Belagavi News In Kannada | News Belgaum

ಅಫ್ಘಾನಿಸ್ಥಾನ ಸಂಪೂರ್ಣ ಉಗ್ರರ ವಶಕ್ಕೆ: ನಿರಂತರ ಹೋರಾಟದಿಂದ ಪಂಜ್ಶೀರ್ ಪ್ರಾಂತ್ಯ ಉಗ್ರರ ತೆಕ್ಕೆಗೆ

🌐 Belgaum News :

ಅಫ್ಘಾನಿಸ್ಥಾನ:  ನಿರಂತರ ಹೋರಾಟದಿಂದ  ಪಂಜ್ಶೀರ್ ಪ್ರಾಂತ್ಯವನ್ನು ತಾಲಿಬಾನಿಗಳು  ವಶಕ್ಕೆ ಪಡೆದಿದ್ದಾರೆ. ಕಳೆದ ತಿಂಗಳ ಹಿಂದೆ ಕಾಬೂಲನ್ನು ವಶಕ್ಕೆ ಪಡೆದ  ಉಗ್ರರು, ಪಂಜ್ಶೀರ್ ಕ್ಕಾಗಿ ರಣಭೀಕರ ಹೋರಾಟ ನಡೆಸಿದರು. ಅಲ್ಲಿನ  ಪಂಜ್ಶೀರ್ ಸಿಂಹನ್ ಏದುರೇಟಿಗೆ ಉಗ್ರರಿಗೆ ನಡುಕ ಶುರುವಾಗಿತ್ತು,

ಆದರೆ,  ಇಂದು ಬೆಳಗಿನ ಜಾವ ಹಠ ಹಿಡಿದು   ದೇಶವನ್ನು ತನ್ನ ತೆಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.ಈ ಬಗ್ಗೆ ಮಾಹಿತಿ ನೀಡಿರುವ ತಾಲಿವಬಾನ್ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್, ಪಂಜ್ಶೀರ್ ನನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ದೇಶವು ಯುದ್ಧದ ಬಿಕ್ಕಟ್ಟಿನಿಂದ ಹೊರಬಂದಿದೆ ಎಂದಿದ್ದಾರೆ.

ಆದರೆ ಈ ಹೇಳಿಕೆಯನ್ನು ಪ್ರತಿರೋಧ ಪಡೆ ವಿರೋಧಿಸಿದ್ದು, ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
ಶನಿವಾರದಿಂದ ತಾಲಿಬಾನ್ ವಿರುದ್ಧ ನಿರಂತರ ಸಂಗ್ರಾಮದಲ್ಲಿದ್ದ ಪಂಜ್ಶೀರ್, 700ಕ್ಕೂ ಹೆಚ್ಚು ತಾಲಿಬಾನಿಗಳನ್ನು ಹೊಡೆಉರುಳಿಸಿದ್ದು, 1000ಕ್ಕೂ ಹೆಚ್ಚು ಉಗ್ರರರನ್ನು ಬಂಧಿಸಿತ್ತು.///

📱 Read Top News, Belgaum News Updates, Belagavi News in Kannada, Latest News on News Belgaum