ರೈತರ ಹತ್ಯೆ ಖಂಡಿಸಿ ಕ್ಯಾಂಡಲ್ ಮಾರ್ಚ್

0
🌐 Belgaum News :
ಅಥಣಿ:ಉತ್ತರಪ್ರದೇಶದ ಲಖೀಂಪುರದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಚಲಾಯಿಸಿ ಹೋರಾಟಗಾರರ ಸಾವಿಗೆ ಕಾರಣವಾದ ಅಜಯ್ ಮಿಶ್ರಾ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಸಾಮುಹಿಕ ನೇತೃತ್ವದ ರೈತಸಂಘದಿಂದ ಕ್ಯಾಂಡಲ್ ಮಾರ್ಚ್ ಮಾಡಲಾಯಿತು.ಈ ವೇಳೆ ಮಾತನಾಡಿದ ಪ್ರಕಾಶ ಪೂಜಾರಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹರಿಸಿ ಕೇಂದ್ರ ಸಚೀವರ ಮಗ‌ ಅಜಯ್ ಮಿಶ್ರಾ ರೈತರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಿದ್ದು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಚಲಾಯಿಸಿ ಐದು ಜನರ ಸಾವಿಗೆ ಕಾರಣವಾಗಿದ್ದು ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ .
ಆದ್ದರಿಂದ ಕೂಡಲೇ ದೇಶದ್ರೋಹದ ದೂರು ದಾಖಲಿಸಿಕೊಂಡು ಕಠಿಣ ಶಿಕ್ಷೆ ವಿಧಿಸುವ ಮೂಲಕ ಮೃತ ರೈತರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂದರು.ಈ ವೇಳೆ ಮಾತನಾಡಿದ ದಶರಥ ನಾಯಕ ಮೃತ ರೈತರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು.ವಿಚಾರಣೆಗೆ ವಿಳಂಬ ಮಾಡದೆ ತ್ವರಿತವಾಗಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.ರೈತರಲ್ಲಿ ಭಯ ಹುಟ್ಟಿಸುವ ಪ್ರಯತ್ನ ಇದಾಗಿದ್ದು ಅಜಯ್ ಮಿಶ್ರಾ ಮತ್ತು ಅವನ ಸಹಚರರಿಗೆ ಕಾನೂನು ರೀತಿ ಕಠಿಣ ಶಿಕ್ಷೆ ವಿಧಿಸಬೇಕು.
ಈ ಘಟನೆಯಲ್ಲಿ ಮೃತ ರೈತರ ಕುಟುಂಬಗಳ ಸದಸ್ಯರು ಅಧೀರರಾಗಬಾರದು ನಿಮ್ಮೊಂದಿಗೆ ದೇಶದ ಎಲ್ಲ ರೈತ ಭಾಂಧವರು ನ್ಯಾಯದ ಕೂಗು ಎತ್ತುತ್ತೇವೆ ಎಂದರು.
ಈ ವೇಳೆ ಸಾಮೂಹಿಕ ನೇತೃತ್ವದ ರೈತ ಸಂಘದ
ರಾಜು ಪೂಜಾರಿ,ಗೋಪಾಲ ಮಿಸಾಳೆ,ರಾವಸಾಬ ಕೋಳಿ,ಮುರಿಗೆಪ್ಪ ಪಾಟೀಲ,ಬಾಬು ಜತ್ತಿ,ಗುರುಪಾದ ಮದೆನ್ನವರ,ಭೀಮಪ್ಪ ದೊಡ್ಡಮನಿ, ಆಶೀಫ ಮೋಳೆ,ಸೇರಿದಂತೆ ಸಾಮಾಜಿಕ ಹೋರಾಟಗಾರ ದೀಪಕ ಶಿಂಧೇ ಮತ್ತು  ಇತರರು ಉಪಸ್ಥಿತರಿದ್ದರು
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');