Belagavi News In Kannada | News Belgaum

ಆಧುನಿಕ ಶ್ರವಣ ಕುಮಾರ್: ಏಳು ದಿನಗಳ ಕಾಲ ತಂದೆ- ತಾಯಿಯನ್ನು ಹೊತ್ತು ಸಾಗಿದ ಮಗ

🌐 Belgaum News :

ಮ್ಯಾನ್ಮಾರ್ : ಶ್ರವಣ ಕುಮಾರನ ಕತೆ ಎಲ್ಲರಿಗೂ ತಿಳಿದಿದೆ.  ತನ್ನ ವಯಸ್ಸಾದ ಕುರುಡು ತಂದೆ ತಾಯಿಯರನ್ನು ಭುಜದ ಮೇಲೆ ಹೊತ್ತು ಸಾಗಿದ್ದ. ಇದೀಗ ಅಂತಹುದೇ ಒಂದು ಘಟನೆ ನಿಜವಾಗಿಯೂ ನಡೆದಿದೆ.

ಮ್ಯಾನ್ಮಾರ್ ನ ಒಬ್ಬ ವ್ಯಕ್ತಿಯು ತನ್ನ ವಯಸ್ಸಾದ ಹೆತ್ತವರನ್ನು ಏಳು ದಿನಗಳ ಕಾಲ ತನ್ನ ಭುಜದ ಮೇಲೆ ಡಬಲ್ ಬಾಸ್ಕೆಟ್ ನಲ್ಲಿ ಹೊತ್ತು ಬಾಂಗ್ಲಾದೇಶಕ್ಕೆ ತಲುಪಿದ ಘಟನೆ ನಡೆದಿದೆ.

ಆರ್ ಪಿಜಿ ಗ್ರೂಪ್ ಸಮೂಹದ ಪ್ರಸ್ತುತ ಅಧ್ಯಕ್ಷ ಹರ್ಷವರ್ಧನ್ ಗೋಯೆಂಕಾ ಹಂಚಿಕೊಂಡಿರುವ ಫೋಟೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರಿ ವೈರಲ್ ಆಗಿದೆ. ಈ ಫೋಟೋದಲ್ಲಿ, ಆಧುನಿಕ ದಿನದ ಶ್ರವಣ ಕುಮಾರ್ 7 ದಿನಗಳ ಕಾಲ ವೃದ್ಧ ತಾಯಿ ಮತ್ತು ತಂದೆಯನ್ನು ಬುಟ್ಟಿಯಲ್ಲಿ ಕರೆದೊಯ್ಯುತ್ತಿದ್ದಾರೆ, ಏಕೆಂದರೆ ಅವರ ಪೋಷಕರು ಚಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ಹೊತ್ತು ಬಾಂಗ್ಲಾದೇಶಕ್ಕೆ ತೆರಳಿದ ಘಟನೆ ನಡೆದಿದೆ.////

📱 Read Top News, Belgaum News Updates, Belagavi News in Kannada, Latest News on News Belgaum