ಹುಕ್ಕೇರಿ: ಬಡಕುಂದ್ರಿ ಗ್ರಾಪಂ ಕಾರ್ಯದರ್ಶಿ ವರ್ಗಾವಣೆಗೆ ಒತ್ತಾಯ

0
🌐 Belgaum News :

ಹುಕ್ಕೇರಿ: ತಾಲೂಕಿನ ಬಡಕುಂದ್ರಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ವರ್ಗಾವಣೆಗೆ ಒತ್ತಾಯಿಸಿ ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ತಾಪಂ ಕಚೇರಿ ಬಳಿ ಜಮಾಯಿಸಿದ ಆಡಳಿತ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಕೂಡಲೇ ಕಾರ್ಯದರ್ಶಿಯನ್ನು ವರ್ಗಾಯಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಗ್ರಾಪಂ ಕಾರ್ಯದರ್ಶಿ ಶಂಕರ ಘಾಟಗೆ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಯಾವುದೇ ರೀತಿಯ ಮಾಹಿತಿ ನೀಡುತ್ತಿಲ್ಲ. ಅಲ್ಲದೇ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯ ಬಡಕುಂದ್ರಿ, ಯರಗಟ್ಟಿ, ಗೌಡವಾಡ ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿದ್ದಾನೆ. ತಮ್ಮ ಕೆಲಸಗಳಿಗಾಗಿ ಗ್ರಾಪಂಗೆ ಬರುವ ಜನರಿಗೆ ಇಲ್ಲಸಲ್ಲದ ಹಾರಿಕೆ ಉತ್ತರ ನೀಡಿ ಸಾಗಹಾಕುತ್ತಾನೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಳಿಕ ತಾಪಂ ಪ್ರಭಾರಿ ಇಒ ಉಮೇಶ ಸಿದ್ನಾಳ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷ ಶಿವಶಂಕರ ಮಾನಗಾಂವಿ, ಉಪಾಧ್ಯಕ್ಷೆ ಶ್ರೀದೇವಿ ಮಗದುಮ್ಮ, ಸದಸ್ಯರಾದ ಚಂದ್ರಕಾಂತ ಗಂಡ್ರೋಳಿ, ಮಹಾದೇವಿ ಈರಗಾರ, ವಿಠ್ಠಲ ಪೂಜೇರಿ, ರೇಷ್ಮಾಬಾನು ಜಮಾದಾರ, ಬಸವರಾಜ ಗಸ್ತಿ, ರಾಧಿಕಾ ಘೋಡಗೇರಿ, ಮುಖಂಡರಾದ ಶ್ರವಣಕುಮಾರ ಬೇವಿನಕಟ್ಟಿ, ಕೆಂಪಣ್ಣಾ ಶಿರಹಟ್ಟಿ, ಶಾಂತಾ ಹೆಳವಿ, ಮಹಾದೇವ ಪಂಚಪ್ಪಗೋಳ ಮತ್ತಿತರರು ಉಪಸ್ಥಿತರಿದ್ದರು.//////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');