Belagavi News In Kannada | News Belgaum

ಕಚ್ಚಾ ತೈಲ ದರ ಏರಿಕೆ; ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಹೆಚ್ಚಳ

🌐 Belgaum News :

ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಂಗಳವಾರ ಪೆಟ್ರೋಲ್‌ ದರವನ್ನು ಲೀಟರಿಗೆ 20 ಪೈಸೆಯಷ್ಟು, ಡೀಸೆಲ್‌ ದರವನ್ನು ಲೀಟರಿಗೆ 25 ಪೈಸೆಯಷ್ಟು ಹೆಚ್ಚಿಸಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬ್ಯಾರಲ್‌ಗೆ 80 ಡಾಲರ್‌ಗಳ ಸಮೀಪ ಬಂದಿರುವುದರಿಂದ ಇಂಧನ ದರದಲ್ಲಿ ಹೆಚ್ಚಳ ಆಗಿದೆ.

ಎಚ್‌ಪಿಸಿಎಲ್‌ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಮಂಗಳವಾರ ಪೆಟ್ರೋಲ್‌ ದರ ₹ 104.9 ಮತ್ತು ಡೀಸೆಲ್‌ ದರ ₹ 95.03ಕ್ಕೆ ತಲುಪಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ₹ 101.19 ಮತ್ತು ಡೀಸೆಲ್‌ ದರ ₹ 89.57ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ ₹ 107.47 ಮತ್ತು ಡೀಸೆಲ್‌ ದರ ₹ 97.21ಕ್ಕೆ ಏರಿಕೆ ಆಗಿದೆ.

ಸೆಪ್ಟೆಂಬರ್‌ 24ರ ನಂತರದಲ್ಲಿ ಡೀಸೆಲ್‌ ದರ ಲೀಟರಿಗೆ 95 ಪೈಸೆ ಹೆಚ್ಚಾದರೇ, ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲ್‌ ದರ ಹೆಚ್ಚಿಸಲಾಗಿದೆ./////

📱 Read Top News, Belgaum News Updates, Belagavi News in Kannada, Latest News on News Belgaum