ಗರ್ಭ ಸಂಸ್ಕಾರದಿಂದ ಸಂಸ್ಕಾರಯುತ ಪೀಳಿಗೆ: ಐ.ಆರ್.ಮಠಪತಿ

0
🌐 Belgaum News :

 

ಹಾರೂಗೇರಿ: ಸ್ಥಳೀಯ ವೃಷಭೇಂದ್ರ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸಿ.ಆರ್. ಗುಡಸಿಯರ ಸೊಸೆಯಾದ ಸೌ. ಅಕ್ಷತಾ ನಾಗರಾಜ ಗುಡಸಿ ಅವರ ಸೀಮಂತ ಕಾರ್ಯಕ್ರಮದಲ್ಲಿ ಪಟ್ಟಣದ ಶರಣ ವಿಚಾರ ವಾಹಿನಿಯ ಅಧ್ಯಕ್ಷರಾದ ಶ್ರೀ ಐ.ಆರ್.ಮಠಪತಿಯವರು ಮಾತನಾಡಿ, ಗರ್ಭಸ್ಥ ಶಿಶುವಿಗೆ ಲಿಂಗ ಸಂಸ್ಕಾರ ನೀಡುತ್ತಾ ಅವಿರಳ ಜ್ಞಾನಿ, ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ಶ್ರೇಷ್ಠ ಗ್ರಂಥವಾದ “ಕರಣ ಹಸುಗೆ”ಯನ್ನು ಪ್ರಸ್ತಾಪಿಸುತ್ತಾ ಶರಣ ಪರಂಪರೆಯಂತೆ ಸಂಸ್ಕಾರ ನೀಡಿ ವೈಜ್ಞಾನಿಕ ವಿಶ್ಲೇಷಣೆ ಮಾಡುತ್ತಾ ಗರ್ಭ ಸಂಸ್ಕಾರದಿಂದ ಸಂಸ್ಕಾರಯುತ ಪೀಳಿಗೆಯನ್ನು ಸೃಷ್ಟಿಸಬಹುದು ಎಂಬ ವಿಚಾರವನ್ನು ತಿಳಿಸಿದರಲ್ಲದೆ ಗರ್ಭಿಣಿ ಸ್ತ್ರೀಯರು ಅನುಸರಿಸಬೇಕಾದ ಆಹಾರ ಪದ್ಧತಿಯನ್ನು ತಿಳಿಸಿದರು.

 

ಈ ಸಂದರ್ಭದಲ್ಲಿ ಮಹಿಳಾ ಕದಳಿ ವೇದಿಕೆಯ ಪದಾಧಿಕಾರಿಗಳು ವಚನ ಪಠಣ ಮಾಡಿದರು. ಮಹಿಳಾ ಕದಳಿ ವೇದಿಕೆಯ ಅಧ್ಯಕ್ಷೆ ಸೌ. ಅನುಸೂಯಾ ಮುಳುವಾದ ವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಸಿ.ಆರ್. ಗುಡಸಿಯವರು ಶರಣು ಸಮರ್ಪಣೆಗೈದರು. ಈ ಸಂದರ್ಭದಲ್ಲಿ ಹಿರಿಯರಾದ ಆರ್.ಎಸ್.ಯಲಶೆಟ್ಟಿ, ಎಸ್.ಎಲ್.ಬಾಡಗಿ, ಈರನಗೌಡ ಪಾಟೀಲ, ಅಶೋಕ ಕೊಪ್ಪದ, ಸಂತೋಷ ಅಕ್ಕಿಸಾಗರ, ಬೈಲೂರಿನ ಶರಣರಾದ ಎಮ್.ಆರ್.ಹಟ್ಟಿಹೊಳಿ, ಜನತಾ ಬ್ಯಾಂಕಿನ ಅಧ್ಯಕ್ಷರಾದ ರಾಜಶೇಖರ ಪಾಟೀಲ, ಸಾಹಿತ್ಯ ಶ್ರೀ ಪುರಸ್ಕೃತ ಡಾ.ವ್ಹಿ.ಎಸ್.ಮಾಳಿ ಮುಂತಾದವರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');