ಮೈಮೇಲೆ ಚರಂಡಿ ನೀರು ಸುರಿದುಕೊಂಡು ಪ್ರತಿಭಟನೆ

0
🌐 Belgaum News :

ರಾಯಚೂರು: ಸಫಾಯಿ ಕರ್ಮಚಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೈಮೇಲೆ ಚರಂಡಿ ನೀರು ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.

ಸಫಾಯಿ ಕರ್ಮಚಾರಿಗಳ ಗುರುತಿನ ಚೀಟಿಗಾಗಿ ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ತಡೆದರೂ ಚರಂಡಿ ನೀರಿನಲ್ಲಿ ಕುಳಿತು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸಫಾಯಿ ಕರ್ಮಚಾರಿ ಗೀತಾಸಿಂಗ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪೊಲೀಸರ ಎದುರೇ ಮೈ ಮೇಲೆ ಚರಂಡಿ ನೀರು ಸುರಿದುಕೊಂಡಿದ್ದಾರೆ.

ಈ ವೇಳೆ ಸಫಾಯಿ ಕರ್ಮಚಾರಿಗಳ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ ಸತೀಶ್, ಸಫಾಯಿ ಕರ್ಮಚಾರಿಗಳ ತುರ್ತು ಸಭೆ ಕರೆದಿದ್ದಾರೆ. 80 ಜನರಿಗೆ ಗುರುತಿನ ಚೀಟಿ ನೀಡುವ ಕುರಿತು ವಿಶೇಷ ವರದಿ ನೀಡಲು ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ ಶೀಘ್ರ ಗುರುತಿನ ಚೀಟಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸತೀಶ್, ಜಿಲ್ಲೆಯ ಸಫಾಯಿ‌ ಕರ್ಮಚಾರಿಗಳು ತಮಗೆ ಐಡಿ ಕಾರ್ಡ್​ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಆಯೋಗದಿಂದ ಕೊಡುವ ಗುರುತಿನ ಚೀಟಿ ಅವರಿಗೆ ಕೊಟ್ಟರೆ ಅದರಿಂದ ಬಹಳಷ್ಟು ಲಾಭವಿದೆ. ಈಗಾಗಲೇ ಆರು ಜನರಿಗೆ ಸಿಕ್ಕಿದೆ. 80 ಜನರಿಗೆ ಮರುಪರಿಶೀಲನೆ ಆಗಿದೆ. ಸರ್ಕಾರದಿಂದ ಅನುಮೋದನೆ ಬಂದರೆ ಕಾರ್ಡ್​ ಕೊಡುತ್ತೇವೆ. ಇದರ ಜೊತೆಗ ಕಾರ್ಡ್​ನಿಂದ ಸಿಗುವ ಸೌಲಭ್ಯಗಳನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');