ತವರು ಮನೆ ಬಿಟ್ಟು ವೈದ್ಯನ ಪ್ರೀತಿ ನಂಬಿದಕ್ಕೆ ಯುವತಿಗೆ ನರಕಯಾತನೆ

0
🌐 Belgaum News :

ಉತ್ತರ ಪ್ರದೇಶ: ವೈದ್ಯನ ಪ್ರೀತಿಯನ್ನು ನಂಬಿ  ತವರು ಮನೆ ಬಿಟ್ಟು  ಬಂದ ಯುವತಿ ಕೈಗೆ ಮಗು ಕೊಟ್ಟ ವೈದ್ಯ,  ಸಧ್ಯ ನರಕ ತೋರಿಸಿರುವ ಮನಕಲಕುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

5 ವರ್ಷಗಳ ಕಾಲ ಆಕೆಯೊಂದಿಗೆ ಜೀವನ ನಡೆಸಿ, ಮಗುವೊಂದರ ತಂದೆಯಾಗಿ ಬಳಿಕ  ಆಕೆಯನ್ನು ಮತ್ತು ಮಗುವನ್ನು ರಸ್ತೆ ಬದಿಗೆ ತಂದುಬಿಟ್ಟಿದ್ದು, ಯುವತಿ ವೈದ್ಯನ ಮನೆ ಮುಂದೆ ತರಕಾರಿ ಮಾರಾಟ ಮಾಡುತ್ತಿದ್ದಾಳೆ.

ಯುವತಿಯನ್ನು ಬೀದಿಗೆ ತಂದ ಫೇಸ್ಬುಕ್ ಪರಿಚಯ:   ಮಿರ್ಜಾಪುರ ಮೂಲದ ಯುವತಿಯನ್ನು , ಅಲ್ಲಿನ ಬಸ್ತಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಡಾ. ಜಿಡಿ ಯಾದವ್ ಫೇಸ್ಬುಕ್ ಮೂಲಕ  ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಳ್ಳುತ್ತಾನೆ . ಇವರಿಬ್ಬರ ಸ್ನೇಹ ಪ್ರೇಮಾಂಕುರಕ್ಕೆ ತಿರಗುತ್ತದೆ.

ವೈದ್ಯನ ಪ್ರೀತಿಯನ್ನು ನಂಬಿದ ಯುವತಿ ತವರು ಮನೆ ಬಿಟ್ಟು ಓಡಿ ಬರುತ್ತಾಳೆ. ವೈದ್ಯ ಹಾಗೂ ಆಕೆ 5 ವರ್ಷಗಳ ಕಾಲ ಒಟ್ಟಿಗೆ ಜೀವಿಸುತ್ತಾರೆ. ದೈಹಿಕವಾಗಿಯು ಯುವತಿಯನ್ನು ಬಳಸಿಕೊಂಡಿದ್ದಲ್ಲದೆ, ಮಗುವೊಂದರ ಜನನಕ್ಕೆ ಕಾರಣನಾಗುತ್ತಾನೆ. ಆದರೀಗ ಯುವತಿ ಮದುವೆಯಾಗುವಂತೆ ಹೇಳಿದ ತಕ್ಷಣ ಆಕೆಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಸದ್ಯ ಯುವತಿ ದಿಕ್ಕಿಲ್ಲದೆ ಮಗುವನ್ನು ಹಿಡಿದುಕೊಂಡು ಪ್ರಿಯತಮನ ಮನೆಯ ಎದುರು ತರಕಾರಿ ಮಾರುತ್ತಾ ಜೀವನ ಸಾಗಿಸುತ್ತಿದ್ದಾಳೆ.

ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ ಯುವತಿಗೆ ಕಿರುಕುಳ:-  ಇತ್ತೀಚೆಗಷ್ಟೇ ಆಕೆ ತನ್ನನ್ನು ಮದುವೆಯಾಗುವಂತೆ ಯಾದವ್ ಮೇಲೆ ಒತ್ತಡ ಹೇರಿದಳು. ಇದರಿಂದ ಆತ ಆಕೆಯನ್ನು ಮತ್ತು ಮಗುವನ್ನು ಮನೆಯಿಂದ ಹೊರ ಹಾಕಿದ್ದಾನೆ.  ಪ್ರತಿದಿನ ಅವಳನ್ನು ಕುಡಿದು ಕಚ್ಚುವ ಮೂಲಕ ನರಕವನ್ನು ತೋರಿಸುತ್ತಿದ್ದನಂತೆ. ಕೊನೆಗೆ ಊಟ , ಹಾಲು ಯಾವುದು ನೀಡದೆ ಚಿತ್ರಹಿಂಸೆ ನೀಡುತ್ತಿದ್ದನು. ಅಷ್ಟು ಮಾತ್ರವಲ್ಲದೆ, ಬೇರೆ ಹುಡುಗಿಯರನ್ನು ಮನೆಗೆ ಕರೆತಂದು ಪ್ರೀತಿಸಿದ ಅಸಭ್ಯವಾಗಿ ವರ್ತಿಸುತ್ತಿದ್ದನು ಎಂದು ಯುವತಿ ಹೇಳಿದ್ದಾಳೆ.

ಸಾರ್ವಜನಿಕರ ಸಹಕಾರದಿಂದ ಯುವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');