Belagavi News In Kannada | News Belgaum

ಸ್ಮಾರ್ಟ ಸಿಟಿಯ ಕನಸು ನನಸಾಗಲು ನೂರೆಂಟು ವಿಘ್ನ…

🌐 Belgaum News :

 

ಬೆಳಗಾವಿ:  ನಗರವನ್ನು ಸ್ಮಾರ್ಟ ಸಿಟಿಯನ್ನಾಗಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದ ಬಳಿಕ ಅಪಾರ ಪ್ರಮಾಣದಲ್ಲಿ ಅನುದಾನ ಹರಿದುಬಂದರೂ ಕೂಡ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನುವ ಪರಿಸ್ಥಿತಿ ಬೆಳಗಾವಿ ಜನರದ್ದಾಗಿದೆ.ರಸ್ತೆಗಳಲ್ಲಿ ಅಲ್ಲಲ್ಲಿ ಕಂಡು ಬರುತ್ತಿರುವ ತಗ್ಗುಗಳು,ತಪ್ಪದ ಸಂಚಾರ ದಟ್ಟಣೆ,ಬಾಕಿ ಉಳಿದ ಪ್ಲೈ ಓವರ್ ನಿರ್ಮಾಣ ಕಾಮಾಗಾರಿ,ಅಲ್ಲಲ್ಲಿ ರಸ್ತೆಯ ಹೊರಭಾಗಕ್ಕೆ ಚಾಚಿಕೊಂಡಿರುವ ಕೇಬಲ್ ಗಳು ಮತ್ತು ಈಗಲೋ ಆಗಲೋ ಗಾಳಿ ಬೀಸಿದರೆ ಬೀಳುವ ಸ್ಥಿತಿಯಲ್ಲಿ ಇರುವ ತಂಗುದಾಣಗಳು ಸ್ಮಾರ್ಟ ಸಿಟಿ ಆಗಬೇಕಿದ್ದ ಬೆಳಗಾವಿ ಯಾಕೋ ಹಿಂದೆ ಉಳಿಯುತ್ತಲೆ ಇದೆ.ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಕಾಂಟ್ರಾಕ್ಟ್ ರುಗಳ ವಿಳಂಬನೀತಿ ಇಂದಾಗಿ ಸಕಾಲಕ್ಕೆ ಆಗಬೇಕಿದ್ದ ಕೆಲಸಗಳು ಹಿಂದೆ ಉಳಿಯುತ್ತಿದ್ದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ಪ್ರಗತಿ ಕಂಡಷ್ಟು ಬೆಳಗಾವಿ ಯಲ್ಲಿ ಕೆಲಸಗಳು ಆಗಿಲ್ಲ ಅನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಗುತ್ತಿಗೆದಾರರು ಪರ್ಯಾಯ ಗುತ್ತಿಗೆ ನೀಡಿರುವದರಿಂದ ಕೆಲಸಗಳು ನಿಧಾನಗತಿಯಲ್ಲಿ ಸಾಗಿದ್ದು ಕಾಟಾಚಾರದ ಕಾಮಗಾರಿ ಮಾಡಲಾಗುತ್ತಿದ್ದು ಕಳಪೆ ಗುಣಮಟ್ಟ ಹೊಂದಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.ಹಲವು ಸ್ಥಳಗಳಲ್ಲಿ ಅಗತ್ಯ ಇರುವ ಕಡೆ ಲ್ಯಾಂಪ್ ಅಳವಡಿಸದೆ ಇರುವದು,ಸುಸಜ್ಜಿತ ಸಿಟಿ ಬಸ್ ನಿಲ್ದಣಾಗಳು ಇಲ್ಲದೆ ಇರುವದು,ಅಲ್ಲಲ್ಲಿ ಪುಟ್ ಪಾತ್ ಒಡೆದು ತಗ್ಗು ಗುಂಡಿಗಳಲ್ಲಿ ಕಸ ತುಂಬಿರುವದು ನೋಡಿದರೆ ಕಾಮಗಾರಿಗೆ ಬಂದಿರುವ ಹಣದ ದುರುಪಯೋಗ ಆಗುತ್ತಿರುವ ಎಲ್ಲ ಲಕ್ಷ್ಮಣ ಗಳು ಕಂಡು ಬರುತ್ತಿದ್ದು ಕಳಪೆ ಕಾಮಾಗಾರಿ ಬಗ್ಗೆ ಪ್ರಶ್ನೆ ಮಾಡಬೇಕಾದ ಮತ್ತು ಅಭಿವೃದ್ಧಿ ಕೆಲಸಗಳು ತ್ವರಿತವಾಗಿ ನಡೆಯುವಂತೆ ಮಾಡಬೇಕಿದ್ದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಂಡು ಬರುತ್ತಿದೆ.

ಕೇಂದ್ರ ಸರ್ಕಾರವು 2015 ರಲ್ಲಿ ಸ್ಮಾರ್ಟ ಸಿಟಿ ಯೋಜನೆಯನ್ನು ಘೋಷಿಸಿ, ಇದರಲ್ಲಿ 100 ನಗರಗಳನ್ನು ಸ್ಪರ್ಧಾತ್ಮಕವಾಗಿ ಆಯ್ಕೆ ಮಾಡಿತು. ಕರ್ನಾಟಕ ರಾಜ್ಯದಲ್ಲಿ ಒಟ್ಟು 7 ನಗರಗಳು ಆಯ್ಕೆಯಾಗಿದ್ದು ಮೊದಲ ಹಂತದಲ್ಲಿ ಬೆಳಗಾವಿ ನಗರ ಆಯ್ಕೆಯಾಗಿದೆ.
ಈ ಯೋಜನೆಯನ್ನು, ಏರಿಯಾ ಬೇಸ್ಡ್ (ಪ್ರದೇಶಆಧಾರಿತ) ಅಭಿವೃದ್ಧಿ ಹಾಗೂ ಪ್ಯಾನ್ ಸಿಟಿ ಅಭಿವೃದ್ಧಿ
ಎಂದು ಎರಡು ಭಾಗಗಳಾಗಿ ವಿಂಗಡಿಸಿ ಸ್ಮಾರ್ಟ್ ಸಿಟಿ ಪ್ರಸ್ತಾವನೆಯನ್ನು ತಯಾರಿಸಲಾಗಿದೆ.
ಸಂಪೂರ್ಣ ವಿವರ ಹೀಗಿದೆ:
ಸ್ಮಾರ್ಟ ಸಿಟಿ ಫಂಡ್- 1 ಸಾವಿರ ಕೋಟಿ ರೂ.
ಕೇಂದ್ರ ಸರ್ಕಾರದ ಪಾಲು – ಶೇ 50
ರಾಜ್ಯ ಸರ್ಕಾರದ ಪಾಲು- ಶೇ 50
ಒಟ್ಟು ಪಿಪಿಪಿ ಯೋಜನೆಗಳು ರೂ.395.61 ಕೋಟಿ
ವಿವಿಧ ಇಲಾಖೆಗಳ ಯೋಜನೆಗಳೊಂದಿಗೆ ಕನ್ವರ್ಜನ್ಸ್ ರೂ.1434.39 ಕೋಟಿ.
ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿಒಟ್ಟು ರೂ.568 ಕೋಟಿ ಅನುದಾನದಡಿಯಲ್ಲಿ ಕೈಗೊಂಡಿರುವ ಈ ಕೆಳಗಿನ
ಕಾಮಗಾರಿಗಳು ಪ್ರಗತಿಯಲ್ಲಿವೆ:
ಆಜ್ಞೆ ಮತ್ತು ನಿಯಂತ್ರಣಾಕೇಂದ್ರ – ರೂ. 80.15 ಕೋಟಿ.
ವ್ಯಾಕ್ಸಿನ್‌ಡಿಪೋದಲ್ಲಿ ಪಾರಂಪರಿಕ(ಹೆರಿಟೇಜ್ ಪಾರ್ಕ) ಉದ್ಯಾನ ಅಭಿವೃದ್ಧಿಹಂತ -1 & 2 – ರೂ.22.82 ಕೋಟಿ.
ನಗರದ ಸುಮಾರು41.45 ಕಿ.ಮಿಗಳಷ್ಟು ಮುಖ್ಯ ರಸ್ತೆಗಳನ್ನು  ಸ್ಮಾರ್ಟ ರಸ್ತೆಗಳಾಗಿ ನಿರ್ಮಿಸುವುದು (ಕಾಂಕ್ರಿಟ್‌ರಸ್ತೆ,ಚರಂಡಿ, ಪಾದಚಾರಿರಸ್ತೆ, ಸೈಕಲ್‌ಟ್ಯ್ರಾಕ್ (ಪಥ) ಅಂಡರ್‌ಗ್ರೌಂಡ್, ಯುಟಿಲಿಟಿಡಕ್ಟ್ಸ್ ಅಳವಡಿಸುವುದು, ಜಂಕ್ಷನ್‌ಅಭಿವೃದ್ಧಿಇತ್ಯಾದಿ) ರೂ.281.98 ಕೋಟಿ.
ಕಲಾಮಂದಿರ ಟಿಳಕವಾಡಿಯಲ್ಲಿ ಬಹು ಉದ್ದೇಶಿತ ವಾಣಿಜ್ಯ ಸಂಕೀರ್ಣ ನಿರ್ಮಾಣ ರೂ. 47.5 ಕೋಟಿ.
ಬೆಳಗಾವಿ ನಗರದಲ್ಲಿ ಒಟ್ಟು 182 ಕಿ.ಮೀ ಉದ್ದಕ್ಕೆಅಂಡರ್‌ಗ್ರೌಂಡ್ ಎಲ್.ಟಿ. ವಿದ್ಯುತ್‌ಕೇಬಲ್ ಮತ್ತು ಅಲಂಕೃತ ಬೀದಿ ದೀಪ  ಅಳವಡಿಸುವುದು ರೂ.23 ಕೋಟಿ.
ಉದ್ಯಾನಗಳ ಅಭಿವೃದ್ಧಿ – ರೂ.3.91 ಕೋಟಿ
ಸಿಟಿ ಬಸ್ ನಿಲ್ದಾಣ ಹಾಗೂ ರೇಲ್ವೆ ಸ್ಟೇಶನ್ ಬಸ್ ನಿಲ್ದಾಣ ನಿರ್ಮಾಣ ಹಾಗೂ ಬಸ್ ಶೆಲ್ಟರ್‌ಗಳ ನಿರ್ಮಾಣ ರೂ. 44.50 ಕೋಟಿ.
ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ ನಿರ್ಮಾಣ – ರೂ.2.75 ಕೋಟಿ.
ಬೆಳಗಾವಿ ವೈದ್ಯ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್)ಯಲ್ಲಿ ಟ್ರಾಮಾ ಸೆಂಟರ್ ನಿರ್ಮಿಸುವುದು- ರೂ. 3 ಕೋಟಿ.
ಮಳೆ ನೀರು ಕೊಯ್ಲು ಘಟಕ ಸ್ಥಾಪನೆ. ರೂ. 0.10 ಕೋಟಿ.
ಸ್ಮಾರ್ಟ್‌ಕ್ಲಾಸ್‌ರೂಂ (1ನೇ ತರಗತಿಯಿಂದ 10 ನೇ ತರಗತಿಯವರೆಗೆ 4 ಮಾಧ್ಯಮಗಳ ಸ್ವಯಂಚಾಲಿತ ವಿದ್ಯುನ್ಮಾನ ಕಲಿಕಾ ಉಪಕರಣ) ರೂ. 5.03 ಕೋಟಿ.
ಮಹಾತ್ಮಾ ಫುಲೆ ಉದ್ಯಾನವನ ನಿರ್ಮಾಣ ರೂ. 2.85 ಕೋಟಿ.
ಟ್ರಾಫಿಕ್ ಸಿಗ್ನಲ್ ಹಾಗೂ ಡಿಜಿಟಲ್ ಬೋರ್ಡ್ ಅಳವಡಿಸುವುದು ರೂ.3.94 ಕೋಟಿ.
ಕಣಬರ್ಗಿ ಕೆರೆ ಅಭಿವೃದ್ಧಿ- ರೂ. 5 ಕೋಟಿ.
ಜಾನುವಾರುಗಳ ಪುನರ್ವಸತಿಕೇಂದ್ರ – ರೂ.0.74 ಕೋಟಿ
ಬ್ಯಾಟರಿಚಾಲಿತ ಆಟೋರಿಕ್ಷಾ ಒದಗಿಸುವುದು – ರೂ.1.05 ಕೋಟಿ.
—————–
232 ಕೋಟಿ ರೂ. ಕಾಮಗಾರಿ ಟೆಂಡ್‌ರ ಹಂತದಲ್ಲಿವೆ:
ವ್ಯಾಕ್ಸಿನ್‌ಡಿಪೋದಲ್ಲಿ ಪಾರಂಪರಿಕಉದ್ಯಾನ (ಹೆರಿಟೇಜ್ ಪಾರ್ಕ) ಅಭಿವೃದ್ಧಿ ಹಂತ -3 – ರೂ.3.18 ಕೋಟಿ.
ನಗರದ ಸುಮಾರು29.51 ಕಿ.ಮಿಗಳಷ್ಟು ಮುಖ್ಯ ರಸ್ತೆಗಳನ್ನು ಸ್ಮಾರ್ಟ ರಸ್ತೆಗಳಾಗಿ ನಿರ್ಮಿಸುವುದು (ಕಾಂಕ್ರಿಟ್‌ರಸ್ತೆ, ಚರಂಡಿ, ಪಾದಚಾರಿರಸ್ತೆ, ಸೈಕಲ್‌ಟ್ಯ್ರಾಕ್ (ಪಥ) ಅಂಡರ್‌ಗ್ರೌಂಡ್, ಯುಟಿಲಿಟಿಡಕ್ಟ್ಸ್
ಅಳವಡಿಸುವುದು, ಜಂಕ್ಷನ್‌ಅಭಿವೃದ್ಧಿಇತ್ಯಾದಿ ) – ರೂ. 162.72 ಕೋಟಿ.
ಒಟ್ಟು 183 ಕಿ.ಮೀ ಉದ್ದಕ್ಕೆಅಂಡರ್‌ಗ್ರೌಂಡ್ ಎಲ್.ಟಿ ವಿದ್ಯುತ್ ಕೇಬಲ್ ಮತ್ತುಅಲಂಕೃತ ಬೀದಿ ದೀಪ
ಅಳವಡಿಸುವುದು – ರೂ 55.88 ಕೋಟಿ.
ಉದ್ಯಾನಗಳ ಅಭಿವೃದ್ಧಿ – ರೂ. 5.29 ಕೋಟಿ.
ವಡಗಾಂವದಲ್ಲಿ 10 ಹಾಸಿಗೆಯುಳ್ಳ ಹೆರಿಗೆಆಸ್ಪತ್ರೆ ನಿರ್ಮಾಣ – ರೂ.2.25 ಕೋಟಿ.
ಮಳೆ ನೀರು ಕೊಯ್ಲು ಘಟಕ ಸ್ಥಾಪನೆ. ರೂ. 0.90 ಕೋಟಿ.
ಕೋಟೆಕೆರೆ ಅಭಿವೃದ್ಧಿ- ರೂ.8 ಕೋಟಿ.
ರಾಷ್ಟ್ರೀಯ ಹೆದ್ದಾರಿ ನಂ.4 ರಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಮೇಲ್ಸೇತುವೆ (ಫ್ಲೈಓವರ್) ನಿರ್ಮಾಣ ರೂ.100 ಕೋಟಿ.
ಮಹಾಂತೇಶ ನಗರದಲ್ಲಿಆರ್ಟ್‌ಗ್ಯಾಲರಿ ಮತ್ತು ಸೈನ್ಸ್ ಪಾರ್ಕ್ ನಿರ್ಮಿಸುವುದು- ರೂ.14 ಕೋಟಿ.
ಜಾನುವಾರುಗಳ ಪುನರ್ವಸತಿಕೇಂದ್ರ – ರೂ 0.26 ಕೋಟಿ.
—————
ಅ) ವಿಸ್ತೃತಯೋಜನಾ ವರದಿ ತಯಾರಿಕೆ ಹಂತದಲ್ಲಿ ರೂ.೧೭೩.೭೭ ಕೋಟಿಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
೧) ನಗರ ಪ್ರದೇಶದಲ್ಲಿ ಸಸಿ ನೆಡುವುದು- ರೂ.೩.೨೯ ಕೋಟಿ
೨) ಅಂಡರ್‌ಗ್ರೌಂಡ್‌ಎಲ್ ಟಿ ವಿದ್ಯುತ್ ಕೇಬಲ್ ಹಾಗೂ ಅಲಂಕೃತ
ಬೀದಿ ದೀಪ ಅಳವಡಿಸುವುದು – ರೂ.೧೨.೫೮ಕೋಟಿ
೩) ಕೋಟೆ ಹಾಗೂ ಕಂದಕಅಭಿವೃದ್ಧಿ- ರೂ.೨೫.೦೦ ಕೋಟಿ
೪) ಮಹಾಂತೇಶ ನಗರದಲ್ಲಿಆರ್ಟ್‌ಗ್ಯಾಲರಿ ಹಾಗೂ ವಿಜ್ಞಾನಉದ್ಯಾನವನ (ಸೈನ್ಸ್ ಪಾರ್ಕ) ನಿರ್ಮಾಣ ರೂ.೧೪.೦೦ ಕೋಟಿ
೫) ಮಳೆ ನೀರುಕೊಯ್ಲುಘಟಕ- ರೂ.೦.೯೦ ಕೋಟಿ
೬) ಕೋಟೆಕೆರೆ ಅಭಿವೃದ್ಧಿ- ರೂ.೮.೦೦ ಕೋಟಿ
೭) ರಾಷ್ಟ್ರೀಯ ಹೆದ್ದಾರಿ ನಂ.೪ ರಿಂದಕೇಂದ್ರ ಬಸ್ ನಿಲ್ದಾಣದವರೆಗೆ ಮೇಲ್ಸೇತುವೆ (ಫ್ಲೈಓವರ್) ನಿರ್ಮಾಣ- ರೂ. ೧೦೦.೦೦ ಕೋಟಿ
೮) ವಾಹನ ರಹಿತ ಸಾರಿಗೆ ಹಾಗೂ ಬೀದಿ ವ್ಯಾಪಾರ ವಲಯಅಭಿವೃದ್ಧಿರೂ.೧೦  ಕೋಟಿ
——————-
ಆ) ಪರಿಕಲ್ಪನಾ ಹಂತದಲ್ಲಿರುವ ಕಾಮಗಾರಿಗಳು
೧) ಐಸಿಟಿ ಹಂತ-೨ ರೂ.೧೭.೦೮ ಕೋಟಿ
ಇ) ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿರೂ.೨೮೪.೦೦ ಕೋಟಿಗಳಲ್ಲಿ ಕೈಗೆತ್ತಿಕೊಳ್ಳಲಾಗುವ ಕಾಮಗಾರಿಗಳು
೧) ಧರ್ಮನಾಥ ಭವನ ಹತ್ತಿರ ಪಾಲಿಕೆಯಲ್ಲಿ ಖುಲ್ಲಾ ಜಾಗದಲ್ಲಿ – (ಪಿಪಿಪಿ ಮಾದರಿಯಲ್ಲಿ)  ರೂ.೧೪೮ ಕೋಟಿ
೨) ಮಹಾಂತೇಶ ನಗರದ ಬಾಲಭವನ ಹಿಂದುಗಡೆ ಪಾಲಿಕೆಯ ಖುಲ್ಲಾಜಾಗೆಯಲ್ಲಿ – (ಪಿಪಿಪಿ ಮಾದರಿಯಲ್ಲಿ) ರೂ ೨೯.೦೦ ಕೋಟಿ
೩) ಟಿಳಕವಾಡಿ ೧ನೇ ಗೇಟ್ ಹತ್ತಿರ ಪಾಲಿಕೆಯಲ್ಲಿಖುಲ್ಲಾಜಾಗೆಯಲ್ಲಿ- (ಪಿಪಿಪಿ ಮಾದರಿಯಲ್ಲಿ) ರೂ ೪೩ ಕೋಟಿ
೪) ಇಂಧನ ದಕ್ಷತೆಗಾಗಿ ಬೀದಿ ದೀಪಗಳಿಗೆ ಎಲ್,ಇ.ಡಿ ಬಲ್ಬ್ ಅಳವಡಿಸುವುದು ರೂ ೬೪ ಕೋಟಿ

📱 Read Top News, Belgaum News Updates, Belagavi News in Kannada, Latest News on News Belgaum