ತುಮಕೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ; ಯುವತಿಗೆ ಸಾಥ್ ನೀಡಿದ 7 ಜನ ಕಾಮುಕರ ಬಂಧನ

0
🌐 Belgaum News :

ತುಮಕೂರು:  ಹಳ್ಳಿಯಂತ  ಮನೆ ಕೆಳಗೆ  ಸುರಂಗದಲ್ಲಿ ಸುಸಜ್ಜಿತವಾದ ರೂಮ್ ಮಾಡಿಕೊಂಡು, ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ, ಇಬ್ಬರು ಯುವತಿಯರ ಸಮೇತ 1 ಜನ ಕಾಮುಕರನ್ನು ಮಂಗಳವಾರ ಪೊಲೀಸ್ ರು ಬಂಧಿಸಿದ್ದಾರೆ.

ಇಲ್ಲಿನ  ತುಮಕೂರಿನ ಕ್ಯಾತ್ಸಂದ್ರದಲ್ಲಿ ಬಳಿಯಲ್ಲಿ ಬೃಹತ್  ವೇಶ್ಯಾವಾಟಿಕೆ ಜಾಲವೊಂದನ್ನು ಪೊಲೀಸ್ ರು ಬೇದಿಸಿದ್ದಾರೆ.  ಇತ್ತೀಚೆಗೆ ತುಮಕೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ರಾಶಿ ರಾಶಿ ಕಾಂಡೋಮ್ ಗಳು ಬಿದ್ದಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಮೈಸೂರಿನ ಒಡನಾಡಿ ಸಂಸ್ಥೆಯವರು ಪೊಲೀಸರಿಗೆ ದೂರು ನೀಡಿದ್ದರು.  ಇದೀಗ ಖಚಿತ ಮಾಹಿತಿ ಆಧಾರದ ಮೇಲೆ ತುಮಕೂರಿನ ಕ್ಯಾತ್ಸಂದ್ರದ ಲಾಡ್ಜ್ ಒಂದರ ಮೇಲೆ ಪೊಲೀಸರೊಂದಿಗೆ ದಾಳಿ ನಡೆಸಿದ್ದು, ಲಾಡ್ಜ್ ನಲ್ಲೇ ಸುರಂಗ ಕೊರೆದು ದಂಧೆ ನಡೆಸುತ್ತಿರುವುದು ಬಯಲಾಗಿದೆ.
ಲಾಡ್ಜ್ ನ ರೂಮ್ ಒಂದರ ಬೃಹತ್ ಕನ್ನಡಿ ಕೆಳಭಾಗದಲ್ಲಿ ಸ್ಟ್ಯಾಂಡ್ ಮಾದರಿಯಲ್ಲಿ ಸುರಂಗ ಪತ್ತೆಯಾಗಿದೆ. ಈ ಸ್ಟ್ಯಾಂಡ್ ಬಾಗಿಲು ಒಡೆದಾಗ ಅದರಲ್ಲಿ ಇಬ್ಬರು ಯುವತಿಯರು ಹಾಗೂ ಓರ್ವ ಪುರುಷ ಅಡಗಿ ಕುಳಿತಿರುವುದು ಗೊತ್ತಾಗಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ದಾಳಿ ನಡೆಸುವ ಸುಳಿವು ಗೊತ್ತಾಗುತ್ತಿದ್ದಂತೆ ಲಾಡ್ಜ್ ನ ಸುರಂಗದಲ್ಲಿ ಯುವತಿಯರನ್ನು ಬಚ್ಚಿಡಲಾಗುತ್ತಿತ್ತು ಎನಲಾಗಿದೆ. ಈ ಭಾರಿ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹೈಟೆಕ್ ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ ಇಬ್ಬರು ಯುವತಿಯರು ಸೇರಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');