ಭಾರತದಲ್ಲಿ ದಿನನಿತ್ಯ 80 ಕೊಲೆ, 77 ರೇಪ್ ಕೇಸ್ ದಾಖಲು..! 2020ಯಲ್ಲಿ ಒಟ್ಟು 29,193 ಕೊಲೆ, ಉತ್ತರ ಪ್ರದೇಶದಲ್ಲಿ 3,779 ಹತ್ಯೆ

0
🌐 Belgaum News :

ಮುಂಬೈ: 2020ರಲ್ಲಿ ಭಾರತದಲ್ಲಿ ಪ್ರತಿದಿನ ಸರಾಸರಿ 80 ಕೊಲೆಗಳು, 77 ಅತ್ಯಾಚಾರಗಳು ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ವರದಿ ನೀಡಿದೆ.

2020ಯಲ್ಲಿ ಒಟ್ಟು 29,193 ಕೊಲೆಯಾಗಿದ್ದು, ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಕೊಲೆಯಾಗಿದೆ.
ಉತ್ತರ ಪ್ರದೇಶದಲ್ಲಿ 3,779 ಹತ್ಯೆಗಳು, ಬಿಹಾರದಲ್ಲಿ 3,150, ಮಹಾರಾಷ್ಟ್ರದಲ್ಲಿ 2,163 , ಮಧ್ಯಪ್ರದೇಶ 2,101 ಮತ್ತು ಪಶ್ಚಿಮ ಬಂಗಾಳದಲ್ಲಿ 1,948 ಕೊಲೆಗಳು ನಡೆದಿವೆ.

 

2020ರಲ್ಲಿ ಒಟ್ಟು 28,246 ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ 5,310 ಕೇಸ್ ದಾಖಲಾಗಿದೆ. ಉತ್ತರಪ್ರದೇಶ ಎರಡನೇ ಸ್ಥಾನ, ಮಧ್ಯಪ್ರದೇಶ ಮೂರನೇ ಸ್ಥಾನ ಹಾಗೂ ಮಹಾರಾಷ್ಟ್ರ ನಾಲ್ಕನೇ ಸ್ಥಾನದಲ್ಲಿದೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');