ಮೈಸೂರಿನ ರಾಜ ವಂಶಸ್ಥರು ಸಾಕುತ್ತಿದ್ದ ನಾಲ್ಕು ಆನೆ ಗುಜರಾತಿಗೆ ಸ್ಥಳಾಂತರಿಸಲು ನಿರ್ಧಾರ

0
🌐 Belgaum News :

ಮೈಸೂರು: ಆರೋಗ್ಯ ದೃಷ್ಟಿಯಿಂದ   ಮೈಸೂರಿನ ರಾಜ ವಂಶಸ್ಥರು ಸಾಕುತ್ತಿದ್ದ ನಾಲ್ಕು ಆನೆಗಳನ್ನು ಗುಜರಾತಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಅರಮನೆಯ ನಾಲ್ಕು ಆನೆಗಳಾದ ಸೀತಾ, ರೂಬಿ, ಜೆಮಿನಿ ಮತ್ತು ರಾಜೇಶ್ವರಿ ಆನೆಗಳನ್ನ ಗುಜರಾತಿನ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಲು ತೀರ್ಮಾನಿಸಲಾಗಿದೆ.   ರಾಜ ವಂಶಸ್ಥ ಒಡೆಯರ್ ಅವರು ಜೆಮಿನಿ ಸರ್ಕಸ್ ನಿಂದ ಆನೆಗಳನ್ನು ವಶಕ್ಕೆ ಪಡೆದು ಆಶ್ರಯ ನೀಡಿದ್ದರು. ಆರು ಆನೆಗಳ ಫೈಕಿ ನಾಲ್ಕು ಆನೆಗಳು ಗುಜರಾತಿಗೆ ಶಿಫ್ಟ್ ಮಾಡಿ, ಎರಡು ಆನೆಗಳನ್ನ ಮಾತ್ರ ಉಳಿಸಿಕೊಳ್ಳುಲು ನಿರ್ಧರಿಸಲಾಗಿದೆ.

ಇನ್ನು ಸದ್ಯದಲ್ಲೇ ಆನೆಗಳನ್ನು ಸಾಗಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಆನೆ ಸಾಗಿಸುವ ಸಂಬoಧ ಡಿಸಿಎಫ್ ಕೆ ಕಮಲಾ ಕರಿಕಾಳನ್ ಗೆ ಕೇಂದ್ರ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಪತ್ರ ಬರೆದಿದ್ದಾರೆ. ವನ್ಯಜೀವಿ ರಕ್ಷಣಾ ಸಂಸ್ಥೆಯಿಂದಲೂ ಪತ್ರ ರವಾನಿಸಲಾಗಿದ್ದು, ನಾಲ್ಕು ಆನೆಗಳ ಆರೋಗ್ಯ ತಪಾಸಣೆ ನಡೆಸಿದ ಬಳಿಕವೇ ಗುಜರಾತಿಗೆ ಶಿಪ್ಟ್ ಮಾಡಲಾಗುತ್ತದೆ.

ರಾಜವಂಶಸ್ಥರು ಸಾಕುತ್ತಿದ್ದ ಆ ಆನೆಗಳಲ್ಲಿ ಕೆಲವು ಇತ್ತೀಚಿನ ದಿನಗಳಲ್ಲಿ ರಂಪಾಟ ನಡೆಸಿ, ಅರಮನೆಯ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರಲ್ಲಿ ಆತಂಕವನ್ನುಂಟು ಮಾಡುತ್ತಿವೆ.   ಸೋಮವಾರ ಜೆಮಿನಿ ಎಂಬ ಆನೆ ರಂಪಾಟ ನಡೆಸಿತ್ತು. ದಸರಾ ಗಜಪಡೆ ಇದ್ದಕ್ಕೆ ರೊಚ್ಚಿಗೆದ್ದಿದ್ದ ಜೆಮಿನಿ ಆನೆಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಒಂದು ವೇಳೆ ಅವುಗಳು ಇಲ್ಲದಿದ್ದರೆ ಕಷ್ಟವಾಗುತ್ತಿತ್ತು. ಈ ಕಾರಣದಿಂದಲೇ ಅರಮನೆಯ ಆನೆಗಳನ್ನು ಗುಜರಾತ್‌ಗೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');