ಮುದ್ದೇಬಿಹಾಳದಲ್ಲಿ ಸರಣಿ ಕಳ್ಳತನ 7 ಮನೆಗಳ ನಗ ನಾಣ್ಯ ಲೂಟಿ

0
🌐 Belgaum News :
ಮುದ್ದೇಬಿಹಾಳ : ಪಟ್ಟಣದ ಸುಶೀಕ್ಷಿತರ ಬಡಾವಣೆ ಎಂದೇ ಗುರ್ತಿಸಿಕೊಳ್ಳುವ ಮಾರುತಿನಗರ ಬಡಾವಣೆಯಲ್ಲಿ ರವಿವಾರ ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ 7 ಮನೆಗಳ ಸರಣಿ ಕಳ್ಳತನ ನಡೆದ ಘಟನೆ ಬೆಳಿಗ್ಗೆ ಬೆಳಕಿಗೆ ಬಂದಿದೆ.ಒಂದೇ ಮಾದರಿಯಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿಕೊಂಡು , ಮುಖ್ಯ ಬಾಗಿಲಿನ ಕೊಂಡಿ ಮುರಿದು ಒಳನುಗ್ಗಿರುವ ಕಳ್ಳರು ಯಾರೂ ಇಲ್ಲದ ಮನೆಗಳಲ್ಲಿ ನಗ ನಾಣ್ಯ ಬೆಲೆಬಾಳುವ ವಸ್ತು ದೋಚಿರುವ ಶಂಕೆ ಇದೆ
ಮುದ್ದೇಬಿಹಾಳ ಪೊಲೀಸರು ಆಯಾ ಮನೆಗಳಿಗೆ ತೆರಳಿ ಕಳ್ಳತನ ಪರಿಶೀಲಿಸಿ ವರದಿ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ . ತನಿಖೆ ಪೂರ್ಣಗೊಂಡ ನಂತರವೇ ಕಳ್ಳತನವಾದ ನಗ ನಾಣ್ಯದ ಮೌಲ್ಯ ತಿಳಿದು ಬರಲಿದೆ.ಇತ್ತೀಚೆಗೆ ಪಟ್ಟಣದಲ್ಲಿ ಉತ್ತರ ಪ್ರದೇಶ ಮೂಲದವರು ಬಡಾವಣೆಗಳಲ್ಲೆಲ್ಲ ಊಲನ್ ಕಾರ್ಪೆಟ್ , ಬ್ಯಾಂಕೇಟ್ ಮಾರಲು ತಿರುಗಾಡಿದ್ದು ಅವರ್ ಮೇಲೆಯೇ ಸಂಶಯ ಕೇಂದ್ರಿಕೃತಗೊಂಡಿದೆ
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');