ನವರಾತ್ರಿ ಪ್ರಯುಕ್ತ ನಟ ಸೋನು ಸೂದ್ ಪ್ರತಿಮೆ ನಿರ್ಮಿಸಿ ವಿಶೇಷ ಗೌರವ

0
🌐 Belgaum News :

ಕೋಲ್ಕತ್ತಾ: ಬಾಲಿವುಡ್ ನಟ ಸೋನು ಸೂದ್ ಸ್ಕ್ರೀನ್ ಮೇಲೆ ಮಾತ್ರ ಹೀರೋ ಅಲ್ಲ. ಅವರು ಸಾಮಾಜಿಕ ಸೇವೆಯ ಮೂಲಕ ರಿಯಲ್ ಲೈಫ್‍ನಲ್ಲಿಯೂ ಹೀರೋ ಆಗಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನಸ್ಸು ಗೆದ್ದಿರುವ ಸೋನು ಸೂದ್ ಅವರಿಗೆ ಕೋಲ್ಕತ್ತಾದ ಕೆಸ್ತೋಪುರ್ ಪ್ರಫುಲ್ಲ ಕಾನನ್ ದುರ್ಗಾ ಪೂಜಾ ಸಮಿತಿ ವಿಶೇಷವಾಗಿ ಗೌರವ ಸಲ್ಲಿಸಿದೆ.

ಈ ವರ್ಷದ ನವರಾತ್ರಿ ಹಬ್ಬದ ಪ್ರಯುಕ್ತ ಕೆಸ್ತೋಪುರ್ ಪ್ರಫುಲ್ಲ ಕಾನನ್ ದುರ್ಗಾ ಪೂಜಾ ಸಮಿತಿ ಸುಂದರಬನ್ ಗ್ರಾಮದಲ್ಲಿ ಉಂಟಾದ ಪ್ರವಾಹದಿಂದ ಎಲ್ಲವನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾದ ಮೀನುಗಾರರಿಗೆ ಸೋನು ಸೂದ್ ಸಹಾಯ ಮಾಡಿರುವುದನ್ನು ಕಲ್ಪಿಸಿಕೊಂಡು ಕೆಲವು ಪ್ರತಿಮೆಗಳನ್ನು ನಿರ್ಮಿಸಿದ್ದಾರೆ.

ಸುಂದರಬನ್ ಗ್ರಾಮ ಪ್ರದೇಶದಲ್ಲಿ ಹೆಚ್ಚಾಗಿ ಮೀನುಗಾರರು ವಾಸಿಸುತ್ತಾರೆ. ಆದರೆ ಈ ವರ್ಷ ಉಂಟಾದ ಯಸ್ ಚಂಡಮಾರುತದಿಂದಾಗಿ ಇಡೀ ಪ್ರದೇಶ ಸಂಪೂರ್ಣ ನಾಶವಾಗಿತ್ತು. ಇದರಿಂದಾಗಿ ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ವೇಳೆ ಸಂತ್ರಸ್ತರಿಗೆ ಸೋನು ಸೂದ್ ಸಹಾಯ ಮಾಡಿದ್ದರು. ಹೀಗಾಗಿ ಪ್ರಫುಲ್ಲ ಕಾನನ್ ಪೂಜಾ ಸಮಿತಿ ಕೆಲವೊಂದು ಮೂರ್ತಿಗಳನ್ನು ನಿರ್ಮಿಸಿದೆ. ಅದರಲ್ಲಿ ಸೋನು ಸೂದ್ ಅವರ ಗಾತ್ರದ ಪ್ರತಿಮೆಯನ್ನು ನಿರ್ಮಿಸಿದ್ದು, ಫೋಟೋದಲ್ಲಿ ಸೋನು ಸೂದ್ ಕೈಯಲ್ಲಿ ಕವರ್ ಹಿಡಿದುಕೊಂಡು ಮೀನುಗಾರರಿಗೆ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಸುತ್ತ ಮುತ್ತ ಜನ, ಮಕ್ಕಳು, ಪುಟ್ಟ ಮನೆಗಳಿರುವುದನ್ನು ನೋಡಬಹುದಾಗಿದೆ.

ಕಳೆದ ವರ್ಷ ಸೋನು ಸೂದ್ ಕೊರೊನಾ ಸಂಕಷ್ಟದಲ್ಲಿರುವ ಅನೇಕ ಮಂದಿಗೆ ಸಹಾಯ ಮಾಡುವ ಮೂಲಕ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');