ಪತ್ನಿಯನ್ನು ಹಾವಿನಿಂದ ಕಚ್ಚಿಸಿ ಕೊಲೆಗೈದಿದ್ದ ಪತಿ ಸೂರಜ್‌ಗೆ ಜೀವಾವಧಿ ಶಿಕ್ಷೆ: ಕೊಲ್ಲಂ ನ್ಯಾಯಾಲಯ ಮಹತ್ವದ ತೀರ್ಪು

0
🌐 Belgaum News :

ಕೊಲ್ಲಂ: ವಿಷ ಸರ್ಪದಿಂದ ಕಚ್ಚಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಉತ್ರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಹೊರಬಿದ್ದಿದೆ.  ಆರೋಪಿ ಪತಿ ಸೂರಜ್‌ಗೆ  ಕೊಲ್ಲಂನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಇದೀಗ  ಎರಡು ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.

ಕೇರಳದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ,  ಮಹಿಳೆಯ ಪತಿ ಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು.  ಅಲ್ಲದೇ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇದೀಗ ಕೊಲ್ಲಂ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ದೇವರನಾಡಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕೊಲೆ ಪ್ರಕರಣವನ್ನು ಸಾಂದರ್ಭಿಕ ಸಾಕ್ಷ್ಯದ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಇದೊಂದು ಅಪರೂಪದ ಪ್ರಕರಣವಾಗಿದೆ.

ಏನಿದು ಕೊಲೆ ಪ್ರಕರಣ ?
ಕೇರಳದ ಅಂಚಲ ಮೂಲದ ಉಥ್ರಾ ( 23 ವರ್ಷ) ಎಂಬಾಕೆಯೇ ಹಾವು ಕಡಿತದಿಂದ ಸಾವನ್ನಪ್ಪಿದ್ದ ಮಹಿಳೆ. ಕಳೆದ ಮೇ ತಿಂಗಳಲ್ಲಿ ತನ್ನ ಕೋಣೆಯಲ್ಲಿ ಮಲಗಿದ್ದ ಉಥ್ರಾ ನಿಗೂಢವಾಗಿ ಸಾವನ್ನಪ್ಪಿದ್ದಳು. ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆಕೆಯ ಪತಿ ಸೂರಜ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಆತ ತಾನೇ ವಿಷ ಪೂರಿತ ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದ.

ಈ ಹಿನ್ನೆಲೆಯಲ್ಲಿ ಪ್ರಕರಣ ಕೊಲ್ಲಂ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಕಳೆದೊಂದು ವರ್ಷದಿಂದಲೂ ವಿಚಾರಣೆ ನಡೆಯುತ್ತಲೇ ಇತ್ತು. ಇದೀಗ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಮನೋಜ್ ಅವರು ಆರೋಪಿಗೆ ದೋಷಿ ಎಂದು ತೀರ್ಪು ನೀಡಿದ್ದಾರೆ.

ಅವಳಿಗೆ 8 ಕೆಜಿ ಚಿನ್ನ ಹಾಗೂ ವಿವಿಧ ವಸ್ತ್ರಾಭರಣ ಮಾಡಿಸಿದ್ದೆ, ಅದು ಒಂದೊಂದಾಗಿ ಕಾಣಿಸಲಿಲ್ಲ ಹಾಗೂ  ಕಾರು, ಹಣ ಮತ್ತು ಆಸ್ತಿಯನ್ನು ಕಳೆದುಕೊಳ್ಳುವ ಭಯದಿಂದ ಸೂರಜ್ ಪತ್ನಿ ಉಥ್ರಾಳನ್ನು ಹಾವು ಇರಿದು ಕೊಂದಿದೆ.  ದೋಷಾರೋಪ ಪಟ್ಟಿ ಸಲ್ಲಿಸಲಾ ಗಿದ್ದು, ಪ್ರಕರಣದ ದಾಖಲೆಯ ಸಮಯದಲ್ಲಿ ವಿಚಾರಣೆ ಪೂರ್ಣಗೊಂಡಿದೆ. ಉತ್ರಾ ಕಚ್ಚಿದ ಹಾವಿನ ಮರಣೋತ್ತರ ಪರೀಕ್ಷೆ ಮತ್ತು ನಾಗರ ಹಾವು ಬಳಸಿ ಡಮ್ಮಿ ಪರೀಕ್ಷೆ ನಡೆಸಲಾಯಿತು. ಏತನ್ಮಧ್ಯೆ, ಉತ್ರಾ ಅವರ ಪೋಷಕರು, ಆರೋಪಿಗಳು ಗರಿಷ್ಠ ಶಿಕ್ಷೆಯನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದರು.//////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');