ಬೈಲಹೊಂಗಲ : ಗ್ರಾಪಂ. ಸದಸ್ಯನಿಗೆ ಕಪಾಳ ಮೋಕ್ಷ ಮಾಡಿದ ಪಿಡಿಓ

0
🌐 Belgaum News :

ಬೈಲಹೊಂಗಲ : ಗ್ರಾಮ ಪಂಚಾಯ್ತಿ ಸದಸ್ಯನಿಗೆ ಪಿಡಿಓ ಕ್ಷುಲ್ಲಕ ಕಾರಣಕ್ಕೆ ಕಪಾಳ ಮೋಕ್ಷ ಮಾಡಿರುವ ಘಟನೆ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಪಂಚಾಯ್ತಿಯಲ್ಲಿ ನಡೆದಿದೆ.

ನಾಗನೂರ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಉಣಕಲ್ಲ ಎಂಬವರಿಗೆ ನಾಗನೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವಿನಾಶ ಅಂಗರಗಟ್ಟಿ ಅವರು ಕಪಾಳಮೋಕ್ಷ ಮಾಡಿದ್ದಾರೆ.

ನಾಗನೂರು ಗ್ರಾಮದ ಓರ್ವ ವ್ಯಕ್ತಿಯ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳ ಬಗ್ಗೆ ಪಿಡಿಓ ಅವರನ್ನು ಸದಸ್ಯ ಬಸವರಾಜ ಉಣಕಲ್ಲ ವಿಚಾರಿಸಿದಾಗ ಪಿಡಿಓ ಸದಸ್ಯನಿಗೆ ಯೂಸ್ಲೆಸ್ ಪೆಲೋ ಎಂದು ಬೈದು ಇದನ್ನು ಕೇಳಲು ನೀನ್ಯಾರು ಎಂದು ನಿಂದಿಸಿ ನಿನ್ನ ಕೆಲಸ ನೀನು ಮಾಡು ನನ್ನ ಚೆಂಬರ್‌ಗೆ ಬಂದು ಮಾತನಾಡಬೇಡ ಎಂದು ಹೇಳಿ ಕಪಾಳಮೋಕ್ಷ ಮಾಡಿದ್ದಾನೆ ಎಂದು  ಸದಸ್ಯ ಆರೋಪಿಸಿದ್ದಾರೆ.

ಗ್ರಾಮದ ಅಭಿವೃದ್ಧಿಯನ್ನು ಮಾಡುವಂಥ ಅಧಿಕಾರಿಗಳೇ ಈ ರೀತಿ ದರ್ಪ ತೋರಿಸಿದ್ದಾನೆ ಮುಂದೆ ಜನಸಾಮಾನ್ಯರ ಪಾಡೇನು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.  ಪಿಡಿಓ ಸಹ ಗ್ರಾ.ಪಂ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆಂದು ಪ್ರತಿದೂರು ಸಲ್ಲಿಸಿದ್ದಾರೆ. ಈ ಕುರಿತು ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');