ಅರ್ಜಿ ಆಹ್ವಾನ

0
🌐 Belgaum News :

ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರಕಾರಿ ವಕೀಲ ಹುದ್ದೆಗೆ ಅರ್ಜಿ ಆಹ್ವಾನ

 

ಬೆಳಗಾವಿ, ಸೆ.21  : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರಕಾರಿ ವಕೀಲರ ಹುದ್ದೆಗೆ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಏಳು ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅರ್ಹ ವಕೀಲರುಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆಸಕ್ತರು ತಮ್ಮ ಹೆಸರು, ವಿದ್ಯಾರ್ಹತೆ, ಜಾತಿ, ವಯಸ್ಸು, ಅನುಭವ ಮುಂತಾದ ವೈಯಕ್ತಿಕ ಪೂರ್ಣ ವಿವರಗಳೊಂದಿಗೆ ಹಾಗೂ ಸಮರ್ಥನೆಗಾಗಿ ಅವಶ್ಯಕ ಪತ್ರಗಳ ದೃಢೀಕೃತ ನಕಲುಗಳನ್ನು ಲಗತ್ತಿಸಿ ಅಕ್ಟೋಬರ್ 11 ರ ಒಳಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಡಳಿತ ಶಾಖೆಗೆ ಅರ್ಜಿಗಳನ್ನು ಸಲ್ಲಿಸಬಹುದು ಮತ್ತು ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಕಾಮಗಾರಿ: ಸೆ.26 ರಿಂದ 28 ರ ವರೆಗೆ ರಸ್ತೆ ಪರಿಶೀಲನೆ

 

ಬೆಳಗಾವಿ, ಸೆ.21  : ಬೆಳಗಾವಿ ಜಿಲ್ಲೆಯ ಗೋಕಾಕ ವಿಭಾಗದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರಸ್ತೆಗಳ ಪರಿವೀಕ್ಷಣೆಗಾಗಿ ರಾಷ್ಟ್ರೀಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ನಿಯೋಜಿತರಾಗಿರುವ ಕೇಂದ್ರ ಗುಣ ನಿಯಂತ್ರಣ ಪರಿವೀಕ್ಷಕರಾದ ಶ್ರೀವಾಸ್ತವ ಅಶೋಕ ಕುಮಾರ್ ಇವರು ಸೆ.26 ರಿಂದ ಸೆ.28 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರಸ್ತೆಗಳನ್ನು ಪರಿಶೀಲಿಸಲಿದ್ದಾರೆ ಎಂದು ಗೋಕಾಕಿನ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿನ್ನೆಲೆ: ವಿವಿಧ ಸ್ಪರ್ಧೆಗಳ ಆಯೋಜನೆ

 

ಬೆಳಗಾವಿ, ಸೆ.21 : “ವಿಶ್ವ ಹಿರಿಯ ನಾಗರಿಕರ ದಿನಾಚರಣೆ”-2021ರ ಅಂಗವಾಗಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ವತಿಯಿಂದ ಹಿರಿಯ ನಾಗರಿಕರಿಗಾಗಿ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸೆ.23 ರಂದು ಗುರುವಾರ ದಿನ ಬೆಳಿಗ್ಗೆ 11:00 ಗಂಟೆಯಿಂದ ಶ್ರೀ ಎಸ್.ಜಿ. ಬಾಳೇಕುಂದ್ರಿ ಇಂಜಿನೀಯರಿಂಗ್ ಕಾಲೇಜು ಮೈದಾನದಲ್ಲಿ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಮಾಹೇಶ್ವರಿ ಅಂಧ ಮಕ್ಕಳ ಶಾಲೆ, ನೆಹರು ನಗರದಲ್ಲಿ ಏರ್ಪಡಿಸಲಾಗುವುದು.

ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ಕಡ್ಡಾಯವಾಗಿ ಕೊವಿಡ್-19ರ 2 ಡೋಸ್ ಲಸಿಕೆ (ವ್ಯಾಕ್ಸಿನ್) ಪಡೆದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಗೋಕಾಕನ ಸಾರ್ವಜನಿಕರು ಎಸ್.ಎಚ್.ಗಿರಡ್ಡಿ ಮೋ.ಸಂ-9449224452 (ಎಂ.ಆರ್.ಡಬ್ಲ್ಯೂ: 9449466394), ರಾಯಬಾಗದÀ ಸಾರ್ವಜನಿಕರು ಎಂ.ಬಿ. ರಾಯಮಾನೆ ಮೋ.ಸಂ-9986313876 (ಎಂ.ಆರ್.ಡಬ್ಲ್ಯೂ.: 7259463207) ಮತ್ತು ಹುಕ್ಕೇರಿ ತಾಲೂಕಿನ ಸಂಕೇಶ್ವರದ ಸಾರ್ವಜನಿಕರು ಬಿ.ಬಿ.ಘೋರ್ಪಡೆ ಮೋ.ಸಂ-8762338985 (ಎಂ.ಆರ್.ಡಬ್ಲ್ಯೂ.: 7406380921) ಅವರನ್ನು ಸಂಪರ್ಕಿಸಬಹುದು.

ಅದೇ ರೀತಿ, ರಾಮದುರ್ಗದ ಸಾರ್ವಜನಿಕರು ಜಿ.ಟಿ.ಅಳಗುಂಡಿ ಮೋ.ಸಂ-6364114042 (ಎಂ.ಆರ್.ಡಬ್ಲ್ಯೂ :8971228359) ಅವರನ್ನು ಅಥಣಿಯ ಸಾರ್ವಜನಿಕರು ಅರುಣ ಖೋತ ಮೋ.ಸಂ–9480052005 (ಎಂ.ಆರ್.ಡಬ್ಲ್ಯೂ: 9980360802) ಸಂಖ್ಯೆಗೆ ಹಾಗೂ ಖಾನಾಪೂರದ ಸಾರ್ವಜನಿಕರು ಎ..ಎಂ.ಪಾಟೀಲ ಮೋ.ಸಂ-9972669671 (ಎಂ.ಆರ್.ಡಬ್ಲ್ಯೂ: 9008216302) ಅವರನ್ನು ಸಂಪರ್ಕಿಸಬಹುದು.

ಬೈಲಹೊಂಗಲ ತಾಲೂಕಿನ ಸಾರ್ವಜನಿಕರು ಬಿ.ಸಿ.ಪಾಟೀಲ ಮೋ.ಸಂ-9449370891 (ಎಂ.ಆರ್.ಡಬ್ಲ್ಯೂ : 9535746989) ಅವರನ್ನು ಸವದತ್ತಿ ತಾಲೂಕಿನ ಸಾರ್ವಜನಿಕರು ಬಿ.ವಿ.ವಾಂಗಿ ಮೋ.ಸಂ-9741353746 (ಎಂ.ಆರ್.ಡಬ್ಲ್ಯೂ: 9901633508) ಹಾಗೂ ಚಿಕ್ಕೋಡಿ ತಾಲೂಕಿನ ಎಂ.ಆರ್. ಡಬ್ಲ್ಯೂ: 9663232983 ಮತ್ತು ಬೆಳಗಾವಿ ಎಂ.ಆರ್.ಡಬ್ಲ್ಯೂ : 8123672033 ಸಂಖ್ಯೆಯನ್ನು ಸಂಪರ್ಕಿಸಬಹುದು.

ಆಯೋಜಿಸಲಾಗಿರುವ ಕ್ರೀಡಾ ಸಾಂಸ್ಕøತಿಕ ಹಾಗೂ ಸ್ಪರ್ಧೆಗಳು:

60-69 ವಯಸ್ಸು, 70-79 ವಯಸ್ಸು ಹಾಗೂ 80 ವರ್ಷ ಮೇಲ್ಪಟ್ಟು ಹೀಗೆ 3 ವಿಭಾಗಗಳಲ್ಲಿ ಪುರುóಷ ಹಾಗೂ ಮಹಿಳೆಯರಿಗೆ ನಡಿಗೆ, ರಿಂಗನ್ನು ಬಕೆಟ್‍ನಲ್ಲಿ ಎಸೆಯುವುದು ಮತ್ತು ಕೇರಂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಅದೇ ರೀತಿ, ಏಕಪಾತ್ರ ಅಭಿನಯ, ಗಾಯನ ಸ್ಪರ್ಧೆ ಹಾಗೂ ಚಿತ್ರಕಲೆ ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಈ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಿರಿಯ ನಾಗರಿಕರಿಗಾಗಿ ಇರುವ ಸ್ವಯಂ-ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ತಾಲೂಕು ನಿವೃತ್ತ ನೌಕರರ ಸಂಘಗಳ ಪದಾಧಿಕಾರಿಗಳು ತಮ್ಮ ತಾಲೂಕಿನ ವ್ಯಾಪ್ತಿಯ ಹಿರಿಯನಾಗರಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಸೆ.27 ರಂದು ” ವಿಶ್ವ ಪ್ರವಾಸೋದ್ಯಮ ದಿನಾಚರಣೆ-2021″

 

ಬೆಳಗಾವಿ, ಸೆ.21 : ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ “ವಿಶ್ವ ಪ್ರವಾಸೋದ್ಯಮ ದಿನಾಚರಣೆ 2021” ರ ಉದ್ಘಾಟನಾ ಕಾರ್ಯಕ್ರಮವು ಸೆ.27 ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಸೊಗಲದಲ್ಲಿ ನೆರವೇರಲಿದೆ.

ಮಲ್ಲೂರ ಗ್ರಾಮ ಪಂಚಾಯಿತಿ, ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಸೊಗಲ ಜಿರ್ಣೋದ್ಧಾರ ಕಮೀಟಿ ಸೊಗಲ, ರೋಟರಿ ಕ್ಲಬ್ ಆಫ್ ಬೆಳಗಾವಿ-ದಕ್ಷಿಣ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೈಲಹೊಂಗಲ, ಹೋಟೆಲ್ ಮಾಲೀಕರ ಸಂಘ, ಬೆಳಗಾವಿ ನೆಕ್ಸಸ್ ಇನ್ಸಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್, ಬೆಳಗಾವಿ ಇವರ ಸಹಯೋಗದೊಂದಿಗೆ ಉದ್ಘಾಟನಾ ಸಮಾರಂಭವು ನಡೆಯಲಿದೆ.

ಬೈಲಹೊಂಗಲ ಕ್ಷೇತ್ರದ ಶಾಸಕರಾದ ಮಹಾಂತೇಶ.ಎಸ್.ಕೌಜಲಗಿ ಉದ್ಘಾಟನೆಯನ್ನು ನೇರವೇರಿಸಲಿದ್ದಾರೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಂ.ಜಿ.ಹಿರೇಮಠ, ಬೈಲಹೊಂಗಲ ಕ್ಷೇತ್ರದ ಉಪವಿಭಾಗಾಧಿಕಾರಿಗಳು ಡಾ. ಶಶಿಧರ ಬಗಲಿ, ಮಲ್ಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿಸಾಬಿ .ಫ. ಸನಿಧಿ, ಶ್ರೀ ಕ್ಷೇತ್ರ ಸೊಗಲ ಜಿರ್ಣೋದ್ಧಾರ ಕಮಿಟಿಯ ಅಧ್ಯಕ್ಷರಾದ ಈರನಗೌಡ .ದೇ. ಸಂಗನ್ನವರ ಹಾಗೂ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಉಮೇಶ ಬಾಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಸೆ.24 ರಂದು ವರ್ಚುವಲ್ ಸಂದರ್ಶನ ಶಿಬಿರ

ಬೆಳಗಾವಿ, ಸೆ.21  : ಜಿಲ್ಲಾ ಉದ್ಯೋಗ ವಿನಿಮಯ ಕೇಂದÀÀ್ರದ ವತಿಯಿಂದ ಪಿಯುಸಿ, ಡಿಪ್ಲೋಮಾ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಶುಕ್ರವಾರ (ಸೆ.24) “ವರ್ಚುವಲ್ ಸಂದರ್ಶನ ಶಿಬಿರ”ವನ್ನು (Virtual walkin interview ಆಯೋಜಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು  https://www.sites.google.com/view/virtualwalkinF   ಈ ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಮೇಲಿನ Grassroots BPO Pvt. Ltd  ವೆಬ್‍ಸೈಟ್ ಮೂಲಕ ನೋಂದಾಯಿತ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಸೆ.23ರ ಸಾಯಂಕಾಲ 6:00 ಗಂಟೆಯವರೆಗೆ ಮೇಲ್ಕಂಡ ವೆಬ್‍ಸೈಟ್ ನೋಂದಣಿಗಾಗಿ ಲಭ್ಯವಿರುತ್ತದೆ.

ನೋಂದಾಯಿತ ಅಭ್ಯರ್ಥಿಗಳಿಗೆ ದಿನಾಂಕ, ಸಮಯ ಹಾಗೂ ವರ್ಚುವಲ್ ಲಿಂಕನ್ನು ಎಸ್.ಎಂ.ಎಸ್/ಕರೆ ಮುಖಾಂತರ ತಿಳಿಸಲಾಗುವುದು. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ.

ಈ ಸಂದರ್ಶನದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಯಾದ Grassroots BPO Pvt. Ltd ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಮೇಲ್ಕಂಡ ವೈಬ್‍ಸೈಟ್‍ಗೆ ಭೇಟಿ ನೀಡಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ಕೋವಿಡ್‍ನಿಂದ ಮೃತರಾದ ಮಾಜಿ ಸೈನಿಕರ ಮಾಹಿತಿ ಸಲ್ಲಿಸಲು ಕೋರಿಕೆ

ಬೆಳಗಾವಿ, ಸೆ.21 : ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮರಣ ಹೊಂದಿದ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಮಾಹಿತಿಯನ್ನು ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ಬೆಳಗಾವಿ ಇವರ ಕಾರ್ಯಾಲಯಕ್ಕೆ ವೈಯಕ್ತಿಕವಾಗಿ ಸಂಪರ್ಕಿಸಿ ದಾಖಲೆಗಳನ್ನು ಸೆ.30 ರ ಒಳಗಾಗಿ ಸಲ್ಲಿಸಬೇಕು ಎಂದು ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಶೌರ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

 

ಬೆಳಗಾವಿ, ಸೆ.21 : ಧೈರ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ 2021-22 ನೇ ಸಾಲಿನ ರಾಷ್ಟ್ರ ಮಟ್ಟದಲ್ಲಿ ಶೌರ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಆಸಕ್ತಿಯುಳ್ಳ ಬಾಲಕ, ಬಾಲಕಿಯರು ಅಕ್ಟೋಬರ್ 15 ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು. ತದನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

Indian Council for Child Welfare New Delhi ಇವರು 6 ರಿಂದ 18 ವರ್ಷದ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಅರ್ಜಿ ನಮೂನೆಗಳನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಾಜಿ ನಗರ ಬೆಳಗಾವಿ ಕಚೇರಿಯಲ್ಲಿ ಹಾಗೂ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸುವವರು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ, ಸಂಖ್ಯೆ 135, 3ನೇ ಅಡ್ಡ ನಂದಿದುರ್ಗ ರಸ್ತೆ ಜಯಮಹಲ್ ವಿಸ್ತರಣೆ, ಬೆಂಗಳೂರು-560046, ದೂರವಾಣಿ ಸಂಖ್ಯೆ 23239539, 23234508, 23232427ಗೆ ಅಥವಾ ಇ-ಮೇಲ್ ವಿಳಾಸ ksccwblr@gmail.com ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕ: ಸೆ.24 ರಂದು ಸಂದರ್ಶನ

ಬೆಳಗಾವಿ, ಸೆ.21 :ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅರೆಕಾಲಿಕ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿತ್ತು.

ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳು ನಗರದ ಚೆನ್ನಮ್ಮ ವೃತ್ತದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ನ ಪ್ರಾಚಾರ್ಯರ ಕೊಠಡಿಯಲ್ಲಿ ಶುಕ್ರವಾರ (ಸೆ.24) ರಂದು ಮುಂಜಾನೆ 11 ಗಂಟೆಗೆ ತಮ್ಮ ಎಲ್ಲ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಸದರಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಖುದ್ದಾಗಿ ಅಂಚೆ ಮೂಲಕ ಮಾಹಿತಿ ರವಾನಿಸಲಾಗಿದೆ. ನಿಗದಿತ ದಿನಾಂಕದಂದು ಸಂದರ್ಶನಕ್ಕೆ ಗೈರು ಹಾಜರಾದರೆ ಅಂತಹವರನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ : 0831-2951386 ಹಾಗೂ ಪ್ರಾಚಾರ್ಯರ ದೂರವಾಣಿ ಸಂಖ್ಯೆ : 9481130811 ಹಾಗೂ ಇ-ಮೇಲ್: 113gಠಿಣ@gmಚಿiಟ.ಛಿom ಕ್ಕೆ ಸಂಪರ್ಕಿಸಬಹುದು ಎಂದು ಸರ್ಕಾರಿ ಪಾಲಿಟೆಕ್ನಿಕ್‍ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ಸಹಾಯ ಧನ

ಬೆಳಗಾವಿ, ಸೆ.21 : 75 ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಮುಖ್ಯ ಮಂತ್ರಿಗಳು ಘೋಷಣೆ ಮಾಡಿರುವ ಅಮೃತ ಸ್ವ-ಸಹಾಯ ಕಿರು ಉದ್ಯಮಿಗಳ ಯೋಜನೆಯು ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳನ್ನು ಕಿರು ಉದ್ಯಮಿಗಳಾಗಿ ಮಾಡುವ ಯೋಜನೆಗೆ 10 ವರ್ಷಗಳಿಂದ ಸಕ್ರೀಯವಾಗಿ ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿರುವ ಗ್ರಾಮ ಪಂಚಾಯತಿ ಮಟ್ಟದ ಫೆಡರೇಶನ್ (ಜಿಪಿಎಲ್‍ಎಫ್)ನಲ್ಲಿ ನೊಂದಣಿಯಾಗಿರುವ ಹಾಗೂ ಸಮುದಾಯ ಬಂಡವಾಳ ಪಡೆದಿರುವ ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳಿಗೆ ತಲಾ ರೂ.1.00 ಲಕ್ಷದಂತೆ, ಬೀಜಧನವನ್ನು ನೀಡುವ ಯೋಜನೆಯಾಗಿರುತ್ತದೆ.

ಸದರಿ ಅರ್ಹ ಗುಂಪುಗಳನ್ನು ಗ್ರಾಮ ಪಂಚಾಯತ ಮಟ್ಟದ ಫೆಡರೇಶನ್ (ಜಿಪಿಎಲ್‍ಎಫ್) ಮೂಲಕ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಆಯಾ ಗ್ರಾಮ ಪಂಚಾಯತಗಳನ್ನು ಮತ್ತು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');