ಪ್ರೊ ಸಿಂಥೆಟಿಕ್ ಎಂಜಿನ್ ಆಯಿಲ್ ಬಿಡುಗಡೆ

0
🌐 Belgaum News :

 

ಬೆಳಗಾವಿ : ಭಾರತ ಎಕ್ಸಾನ್ ಮೊಬಿಲ್ ಕಾರ್ಪೊರೇಷನ್ ನ ಸಂಪೂರ್ಣ ಮಾಲೀಕತ್ವದ ಅಂಗ ಸಂಸ್ಥೆಯಾದ ಎಕ್ಸಾನ್ ಮೊಬಿಲ್ ಲ್ಯೂಬ್ರಿಕೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮೊಬಿಲ್ ಸೂಪರ್ ಟಿಎಂ ಆಲ್-ಇನ್-ಒನ್ ಪ್ರೊಟೆಕ್ಷನ್ ನೀಡುವ ಎಸ್‍ಯುವಿ ಪ್ರೊ ಸಿಂಥೆಟಿಕ್ ಎಂಜಿನ್ ಆಯಿಲ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಸ್ಪೋರ್ಟ್ ಯುಟಿಲಿಟಿ ವಾಹನಗಳ ಮಾರಾಟವು ಬೆಳವಣಿಗೆ ಕಾಣುತ್ತಿರುವ ಸಂದರ್ಭದಲ್ಲಿ ಇದು ಬಿಡುಗಡೆಯಾಗುತ್ತಿದ್ದು, ನೂತನ ಪ್ರಯಾಣಿಕರ ವಾಹನ ಮಾರಾಟದ ವನ್ ಥರ್ಡ್ ಭಾಗವನ್ನು ಸ್ಪೋರ್ಟ್ ಯುಟಿಲಿಟಿ ವಾಹನಗಳು ಹೊಂದಿದೆ.

ಮಾತನಾಡಿದ ಎಕ್ಸಾನ್ ಮೊಬಿಲ್ ಲ್ಯೂಬ್ರಿಕೆಂಟ್ಸ್ ಪ್ರೈವೇಟ್ ಲಿಮಿಟೆಡ್‍ನ ಚೀಫ್ ಎಕ್ಸಿಕ್ಯುಟೀವ್ ಆಫಿಸರ್ (ಸಿಇಒ) ದೀಪಂಕರ್ ಬ್ಯಾನರ್ಜಿ ಅವರು, ಸಂಚಾರ ದಟ್ಟಣೆಯಲ್ಲೂ ಸುಲಭವಾಗಿ ಕುಶಲತೆಯಿಂದ ವಾಹನ ನಿರ್ವಹಿಸಲು, ಕೆಟ್ಟ ಹವಾಮಾನ ಪರಿಸ್ಥಿತಿಗಳನ್ನು ನಿಭಾಯಿಸಲು ಮತ್ತು ರಫ್ ಭೂಪ್ರದೇಶದ ಮೇಲೆ ವಾಹನ ಚಲಾಯಿಸಲು ಜನರು ಎಸ್‍ಯುವಿಗಳ ಕಡೆಗೆ ತಿರುಗಿ ನೋಡುತ್ತಿದ್ದಾರೆ. ಎಸ್ ಯುವಿ ಮಾಲೀಕರ ಅಗತ್ಯಗಳನ್ನು ಪೂರೈಸಲು, ನಾವು ಮೊಬಿಲ್ ಸೂಪರ್ ಎಸ್ ಯುವಿ ಪ್ರೊ ಅನ್ನು ಪರಿಚಯಿಸುತ್ತಿದ್ದೇವೆ, ಇದನ್ನು ಎಸ್ ಯುವಿ ಎಂಜಿನ್‍ಗಳಿಗಾಗಿ ಸಕ್ರಿಯ ಪದಾರ್ಥಗಳೊಂದಿಗೆ ವಿಶೇಷವಾಗಿ ರೂಪಿಸಲಾಗಿದೆ ಎಂದರು.

ಮೊಬಿಲ್ 1 ರ ತಯಾರಕರಿಂದ ಬಂದಿರುವ ಮೊಬಿಲ್ ಸೂಪರ್ ಎಸ್ ಯುವಿ ಪ್ರೊ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಗಳೆರಡಕ್ಕೂ ಇದು ಸೂಕ್ತವಾಗಿದೆ ಮತ್ತು ಅಮೇರಿಕನ್ ಪೆಟ್ರೋಲಿಯಂ ಇನ್ಸ್ಟಿಟ್ಯೂಟ್ ಎಸ್ ಎನ್ ಪ್ಲಸ್ ಮತ್ತು ಯುರೋಪಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ 4 ಸ್ಟ್ಯಾಂಡಡ್ರ್ಸ್ ಅನ್ನು ಇದು ತಲುಪಿದೆ. ಎಂಜಿನ್ ಆಯಿಲ್ ಭಾರತದ ಪ್ರಮುಖ ವಾಹನ ತಯಾರಕ ಎಸ್ ಯುವಿ ಮಾದರಿಗಳಲ್ಲಿ ಬಳಸಲು ಸೂಕ್ತವಾಗಿದೆ.

ಮೊಬಿಲ್ ಸೂಪರ್ ಎಸ್ ಯುವಿ ಪ್ರೊ 1, 3.5, ಮತ್ತು 5 ಲೀಟರ್ ಪ್ಯಾಕ್ ಗಳಲ್ಲಿ ಮೊಬಿಲ್ ಅಧಿಕೃತ ರೀಟೈಲ್ ಸ್ಟೋರ್ ಗಳು, ಮೊಬಿಲ್ ಕಾರ್ ಕೇರ್ ಸ್ಟೋರ್ ಗಳು ಮತ್ತು ಅಮೆಜಾನ್ ನಲ್ಲಿ ಲಭ್ಯವಿದೆ.///

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');