Belagavi News In Kannada | News Belgaum

ವಾಹನ ಸವಾರರಿಗೆ ಶಾಕ್; ಮತ್ತೆ ಏರಿಕೆ ಕಂಡ ಪೆಟ್ರೋಲ್, ಡಿಸೇಲ್ ದರ

🌐 Belgaum News :

ಮುಂಬೈ: ನಿನ್ನೆ ಸ್ಥಿರವಾಗಿದ್ದ ತೈಲ ದರ ಇಂದು ಮತ್ತೆ ಏರಿಕೆಯಾಗಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್​​ ಮೇಲೆ 25 ರಿಂದ 30 ಪೈಸೆ ಹಾಗೂ ಡೀಸೆಲ್​ ಮೇಲೆ 28 ರಿಂದ 32 ಪೈಸೆ ಹೆಚ್ಚಳವಾಗಿದೆ.

ನಿನ್ನೆ ಸ್ಥಿರವಾಗಿದ್ದ ಪೆಟ್ರೋಲ್ ಬೆಲೆ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 25 ಪೈಸೆ ಏರಿಕೆಯಾಗಿ 101.64 ರೂ. ಹಾಗೂ ಡಿಸೇಲ್ ದರ 30 ಪೈಸೆ ಏರಿಕೆಯಾಗಿ 89.87 ರೂ. ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 26 ಪೈಸೆ ಏರಿಕೆಯಾಗಿ105.18 ಮತ್ತು ಡೀಸೇಲ್ ದರ 32 ಪೈಸೆ ಏರಿಕೆಯಾಗಿ 95.38 ರೂ. ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿನ ದರ:

ಬೆಂಗಳೂರು: ಪೆಟ್ರೋಲ್ :105.18 ರೂ. ಮತ್ತು ಡೀಸೆಲ್ : 95.38 ರೂ. ಹಾಗೂ ದೆಹಲಿಯಲ್ಲಿ ಪೆಟ್ರೋಲ್ ದರ: 101.64 ರೂ. ಮತ್ತು ಡೀಸೆಲ್ ದರ: 89.87 ರೂ. ದಾಖಲಾಗಿದೆ.

ಮುಂಬೈನಲ್ಲಿ ಪೆಟ್ರೋಲ್ ದರ: 107.71 ರೂ. ಮತ್ತು ಡೀಸೆಲ್: 97.52 ರೂ. ಹಾಗೂ ಚೆನ್ನೈನಲ್ಲಿ ಪೆಟ್ರೋಲ್ ದರ: 99.36 ರೂ. ಮತ್ತು ಡೀಸೆಲ್ ದರ: 94.45 ರೂ. ದಾಖಲಾಗಿದೆ./////

📱 Read Top News, Belgaum News Updates, Belagavi News in Kannada, Latest News on News Belgaum