Belagavi News In Kannada | News Belgaum

ಅಥಣಿಯಲ್ಲಿ ಗಣೇಶೋತ್ಸವ ಶಾಂತಿ ಸಭೆ

🌐 Belgaum News :
ಅಥಣಿ: ಗಣೇಶೋತ್ಸವ ಆಚರಣೆ ಹಿನ್ನಲೆಯಲ್ಲಿ ಬುಧವಾರ ಪಟ್ಟಣದ ಪೊಲೀಸ್ ಸಮುದಾಯ ಭವನದಲ್ಲಿ ಶಾಂತಿ ಪಾಲನಾ ಸಭೆ ಜರುಗಿತು.
ಈ ವೇಳೆ ಸಿಪಿಐ ಶಂಕರಗೌಡ ಬಸನಗೌಡರ ಅವರು ಮಾತನಾಡಿ ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ನಿಬಂಧನೆಗಳಿಗೆ ಒಳಪಟ್ಟು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದರು.
ಪೊಲೀಸ್ ಇಲಾಖೆ ಸ್ಥಳೀಯ ಆಡಳಿತಗಳಿಂದ ಅನುಮೋದನೆ ಪಡೆದು ನಿರ್ದಿಷ್ಟ ಸ್ಥಳದಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಅಡಚಣೆ ಆಗದಂತೆ ಪ್ರತಿಷ್ಠಾಪನೆ ಮಾಡಬೇಕು ಒಂದೊಮ್ಮೆ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಯಾರಾದರೂ ನಿಯಮಾವಳಿ ಉಲ್ಲಂಘನೆ ಮಾಡುತ್ತಿರುವದು ಕಂಡು ಬಂದರೆ ಸರ್ಕಾರದ ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವದು ಮೂರನೆಯ ಅಲೆ ಬರುವ ಹಂತದಲ್ಲಿ ಇರುವದರಿಂದ ಎಲ್ಲರೂ ಕೊರೊನಾ ವಿರುದ್ಧ ಸಾಮಾಜಿಕ ಅಂತರ ಕಾಯ್ದುಕೊಂಡು, ವ್ಯಾಕ್ಸಿನ್ ಪಡೆಯುವದರೊಂದಿಗೆ ಮಾಸ್ಕ್ ಧರಿಸಿ ಆಗಾಗ ಕೈ ತೊಳೆದು ಕೋವಿಡ್ ಹರಡದಂತೆ ತಡೆಯುವ ಮೂಲಕ ಹೋರಾಟಕ್ಕೆ ಸಹಕರಿಸಿ ಎಂದರು.
ನಂತರ ಸಭೆಯನ್ನು ಉದ್ದೇಶಿಸಿ ಪಿಎಸ್ಐ ಕುಮಾರ ಹಾಡಕಾರ ಮಾತನಾಡಿ ಗಣೇಶ ಉತ್ಸವದಲ್ಲಿ ಪಾಲಿಸಬೇಕಾದ ಮಾರ್ಗ ಸೂಚಿಗಳನ್ನು ತಿಳಿಸಿ ಯಾವುದೇ ಕಾರಣಕ್ಕೂ ಮಾರ್ಗ ಸೂಚಿಗಳನ್ನು ಮೀರಿ ಸಾಮರಸ್ಯಕ್ಕೆ ಧಕ್ಕೆ ತರುವಂತೆ ವರ್ತಿಸಬೇಡಿ ಎಂದು ತಿಳಿ ಹೇಳಿದರು.
ತಹಸಿಲ್ದಾರ್ ದುಂಡಪ್ಪ ಕೋಮಾರ ಮಾತನಾಡಿ ಈಗಾಗಲೇ ಮುಂಬಯಿ, ಪುಣಾ,ಸಾಂಗಲಿ ಮೀರಜ್ ಸೇರಿದಂತೆ ಮಹರಾಷ್ಟ್ರದ ಹಲವೆಡೆ ಮೂರನೇ ಅಲೆಯ ಲಕ್ಷ್ಮಣಗಳು ಹೆಚ್ಚಾಗಿವೆ. ಅಥಣಿಯಲ್ಲಿ ಶೇಕಡಾ 40 ರಷ್ಟು ಕೊರೊನಾ ಪ್ರಾಥಮಿಕ ಲಕ್ಷ್ಮಣಗಳಾದ ಕೆಮ್ಮು ನೆಗಡಿ ಕಫ ಮುಂತಾದ ಲಕ್ಷ್ಮಣಗಳು ಜನರಲ್ಲಿ ಗೋಚರಿಸುತ್ತಿವೆ. ಕಾರಣ ಅಂದು ಗಣಪತಿ ಸ್ಥಾಪನೆ ಮಾಡಿ ಬ್ರೀಟಿಷರನ್ನು ಓಡಿಸಿದಂತೆ ಇಂದು ಕೊರೊನಾ ಓಡಿಸುವ ಅಗತ್ಯವಿದೆ.ಗಣೇಶ ಮಂಡಳಿಯ ಉತ್ಸವ ಸಮೀತಿ ಸದಸ್ಯರು ಸರ್ಕಾರದ ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ ಅನಿವಾರ್ಯ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಡಾ. ಅನಿಲ ಸೌದಾಗರ ಮಾತನಾಡಿದರು
ಈ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಢಿ, ತಾ.ಪಂ  ಅಧಿಕಾರಿ ಶೇಖರ ಕರಬಸಪ್ಪಗೋಳ, ಗ್ರೇಡ 2 ತಹಶಿಲ್ದಾರ ಮಹಾದೇವ ಬಿರಾದಾರ, ಅಪರಾಧ ವಿಬಾಗದ ಪಿಎಸ್ ಐ ರವಿಂದ್ರ ನಾಯಿಕವಾಡಿ, ಅಬಕಾರಿ ಮತ್ತು ಹೆಸ್ಕಾಮ್ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರಾದ ಶ್ರೀಶೈಲ ಸಂಕ, ಕರವೇ ಅಧ್ಯಕ್ಷ ಬಸನಗೌಡ ಪಾಟೀಲ(ಬಮ್ನಾಳ), ಕನ್ನಡ ಪರ ಹೋರಾಟಗಾರ ಅಣ್ಣಾಸಾಬ ತೇಲಸಂಗ, ಅಜೀತ ಪವಾರ, ಅನೀಲ ಸೌದಾಗರ, ಶಶೀಕಾಂತ ಸಾಳವೆ, ಮಹಾಂತೇಶ ಬಾಡಗಿ, ಶಬೀರ್ ಸಾತಬಚ್ಚೆ, ಶಿವಾನಂದ ಸೌದಾಗರ, ವಿಜಯ ತೀರ್ಥ, ಸೇರಿದಂತೆ ಹಲವಾರು ಗಣೇಶ ಮಂಡಳಿಯ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum