Belagavi News In Kannada | News Belgaum

ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಕೊನೆಯ ಕಂತಾಗಿ 200 ರೂ.ಗಳನ್ನು ಒಂದೇ ಕಂತಿನಲ್ಲಿ ನೀಡಬೇಕೆಂದು ಸ್ವಾಭಿಮಾನಿ ಶೇತ್ಕರಿ ಸಂಘಟನೆ

🌐 Belgaum News :

ಶೇಡಬಾಳ : ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಕೊನೆಯ ಕಂತಾಗಿ 200 ರೂ.ಗಳನ್ನು ಒಂದೇ ಕಂತಿನಲ್ಲಿ ನೀಡಬೇಕೆಂದು ಸ್ವಾಭಿಮಾನಿ ಶೇತ್ಕರಿ ಸಂಘಟನೆ ಹಾಗೂ ಐನಾಪೂರ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಉಗಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದನ ಶಿರಗಾಂವಕರ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.

ಅವರು ಉಗಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದನ ಶಿರಗಾಂವಕರ ಅವರಿಗೆ ಮನವಿ ಪತ್ರ ಅರ್ಪಿಸಿ ಶೇತ್ಕರಿ ಸಂಘಟೆನಯ ಮುಖಂಡ ಸುರೇಶ ಚೌಗುಲಾ ಮಾತನಾಡಿ ಈಗಾಗಲೇ ಶಿವಶಕ್ತಿ ಹಾಗೂ ಕಾಗವಾಡದ ಶಿರಗುಪ್ಪಿ ಶುಗರ್ಸ್‍ನವರು ಕಳೆದ ಹಂಗಾಮಿಗೆ ಕಬ್ಬು ಪೂರೈಸಿದ ರೈತರಿಗೆ ಏಕ ಕಾಲಕ್ಕೆ 2700 ರೂ. ದರ ನೀಡಿದ್ದಾರೆ. ಆದರೆ ತಮ್ಮ ಕಾರ್ಖಾನೆ ಕೇವಲ 2500 ರೂ. ನೀಡಿದ್ದು, ನಾವು ಒತ್ತಾಯಿಸಿದಾಗ 200 ರೂ. ನೀಡಲು

 

ಒಪ್ಪಿಕೊಂಡಿದ್ದೀರಿ ಅದನ್ನು ನಮ್ಮ ರೈತಪರ ಸಂಘಟನೆಗಳು ಸ್ವಾಗತಿಸುತ್ತವೆ. ಆದರೆ ತಾವು 200 ರೂ. ಗಳನ್ನು ಎರಡು ಕಂತುಗಳಾಗಿ ನೀಡುವ ಬಗ್ಗೆ ಕಾರ್ಖಾನೆಯ ನೋಟಿಸ್ ಬೋರ್ಡಿಗೆ ಹಚ್ಚಿದ್ದಿರಿ, ಮಹಾಮಾರಿ ಕೊರೋನಾ ಹಾಗೂ ಪ್ರವಾಹದಿಂದ ರೈತರು ಬೆಳೆದ ಬೆಳೆಗಳನೆಲ್ಲ ಕಳೆದುಕೊಂಡು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅದ್ಕಕಾಗಿ ಎರಡು ಕಂತುಗಳಾಗಿ ಮಾಡದೇ ಏಕ ಕಾಲಕ್ಕೆ ದಸರಾ ಹಬ್ಬದೊಳಗಾಗಿ 200 ರೂ. ಗಳನ್ನು ರೈತರ ಖಾತೆಗೆ ಜಮಾ ಮಾಡಬೆಕೆಂದು ಒತ್ತಾಯಿಸಿದರು.

ಈಗಾಗಲೇ ಶಿವಶಕ್ತಿ ಹಾಗೂ ಕಾಗವಾಡದ ಶಿರಗುಪ್ಪಿ ಶುಗರ್ಸ್‍ನವರು 2700 ರೂ.ಗಳನ್ನು ಏಕ ಕಾಲಕ್ಕೆ ನೀಡಿ ನಾಲ್ಕೈದು ತಿಂಗಳುಗಳಾಗಿದೆ. ಆದರೆ ತಾವು ರೈತರು ಒತ್ತಾಯಿಸಿದ ಮೇಲೆ 200 ರೂ. ನೀಡಲು ಒಪ್ಪಿಕೊಂಡಿದ್ದೀರಿ. ಈಗ ನೋಟಿಸ್ ಬೋರ್ಡಿಗೆ ಎರಡು ಕಂತುಗಳಾಗಿ ನೀಡುವ ಬಗ್ಗೆ ನೋಟಿಸ್ ಹಚ್ಚರಿರುವುದು ಸರಿಯಲ್ಲ. ಅದಕ್ಕಾಗಿ ಒಂದೇ ಕಂತಿನಲ್ಲಿ ನೀಡಬೇಕೆಂದು ಒತ್ತಾಯಿಸಿದರು.

ಈ ಕುರಿತು ಚಂದನ ಶಿರಗಾಂವಕರ ಅವರಿಗೆ ಮನವಿ ಪತ್ರ ನೀಡಿದ್ದು, ಕಳೆದ ಹಂಗಾಮಿನ 200 ರೂ. ಏಕ ಕಾಲಕ್ಕೆ ನೀಡಬೇಕು. ಮತ್ತು ಪ್ರಸಕ್ತ ಹಂಗಾಮಿಗೆ ಮೊದಲ ಕಂತಾಗಿ 3 ಸಾವಿರ ರೂ. ಗಳನ್ನು ಘೋಷಿಸಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಬೇಕೆಂದು ಮನವಿ ನೀಡಿ ಆಗ್ರಹಿಸಿದರು.

ಈ ವೇಳೆ ಶೇತ್ಕರಿ ಸಂಘಟನೆಯ ಮುಖಂಡ ಸುರೇಶ ಚೌಗುಲೆ ಐನಾಪೂರ ರೈತ ಹಿತ ರಕ್ಷಣಾ ಸಮಿತಿಯ ಮುಖಂಡರಾದ ರಾಜೇಂದ್ರ ಪೋತದಾರ, ಕುಮಾರ ಅಪರಾಜ, ಆದಿನಾಥ ದಾನೋಳ್ಳಿ, ಸಮಜಯ ಭೀರಡಿ, ಬಾಹುಬಲಿ ಕುಸನಾಳೆ, ಗಜಾನನ ಯರಂಡೋಲಿ, ಯಶವಂತ ಪಾಟೀಲ, ಅಜೀತ ಪಾಟೀಲ, ರತನ ಪಾಟೀಲ, ಪ್ರವೀಣ ಕುಲಕರ್ಣಿ, ಗುಂಡು ಖವಟಗೊಪ್ಪ, ಪಿಂಟು ಪಾಟೀಲ, ಸುನೀಲ ಪಾಟೀಲ, ಗೋಪಾಲ ಮಾನಗಾಂವೆ, ಪ್ರಕಾಶ ಸತ್ತಿ, ಸತೀಶ ಗಾಣಿಗೇರ, ಮೋಹನ ಗಾಣಿಗೇರ ಸೇರಿದಂತೆ ಅನೇಕರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum