Belagavi News In Kannada | News Belgaum

ನಮ್ಮ ಕಾರ್ಖಾನೆ ರೈತರ ಹಿತ ಕಾಯುವ ಕಾರ್ಖಾನೆ-ಶ್ರೀಮಂತ ಪಾಟೀಲ

🌐 Belgaum News :
ಕೆಂಪವಾಡ ಸಕ್ಕರೆ ಕಾರ್ಖಾನೆಯಿಂದ ಕಲುಷಿತ ನೀರನ್ನು ಹರಿಸಿದ ಪರಿಣಾಮವಾಗಿ ಬೆಳೆ ಹಾನಿ ಉಂಟಾಗಿದೆ ಎಂಬ ಕೆಲವರ ಆರೋಪಕ್ಕೆ ಮಾಜಿ ಜವಳಿ ಖಾತೆ ಸಚೀವ ಹಾಗೂ ಹಾಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.ಜನರಿಂದ ಆಯ್ಕೆ ಆಗಿರುವ ನಾನು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೇನೆ.ನಮ್ಮ ಕಾರ್ಖಾನೆಯಲ್ಲಿ ರೈತರ ಪರ ವಾತಾವರಣ ನಿರ್ಮಿಸಿದ್ದೇವೆ.ಕಬ್ಬಿನ ಬೆಲೆಯನ್ನು ಕೂಡ ಸರ್ಕಾರ ನಿಗದಿ ಮಾಡಿದಷ್ಟು ಕೊಡಲು ಸಿದ್ದತೆ
ಮಾಡಿದ್ದೇವೆ.ಜನಸ್ನೇಹಿ ಕಾರ್ಖಾನೆ ಆಗಿಸಲು ನಮ್ಮ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪ್ರತಿನಿತ್ಯ ಬೆವರು ಸುರಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ.ಎಲ್ಲಿ ಒಳ್ಳೆಯದು ಇರುತ್ತದೆಯೋ ಅದರ ವಿರುದ್ದ ಕೆಟ್ಟವರ ಸಂಚುಗಳು ನಡೆಯುತ್ತವೆ.ಉದ್ದೇಶಪೂರ್ವಕವಾಗಿ ಸಕ್ಕರೆ ಕಾರ್ಖಾನೆಯ ಹೆಸರು ಕೆಡಿಸುವ ಪ್ರಯತ್ನ ಕೂಡ ಮಾಡಲಾಗುತ್ತಿದೆ.ನನ್ನ ಕ್ಷೇತ್ರದ ಜನರಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ.ಸಾವಿರಾರು ಎಕರೆ ಭೂಮಿಗೆ ನೀರಾವರಿ ಯೋಜನೆಯನ್ನು ಸ್ವಂತ ವೆಚ್ಚದಲ್ಲಿ ಮಾಡಿ ರೈತರ ಪರವಾಗಿ ನಿಂತಿದ್ದೇನೆ.ಅವರ ಆಶಿರ್ವಾದದಿಂದ,ಸಚೀವನಾಗಿದ್ದೆ,ಈಗ ಶಾಸಕನಾಗಿ ಮುಂದುವರೆದಿದ್ದೇನೆ.
ಈಗಾಗಲೇ ಕೆಂಪವಾಡ ಸಕ್ಕರೆ ಕಾರ್ಖಾನೆಗೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪರಿಸರಕ್ಕೆ ಯಾವುದೇ ರೀತಿಯ ‌ತೊಂದರೆ ಆಗದಂತೆ ಸಕ್ಕರೆ ಕಾರ್ಖಾನೆಯಲ್ಲಿ 45 ಕೋಟಿ ರೂಪಾಯಿ ವೆಚ್ಚದಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ.ನಮ್ಮ ಕಾರ್ಖಾನೆಯ ನೀರು ಯಾವುದೇ ಜಮೀನಿಗೂ ಹೋಗಿಲ್ಲ.ಮಳೆ ಹೆಚ್ಚಾದ ಸಮಯದಲ್ಲಿ ಕೆಲವೊಮ್ಮೆ ಹೀಗೆ ಆಕಸ್ಮಿಕವಾಗಿ ಆಗಿರಬಹುದು ಆದರೆ ಉದ್ದೇಶಪೂರ್ವಕವಾಗಿ ಯಾವುದೇ ಹಾನಿಯನ್ನು ನಾವು ಉಂಟುಮಾಡಿಲ್ಲ ಎಂದರು./////
📱 Read Top News, Belgaum News Updates, Belagavi News in Kannada, Latest News on News Belgaum