ಅಥಣಿಯಲ್ಲಿ ಐವತ್ತನೆ ಪ್ರಯೋಗದತ್ತ ನಾಟಕ. ಕಂಪನಿ ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ

0
🌐 Belgaum News :
ಅಥಣಿಯಲ್ಲಿ ಐವತ್ತನೆ ಪ್ರಯೋಗದತ್ತ ಖಾಸ್ಗತೇಶ್ವರ ಕಂಪನಿ ನಾಟಕ
ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ರಸ್ತೆಯಲ್ಲಿ ಖಾಸ್ಗತೇಶ್ವರ ನಾಟಕ ಕಂಪನಿಯ ಬೃಹತ್ ವೇದಿಕೆಯಲ್ಲಿ ಪ್ರತಿನಿತ್ಯ ಎರಡು ಶೋ ನಡೆಸಲಾಗುತ್ತಿದ್ದು ಮದ್ಯಾಹ್ನ ಮೂರು ಹದಿನೈದು ಮತ್ತು ಸಂಜೆ ಆರು ಹದಿನೈದಕ್ಕೆ   ಹಾಗೂ ಶನಿವಾರ ಮತ್ತು ಭಾನುವಾರಗಳಂದು ರಾತ್ರಿ ಒಂಭತ್ತು ಹದಿನೈದಕ್ಕೆ ವಿಶೇಷವಾಗಿ ಮೂರನೆಯ ಶೋ ಒಳಗೊಂಡು ಯಶಸ್ವಿ ಐವತ್ತನೆಯ ಪ್ರಯೋಗದತ್ತ ಸಾಗುತ್ತಿರುವ ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ ಎಂಬ ಸುಂದರ ಸಾಮಾಜಿಕ ಹಾಸ್ಯಭರಿತ ನಾಟಕ ಸತತವಾಗಿ ಜನದಟ್ಟಣೆಯಲ್ಲಿ ನಡೆಯುತ್ತಿದೆ.
ವೃತ್ತಿ ರಂಗಭೂಮಿಯ ಕಲಾವಿದರ ಹಾಸ್ಯ,ಆಕ್ರೋಶ, ನೋವು,ಹತಾಸೆ ಹೀಗೆ ನವರಸಗಳ ಅಭಿನಯ ಜನರ ಮೆಚ್ಚುಗೆ ಗಳಿಸುತ್ತ ಸಾಗುತ್ತಿದ್ದು ರಾಜು ತಾಳಿಕೋಟಿ ಒಡೆತನದ ಖಾಸ್ಗತೇಶ್ವರ ನಾಟಕ ಕಂಪನಿಯ  ಕಲಾವಿದರ
ಮೈ ನವಿರೇಳಿಸುವ ಅಭಿನಯ ಕಲಾಭಿಮಾನಿಗಳ ಮನಸೋರೆಗೊಳ್ಳುತ್ತಿದೆ.
ಕಡಪಟ್ಟಿ ಪ್ರಕಾಶ ವಿರಚಿತ ನಾಟಕ ತವರುಬಿಟ್ಟ ತಂಗಿ ಅರ್ಥಾತ್ ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ ಎಂಬ ನಾಟಕದಲ್ಲಿ ಹಾಸ್ಯ ಪಾತ್ರದಲ್ಲಿ ಆನಂದ ಮುಧೋಳ,ಚೈತ್ರಾ ಕುಂದಾಪುರ, ಕಿಟ್ಟು ಉಡುಪಿ,ಪ್ರವೀಣ ಗೋಕಾಕ,ಕಲಾ ಆಸಕ್ತರನ್ನು ನಕ್ಕು ನಲಿಸಿದರೆ ನಾಟಕದ ಪ್ರಮುಖ ಪಾತ್ರಗಳಲ್ಲಿ ಪ್ರೇಮಾ ತಾಳಿಕೋಟಿ,ದಾನೇಶ ಗದಗ,ಕುಮಾರ ಶೆಡ್ಲಿಗೇರಿ,ಮುನ್ನಾ ಕುಕುನೂರ ಸೇರಿದಂತೆ ಹಲವರು ನಟಿಸಿದ್ದಾರೆ.ಈ ಬಗ್ಗೆ ಮಾತನಾಡಿರುವ
ಮಾಲೀಕರಾದ ರಾಜು ತಾಳಿಕೋಟಿ ಕೊರೊನಾದಂತಹ ಮಹಾಮಾರಿಯ ಸಮಯದಲ್ಲಿ ಉಂಟಾದ ಲಾಕ್ ಡೌನ್ ಇಂದಾಗಿ ರಂಗಭೂಮಿಯ ಕಲೆಯನ್ನೆ ನಂಬಿ ಬದುಕುತ್ತಿರುವ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು ಸದ್ಯ ಲಾಕ್ ಡೌನ್ ತೆರವುಗೊಂಡ ಮೇಲೆ ಅಥಣಿ ಪಟ್ಟಣದಲ್ಲಿ ನಾಟಕ ಪ್ರಯೋಗವಾಗುತ್ತಿದ್ದು ಕಲಾಭಿಮಾನಿಗಳನ್ನು ಕಲೆಯನ್ನು ಉಳಿಸಿ ಬೆಳೆಸುವದರ ಜೊತೆಗೆ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ್ದಾರೆ
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');