತಿ ಇರುವುದಿಲ್ಲ. ಖಬರಸ್ಥಾನ ಗಳಿಗೆ ಕೇವಲ ದಪ್ಪನ್ ಮಾಡಲು ಮಾತ್ರ ಅನುಮತಿ ನೀಡಿದ್ದು ಮೊಹರಂ ಸಂಬಂಧಿಸಿದ ಆಚರಣೆಗಳಿಗೆ ಅನುಮತಿ ಇರುವುದಿಲ್ಲ ಪ್ರಾರ್ಥನಾ ಸ್ಥಳಗಳಲ್ಲಿ ಮುಖಗವಸು ಗಳನ್ನು ಕಡ್ಡಾಯವಾಗಿ ಧರಿಸತಕ್ಕದ್ದು.

 

60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿ ಪ್ರಾರ್ಥನೆ ಮಾಡತಕ್ಕದ್ದು. ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸತಕ್ಕದ್ದು ಒಂದು ವೇಳೆ ಹೆಚ್ಚು ಜನರು ಆಗಮಿಸಿ ದಲ್ಲಿ ಎರಡು ಅಥವಾ ಹೆಚ್ಚು ಪಾಳಿನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸತಕ್ಕದ್ದು. ಮಸೀದಿಗಳಲ್ಲಿ ನಮಾಝ್ ನಿರ್ವಹಿಸುವವರ ಮಧ್ಯ ಕನಿಷ್ಠ ಆರು ಅಡಿ ಅಂತರ ಕಾಯ್ದುಕೊಳ್ಳುವುದು ಆಗಾಗ ಕೈಗಳನ್ನು ಸೋಪು ಮತ್ತು ಸ್ಯಾನಿಟೈಸರಗಳಿಂದ ಶುಚಿಗೊಳಿಸತಕ್ಕದ್ದು.

 

ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡತಕ್ಕದ್ದು. ಗುಂಪು ಗೂಡುವ ಅದನ್ನು ತಡೆಗಟ್ಟುವುದು ಆಡಳಿತ ಮಂಡಳಿಯವರು ಭಕ್ತಾದಿಗಳ ಕುಳಿತುಕೊಳ್ಳುವ ಗರಿಷ್ಠ ಸಂಖ್ಯೆಯನ್ನು ಮುಖ್ಯದ್ವಾರದ ಬಳಿ ಪ್ರದರ್ಶಿಸುವುದು. ಪ್ರಾರ್ಥನೆಯಲ್ಲಿ ಭಾಗವಹಿಸುವವರು ತಮ್ಮ ತಮ್ಮ ಮನೆಗಳಿಂದ ಮುಸಲ್ಲವನ್ನು ಕಡ್ಡಾಯವಾಗಿ ತರತಕ್ಕದ್ದು ಪರಸ್ಪರ ಹಸ್ತಲಾಗವ ಮತ್ತು ಆಲಿಂಗನಗಳನ್ನು ಮಾಡತಕ್ಕದಲ್ಲ. ಮಸೀದಿಗಳನ್ನು ಹೊರತುಪಡಿಸಿ ಇತರ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ಸಭಾಂಗಣ ಸಮುದಾಯ ಭವನ ಶಾದಿಮಹಲ್ ಮತ್ತಿತರ ಜಾಗಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸುವುದಿಲ್ಲ.

 

ಮೊಹರಂ ಪ್ರಯುಕ್ತ ಯಾವುದೇ ರೀತಿಯ ಮೆರವಣಿಗೆ ಸಾರ್ವಜನಿಕ ಸ್ಥಳಗಳಲ್ಲಿ ಭಾಷಣ ಕಾರ್ಯಕ್ರಮಗಳನ್ನು ಆಯೋಜಿಸುವoತಿಲ್ಲ ಭಕ್ತಾದಿಗಳು ಯಾವ ಯಾವ ಕೆಲಸವನ್ನು ನಿರ್ವಹಿಸುವುದು ಯಾವ ಯಾವ ಕೆಲಸವನ್ನು ನಿರ್ವಹಿಸಬಾರದು ಎಂಬ ಬಗ್ಗೆ ಧ್ವನಿವರ್ಧಕದ ಮೂಲಕ ಸೂಚಿಸುವದು. ಈ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಹುಕ್ಕೇರಿ ಪಿಎಸ್ಐ ಸಿದ್ದರಾಮಪ್ಪ ಉನ್ನದ ಇವರು ಸಾರ್ವಜನಿಕರಿಗೆ ತಿಳಿ ಹೇಳಿದರು

 

ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ತಾವುಗಳೆಲ್ಲ ನಿಯಮಕ್ಕನುಸಾರವಾಗಿ ಸಹಕರಿಸಬೇಕೆಂದು ಸಭೆಯ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಮುಸ್ಲಿಂ ಬಾಂದವರು ಹಿರಿಯ ಮುಖಂಡರು ಹಾಗೂ ಹುಕ್ಕೇರಿ ಬೀಟ ಸಿಬ್ಬಂದಿಗಳಾದ ಗೋವಿಂದ ನಾಗಣ್ಣವರ ಹಾಜರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');