ಪತಿ ಅಕ್ರಮ ಸಂಬಂಧಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ

0
🌐 Belgaum News :

ಬೆಳಗಾವಿ: ಪತಿ ಅಕ್ರಮ ಸಂಬಂಧಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಶಹಾಪುರದ ಅಳವಣ ಗಲ್ಲಿಯ ಮುಸ್ಕಾನ್  ಮುಜಾವರ್ (23)  ಮೃತ ಮಹಿಳೆ.  ಕಳೆದ ಎಂಟು ತಿಂಗಳ ಹಿಂದೆ ರೋಹಿಮ್ ಕಾಗ್ಜಿ ಜತೆ ವಿವಾಹವಾಗಿತ್ತು. ಖಂಜರ್​ ಗಲ್ಲಿ‌ ನಿವಾಸಿ ಮುಸ್ಕಾನ್​ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಪತಿ ರೋಹಿಮ್ ಜತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೇ ಆತನಿಗೆ ಮುಸ್ಕಾನ್​ ಜತೆ ಮದುವೆ ಮಾಡಿಸಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ನಿವಾಸಿ ಹಸೀನಾ ವಿರುದ್ಧ ಮೃತ ಮುಸ್ಕಾನ್ ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಯುವಕ ಒಳ್ಳೆಯವನಿದ್ದಾನೆಂದು ನಂಬಿಸಿ ಮದುವೆ ಮಾಡಿಸಿರುವ ಆರೋಪವಿದೆ.

ಮದುವೆ ಬಳಿಕವು ಮುಸ್ಕಾನ್ ಪತಿ ಜತೆ ಹಸೀನಾ ಅಕ್ರಮ‌ ಸಂಬಂಧ ಹೊಂದಿದ್ದಳಂತೆ. ಇದರಿಂದ ಬೇಸತ್ತಿದ್ದ ಮುಸ್ಕಾನ್​ ಸೆ.14ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಸ್ಕಾನ್ ಪತಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಹಸೀನಾಳ ಬಂಧನಕ್ಕೆ ಆಗ್ರಹ ಕೇಳಿಬರುತ್ತಿದೆ.

‘ಜಸ್ಟೀಸ್ ಫಾರ್ ಮುಸ್ಕಾನ್’ ಎಂಬ ಘೋಷವಾಕ್ಯದಡಿ ಖಂಜರ್​ಗಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಶಹಾಪುರ ಪೊಲೀಸರು ಪತಿ ರೋಹಿಮ್ ಕಾಗ್ಜಿ ವಶಕ್ಕೆ ಪಡೆದಿದಿದ್ದಾರೆ. ಅಲ್ಲದೆ, ಮೃತ ಮುಸ್ಕಾನ್ ಅತ್ತೆ, ಮಾವ ಹಾಗೂ ಪತಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಹಸೀನಾಳನ್ನು ಬಂಧಿಸುವಂತೆ ಖಂಜರ್​ಗಲ್ಲಿ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');