Belagavi News In Kannada | News Belgaum

ಪತ್ನಿಯ ನಡೆತ ಮೇಲೆ ಅನುಮಾನಗೊಂಡ ವ್ಯಕ್ತಿ ಮಕ್ಕಳಿಬ್ಬರನ್ನು ಕೊಲೆಗೈದು, ತಾನು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ

🌐 Belgaum News :

ಚೆನ್ನೈ :  ಪತ್ನಿಯ ನಡೆತ ಮೇಲೆ ಅನುಮಾನಗೊಂಡ ವ್ಯಕ್ತಿ ಮಕ್ಕಳಿಬ್ಬರನ್ನು ಕೊಲೆಗೈದು, ತಾನು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.

ಮುರುಗನ್ (33 ) ಮಕ್ಕಳನ್ನ ಕೊಂದ ಪಾಪಿ ತಂದೆ. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಪತಿ ಅನುಮಾನಿಸುತ್ತಿದ್ದನು. ತನ್ನ 9 ಮತ್ತು 5 ವರ್ಷದ ಮಕ್ಕಳನ್ನ ಮರಕ್ಕೆ ನೇಣು ಹಾಕಿದ್ದಾನೆ. ಬಳಿಕ ವಿಡಿಯೋ ಮಾಡಿ ಕುಟುಂಬಸ್ಥರಿಗೆ ಮುರುಗೇಶ್ವರಿಗೆ  ಕಳುಹಿಸಿದ್ದಾನೆ ಎನ್ನಲಾಗಿದೆ.

ಏನಿದು ಘಟನೆ ?

ಮುರುಗನ್ ಕಳೆದ 13 ವರ್ಷಗಳಿಂದ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದನು.ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಅವಘಡ ಸಂಭವಿಸಿದ್ದರಿಂದ 10 ದಿನಗಳಿಂದ ಮನೆಯಲ್ಲಿ ಇದ್ದನು. ಈ ಸಮಯದಲ್ಲಿ ಪತ್ನಿ ಬರೀ ಪೋನಿನಲ್ಲಿಯೇ ಬೇರೆಯವರ ಜೊತೆ ಮಾತನಾಡುತ್ತಿದ್ದಳು. ಮುರುಗನ್ ಕೋಪಗೊಂಡು ಪತ್ನಿಗೆ ವಾರ್ನ್ ಕೂಡಾ ಮಾಡಿದ್ದನು.

ಭಾನುವಾರ ಸಂಜೆ ಮುರುಗನ್ ಪತ್ನಿಯ ಮೊಬೈಲ್ ತೆಗೆದುಕೊಂಡು ಮಕ್ಕಳ ಜೊತೆ ಸಮೀಪದ ಅಂಗಡಿಗೆ ಹೋಗಿದ್ದಾನೆ. ಕೆಲ ಸಮಯದ ಬಳಿಕ ನಿರ್ಜನ ಪ್ರದೇಶಕ್ಕೆ ತೆರಳಿ ಮಕ್ಕಳಿಬ್ಬರನ್ನು ಮರಕ್ಕೆ ನೇಣು ಹಾಕಿ ವೀಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ ‘ ನಿಮಗೆ ಇದೇ ಬೇಕಿತ್ತು ಅಲ್ವಾ…? ನೀವು ನಮ್ಮನ್ನು ಕೊಲ್ಲಲು ಪ್ಲಾನ್ ಮಾಡಿದ್ದೀರಿ  ಅಂತ ನನಗೆ ಗೊತ್ತು. ಈಗ ನೋಡಿ ನಾವೇ ಸಾಯುತ್ತಿದ್ದೇವೆ ಎಂದು ಮುರುಗನ್ ಹೇಳಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇನ್ನೂ ಮುರುಗನ್ ವೀಡಿಯೋ ನೋಡುತ್ತಿದ್ದಂತೆ ಆತಂಕಗೊಂಡ ಪತ್ನಿ ಮರುಗೇಶ್ವರಿ ಮತ್ತು ಕುಟುಂಬಸ್ಥರು ಗ್ರಾಮದ ತುಂಬ ಹುಡುಕಾಡಿದ್ದಾರೆ, ಕೊನೆಗೆ ಎಲ್ಲಿಯೂ ಪತ್ತೆಯಾಗದಿದ್ದಾಗ ತಡಮಾಡದೇ ಸಂಗಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂರು ಶವಗಳು ಸಮೀಪದ ಮಾವಿನ ತೋಟದಲ್ಲಿ ಪತ್ತೆಯಾಗಿವೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ

📱 Read Top News, Belgaum News Updates, Belagavi News in Kannada, Latest News on News Belgaum