ಲಖಿಂಪುರ ಘಟನೆ ತಪ್ಪಿತಸ್ಥರ ಬಂಧಿಸದಿದ್ದರೆ ಪ್ರಧಾನಿ ಮೋದಿ ಮನೆಗೆ ಮುತ್ತಿಗೆ: ಭೀಮ್ ಆರ್ಮಿ

0
🌐 Belgaum News :

ಹೊಸದಿಲ್ಲಿ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಘಟನೆಯ ತಪ್ಪಿತಸ್ಥರನ್ನು 7 ದಿನಗಳ ಒಳಗಾಗಿ ಬಂಧಿಸದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಭೀಮ್ ಆರ್ಮಿ, ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್  ಹೇಳಿದ್ದಾರೆ.

ಪ್ರಧಾನಿಯವರು ರೈತರ ಜತೆ ಮಾತುಕತೆ ನಡೆಸಬೇಕು. ಲಖಿಂಪುರ ಖೇರಿಗೆ ತೆರಳಿ ಮೃತ ರೈತರ ಕುಟುಂಬದವರನ್ನು ಭೇಟಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ಪ್ರಧಾನಿಯವರು ಪ್ರತಿಯೊಂದು ವಿಚಾರಕ್ಕೂ ಟ್ವೀಟ್ ಮಾಡುತ್ತಾರೆ. ಆದರೆ ರೈತರ ಹತ್ಯೆ ಬಗ್ಗೆ ಈವರೆಗೆ ಪ್ರತಿಕ್ರಿಯಿಸಿಲ್ಲ. ತಪ್ಪಿತಸ್ಥರು ಆರಾಮವಾಗಿದ್ದಾರೆ. ಏಳು ದಿನಗಳ ಒಳಗಾಗಿ ತಪ್ಪಿತಸ್ಥರನ್ನು ಬಂಧಿಸದಿದ್ದರೆ ಪ್ರಧಾನಿ ಅವರ ಮನೆಗೆ ಮುತ್ತಿಗೆ ಹಾಕಲಿದ್ದೇವೆ” ಎಂದು ಆಜಾದ್ ಎಚ್ಚರಿಕೆ ನೀಡಿದ್ದಾರೆ.

ಲಖಿಂಪುರ ಖೇರಿ ಘಟನೆಯನ್ನು ಅವರು ಜಲಿಯನ್‌ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');