ಬೆಳಗಾವಿಯಲ್ಲಿ ಸಿಲ್ಕ್ ಇಂಡಿಯ-2021” ಮೇಳ ಸಂಸದೆ ಮಂಗಲ ಅಂಗಡಿ ಅವರು ಉದ್ಘಾಟಿಸಿದರು.

0
🌐 Belgaum News :

 

ಬೆಳಗಾವಿ: ವಿಜಯದಶಮಿ ಹಬ್ಬದ ಪ್ರಯುಕ್ತ ಹಸ್ತಶಿಲ್ಪಿ ವತಿಯಿಂದ ಬೆಳಗಾವಿಯಲ್ಲಿ ಹಮ್ಮಿಕೊಂಡ “ಸಿಲ್ಕ್ ಇಂಡಿಯ-2021” ಮೇಳವನ್ನು ಸಂಸದೆ ಮಂಗಲ ಅಂಗಡಿ ಅವರು ಉದ್ಘಾಟಿಸಿದರು.

ನಗರದ ಮರಾಠ ಮಂದಿರದಲ್ಲಿ ಅಕ್ಟೋಬರ್ 13 ರಿಂದ 18 ವರೆಗೆ ಹಮ್ಮಿಕೊಂಡಿರು “ಸಿಲ್ಕ್ ಇಂಡಿಯ-2021” ಮೇಳವನ್ನು ಇಂದು ಬುಧವಾರ ಸಂಸದೆ ಮಂಗಲ ಅಂಗಡಿ ಅವರು ಉದ್ಘಾಟಿಸಿದರು. ಬಳಿಕ ಭಾರತದ ಎಲ್ಲಾ ರಾಜ್ಯಗಳಿಂದ ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳಿಗೆ ಭೇಟಿ ನೀಡಿ ವಿವಿಧ ರೇಷ್ಮೆ ಸೀರೆಗಳನ್ನು ಪ್ರದರ್ಶಿಸಿದರು.

ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ
ಸಂಘಗಳು 50 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಬೆಳಗಾವಿಯ ಜನತೆಯ ಮುಂದೆ ಪ್ರತಿದಿನ ಬೆಳಿಗ್ಗೆ 10.30 ರಿಂದ ರಾತ್ರಿ 8.30 ರವರೆಗೆ ಪ್ರದರ್ಶಿಸಿ ಮಾರಾಟ ಮಾಡುವರು.

 

ಮೇಳದಲ್ಲಿ ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್, ಶಿಫಾನ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕಲ್ಲೊತ್ತಾ ಗಣಪತಿ ಸೀರೆಗಳು, ಢಾಕ ಸೀರೆಗಳು, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್ ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರೀಂಟೆಡ್ ಸೀರೆಗಳು, ಪಶ್ಮಿನಾ ಸೀರೆಗಳು,

ಡಿಸೈನರ್ ಡ್ರೆಸ್ ಮೇಟಿರಿಯಲ್ಸ್ಗಳು ಮತ್ತು ಸೀರೆಗಳು, ಬಾಗಲ್‌ಪುರ್‌ ರೇಷ್ಮೆ ಸೀರೆ ಮತ್ತು ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡಾರ್‌ ಉಳ್ಳ ಮುಲ್‌ ಬಾರಿ ಸಿಲ್ಯ, ಕಲೋತಾ ರೇಷ್ಮೆ ಸೀರೆಗಳು, ಬನಾರಸ್ ಮತ್ತು ಜಮ್‌ದಾನಿ ರೇಷ್ಮೆ, ಶಿಫಾನ್ ಸೀರೆಗಳು, ಬುಟ್ಟಿ ಸೀರೆಗಳು, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿದೆ.

 

ಇದಲ್ಲದೆ ಕುರ್ತಾ, ಸೋಲ್ಡ್, ಶಾಲುಗಳು, ಸಲ್ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಕುಶನ್ ಕವರ್‌ಗಳು ಮತ್ತು ಬೆಡ್ ಶೀಟ್‌ಗಳನ್ನು ಈ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿ ಮಾರಾಟ ಮಾಡಲಾಗುವುದು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');