Belagavi News In Kannada | News Belgaum

ಮೇಘಾಲಯ ನದಿಗೆ ಉರುಳಿದ ಬಸ್‌: 6 ಮಂದಿ ದುರ್ಮರಣ

🌐 Belgaum News :

ಶಿಲ್ಲಾಂಗ್‌: ಚಾಲಕ ನಿಯಂತ್ರಣ ಕೈತಪ್ಪಿ ಬಸ್‌  ಮೇಘಾಲಯದ ನೋಂಗ್‌ಚ್ರಾಮ್‌ನ ರಿಂಗ್ಡಿ ನದಿಗೆ  ಉರುಳಿದ್ದು,  ಬಸ್ ನಲ್ಲಿದ್ದ ಆರು ಮಂದಿ ದುರ್ಮರಣಕ್ಕೀಡಾಗಿರುವ  ಘಟನೆ ಬುಧವಾರ ತಡರಾತ್ರಿ ನಡೆದಿದೆ. ಬಸ್‌ನಲ್ಲಿ ಕನಿಷ್ಠ 21 ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಧಾವಿಸಿರುವ ರಕ್ಷಣಾ ಪಡೆ ಮತ್ತು ತುರ್ತು ಸೇವಾ ದಳ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಬಸ್‌ ತುರಾದಿಂದ ಶಿಲ್ಲಾಂಗ್‌ಗೆ ಪ್ರಯಾಣ ಬೆಳೆಸಿತ್ತು.  ನಾಲ್ವರ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಇನ್ನಿಬ್ಬರ ಮೃತದೇಹಗಳು ಬಸ್‌ ಒಳಗೆ ಸಿಲುಕಿವೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

16 ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum