ಬೆಳಗಾವಿ : ರೈಲಿನಿಂದ ಬಿದ್ದು ಮಹಿಳೆ ಸಾವು

0
🌐 Belgaum News :

ಬೆಳಗಾವಿ : ಅಪರಿಚಿತ ಮಹಿಳೆಯೊಬ್ಬಳು ರೈಲಿನಿಂದ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ-ದೇಸೂರ ರೈಲು ನಿಲ್ದಾಣಗಳ ಮಧ್ಯೆ ನಿನ್ನೆ ನಡೆದಿದ್ದು, ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಾಗಿದೆ.

ಸೆ.19ರಂದು ಸುಮಾರು 65 ವರ್ಷದ ಮಹಿಳೆ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಸಾವಿಗೀಡಾಗಿದ್ದಾರೆ.  ರೈಲ್ವೆ ಹಳಿಗಳ ಪಕ್ಕದ ಜಲ್ಲಿ ಕಲ್ಲುಗಳ ಪಕ್ಕದಲ್ಲಿ ಶವಪತ್ತೆಯಾಗಿದೆ.

ಮೃತ ಮಹಿಳೆ ಚಹರೆ 5.5 ಅಡಿ ಎತ್ತರ, ಸಾದ ಕಪ್ಪು ಮೈಬಣ್ಣ, ನೀಟಾದ ಮೂಗು, ತೆಳ್ಳನೇಯ ಶರೀರ,  ತಲೆಯಲ್ಲಿ  2 ಅಡಿ ಕಪ್ಪು -ಬಿಳಿ ಮಿಶ್ರಿತ ಕೂದಲು ಹೊಂದಿದ್ದಾರೆ. ಬಲಗೈ  ಮುಂಗೈ ಮೇಲೆ  ಹೂವಿನ ಚಿತ್ರವಿರುವ ಹಚ್ಚೆ ಗುರುತು ಇದೆ. ಎರಡು ಕೈಗಳಲ್ಲಿ  ಹಿತ್ತಳೆ ನಮೊನೆಯ ಬಳೆಗಳು ಇವೆ. ಕೇಸರಿ, ಬಳಿ ಬಣ್ಣದ ಸೀರೆ ಧರಿಸಿದ್ದಾರೆ.

ಮೃತ ಮಹಿಳೆ ಸಂಬಂಧಿಕರು ಪತ್ತೆಯಾದ್ರೆ ಬೆಳಗಾವಿ ರೈಲ್ವೇ ಪೊಲೀಸ್ ಠಾಣೆ ; 0831-2405273, ಪಿಎಸ್ ಐ -9480802127 ಸಂಪರ್ಕಿಸಿ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');