ಗ್ರಾಪಂ.ಸದಸ್ಯೆ ಸೇರಿ ಇಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

0
🌐 Belgaum News :

ಮಡಿಕೇರಿ : ತಾಲ್ಲೂಕಿನ ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ಕಮಲಾ (35) ಹಾಗೂ ಅವರ ಸಂಬಂಧಿ ಮುತ್ತು (50) ಅವರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಮಧ್ಯಾಹ್ನ ಪತ್ತೆಯಾಗಿವೆ. ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

 

ದಬ್ಬಡ್ಕದ ಬಳಿ ಒಂದೇ ಮರದಲ್ಲಿ ಇಬ್ಬರ ಮೃತದೇಹಗಳು ಕಂಡುಬಂದಿವೆ. ಬುಧವಾರ ಸಂಜೆ ಇಬ್ಬರು ನಾಪತ್ತೆಯಾಗಿರುವ ಶಂಕೆಯ ಮೇರೆಗೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ್ದರು. ದಬ್ಬಡ್ಕ ನದಿ ತೀರದಲ್ಲೂ ಶೋಧ ಕಾರ್ಯ ನಡೆಸಲಾಗಿತ್ತು. ಘಟನೆಗೆ ಕಾರಣ ತಿಳಿದುಬಂದಿಲ್ಲ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');