ಡ್ರಗ್ಸ್ ಪ್ರಕರಣ: ಶಾರೂಖ್ ಖಾನ್ ವಾಹನ ಚಾಲಕನನ್ನು ವಿಚಾರಣೆಗೆ ಒಳಪಡಿಸಿದ ಎನ್ ಸಿಬಿ

0
🌐 Belgaum News :

ಮುಂಬೈ:  ಐಷಾರಾಮಿ ಹಡಗಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ  ಡ್ರಗ್ಸ್‌ ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಚಾಲಕನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಎನ್ ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.  7  ರಂದು ಜಾಮೀನು ವಿಷಯವಾಗಿ ಕೋರ್ಟ್ ನಲ್ಲಿ ವಾದ-ಪ್ರತಿವಾದ ನಡೆಸಲಾಗಿತ್ತು.

ಮುಂಬೈ ನಲ್ಲಿರುವ ಎನ್ ಸಿಬಿ ಕಚೇರಿಗೆ ತೆರಳಿದ ಶಾರೂಖ್ ಚಾಲಕ ಆಂಟಿ ಡ್ರಗ್ಸ್ ಸಂಸ್ಥೆ ಎದುರು ಹೇಳಿಕೆ ನೀಡಿದ್ದು, ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ.
ರೇವ್ ಪಾರ್ಟಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರದಂದು ರಾತ್ರಿ ಮುಂಬೈ ನ ವಿವಿಧೆಡೆ ಎನ್ ಸಿಬಿ ಸಿಬ್ಬಂದಿಗಳು ದಾಳಿ ನಡೆಸಿ ಡ್ರಗ್ಸ್ ವಶಕ್ಕೆ ಪಡೆದಿದ್ದು, ಸಾಂತಾಕ್ರೂಜ್‌ನಲ್ಲಿ    ಶಿವರಾಜ್ ರಾಮ್ ದಾಸ್ ಎಂಬಾತನನ್ನು ಬಂಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸದಂತೆ  ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ  19 ಜನರನ್ನು ಎನ್‌ಸಿಬಿ ಬಂಧಿಸಿದೆ. /////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');