ಮಹಾರಾಷ್ಟ್ರದ ಪಾಲ್ಗಾರ್‌ನಲ್ಲಿ ಲಘು ಭೂಕಂಪ

0
🌐 Belgaum News :

ಮುಂಬೈ (ಪಿಟಿಐ): ಮಹಾರಾಷ್ಟ್ರದ ಪಾಲ್ಗಾರ್‌ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 8.46 ಗಂಟೆಗೆ ಲಘು ಭೂಕಂಪನ ಆಗಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 2.9 ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವುದೇ ಸಾವು-ನೋವು ಅಥವಾ ಆಸ್ತಿ ಹಾನಿಯಾದ ವರದಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿಯಂತ್ರಣ ಮುಖ್ಯಸ್ಥ ವಿವೇಕಾನಂದ ಕದಂ ಅವರು ತಿಳಿಸಿದ್ದಾರೆ.

ಮುಂಬೈನಿಂದ 110 ಕಿ.ಮೀ ದೂರದಲ್ಲಿರುವ ಪಾಲ್ಗಾರ್ ಜಿಲ್ಲೆಯ ಕೆಲವು ಭಾಗಗಳಲ್ಲಿ 2018ರಿಂದಲೂ ಆಗಾಗ್ಗೆ ಹೀಗೆ ಭೂಮಿಯು ಕಂಪಿಸುವ ಅನುಭವವಾಗುತ್ತಿದೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');