ಸಿಂದಗಿ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಭೂಸನೂರ ಹೆಸರು ಘೋಷಣೆ

0
🌐 Belgaum News :

ವಿಜಯಪುರ: ಸಿಂದಗಿ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ರಮೇಶ ಭೂಸನೂರ ಹೆಸರು ಘೋಷಣೆ ಮಾಡಲಾಗಿದೆ.

2008 ಹಾಗೂ 2013 ರಲ್ಲಿ ರಮೇಶ ಭೂಸನೂರ ಬಿಜೆಪಿ ಶಾಸಕರಾಗಿದ್ದರು. 2018 ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಸಿ. ಮನಗೂಳಿ ವಿರುದ್ಧ ಸೋಲು ಕಂಡಿದ್ದರು. ನಾಲ್ಕನೇ ಬಾರಿಗೆ ಸ್ಪರ್ಧೆ ಮಾಡಲಿರುವ ಮಾಜಿ ಶಾಸಕ ರಮೇಶ ಭೂಸನೂರ ನಾಳೆ ನಾಮಪತ್ರ ಸಲ್ಲಿಕೆ ಮಾಡುತ್ತಾರೆ.

ಟಿಕೆಟ್​ಗಾಗಿ ತೀವ್ರ ಜಿದ್ದಾಜಿದ್ದಿ ನಡೆದು ಕೊನೆಗೆ ರಮೇಶ ಭೂಸನೂರಗೆ ಒಲಿದಿದೆ. ಎರಡು ಬಾರಿ ಸತತವಾಗಿ ಬಿಜೆಪಿ ಶಾಸಕರಾಗಿದ್ದರು. ಹಲವರು ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೆ ಕೇಂದ್ರ ‌ನಾಯಕರು ರಮೇಶ ಭೂಸನೂರಗೆ ಟಿಕೆಟ್ ನೀಡಿದ್ದಾರೆ.

ಹಾನಗಲ್ ಗೆ ಶಿವರಾಜ್ ಸಜ್ಜನವರ್ ಗೆ ಟಿಕೆಟ್:
ಕೊನೆ ಕ್ಷಣದಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಶಿವರಾಜ್ ಸಜ್ಜನವರ್ ಗೆ ಟಿಕೆಟ್ ಘೋಷಿಸಲಾಗಿದೆ. ಇವರು ನಾಳೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

ಹಾನಗಲ್ ಕ್ಷೇತ್ರದಿಂದ ಮಾಜಿ ಸಚಿವ ದಿ.ಸಿ.ಎಂ. ಉದಾಸಿ ಅವರ ಸೊಸೆ ಹಾಗೂ ಹಾಲಿ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ್ ಉದಾಸಿ ಪತ್ನಿ ರೇವತಿ ಉದಾಸಿಗೆ ಟಿಕೆಟ್ ನೀಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಈ ಮೂಲಕ ಕುಟುಂಬ ರಾಜಕಾರಣದ ಆರೋಪವನ್ನು ತಪ್ಪಿಸಿಕೊಳ್ಳಲು ಕೇಂದ್ರ ಬಿಜೆಪಿ ವರಿಷ್ಠರು ಪಕ್ಷದ ಮುಖಂಡ ಶಿವರಾಜ್ ಸಜ್ಜನವರ್ ಗೆ ಟಿಕೆಟ್ ನೀಡುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಲಿದೆ ಎಂಬ ಸಂದೇಶವನ್ನು ಮತ್ತೊಮ್ಮೆ ರವಾನಿಸಿದೆ. ಕಳೆದ ಭಾನುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಹಾನಗಲ್ ಕ್ಷೇತ್ರಕ್ಕೆ ಮೂವರ ಹೆಸರುಗಳನ್ನು ಕಳುಹಿಸಿಕೊಡಲಾಗಿತ್ತು.

ಈ ಹಿಂದೆ ಒಂದು ಬಾರಿ ಶಾಸಕರಾಗಿ, ಮತ್ತೊಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಶಿವರಾಜ್ ಸಜ್ಜನವರ್ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರೂ ಹೌದು. ಹಿಂದೆ ಕೆಜೆಪಿ ಜತೆ ಸೇರಿಕೊಂಡು 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');