Belagavi News In Kannada | News Belgaum

ಹವಾಮಾನ ವೈಪಲ್ಯ: ರಷ್ಯಾ ವಿಮಾನ ಪತನ: 16 ಪ್ರಯಾಣಿಕರ ದುರ್ಮರಣ, ಹಲವರಿಗೆ ಗಾಯ

🌐 Belgaum News :

ರಷ್ಯಾ:  ಹವಾಮಾನ ವೈಪಲ್ಯದಿಂದ  ರಷ್ಯಾದಲ್ಲಿ 23 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ 16 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.

ಟಾಟರ್ ಸ್ತಾನ್ ಪ್ರದೇಶದಲ್ಲಿ ಎಲ್-410 ವಿಮಾನ ಪತನಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 23 ಜನರಲ್ಲಿ 16 ಮಂದಿ ಮೃತಪಟ್ಟಿದ್ದು, 7 ಮಂದಿಯನ್ನು ರಕ್ಷಿಸಲಾಗಿದೆ. ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ./////

📱 Read Top News, Belgaum News Updates, Belagavi News in Kannada, Latest News on News Belgaum