Belagavi News In Kannada | News Belgaum

ಮಸ್ಕಿಯಲ್ಲಿ ಗೆದ್ದಿದ್ದೇವೆ; ಅದೇ ರೀತಿ ಹಾನಗಲ್, ಸಿಂದಗಿಯಲ್ಲೂ ಗೆಲ್ಲುತ್ತೇವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

🌐 Belgaum News :

ಹಾನಗಲ್: ಇತ್ತೀಚೆಗೆ ಜರುಗಿದ ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ. ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ನಿಕಟ ಪೈಪೋಟಿ ನೀಡಿದ್ದೇವೆ. ಅದೇ ರೀತಿ ಹಾನಗಲ್, ಸಿಂದಗಿ ಉಪಚುನಾವಣೆಯಲ್ಲೂ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಹಾನಗಲ್ ವಿಧಾನಸಭೆ ಉಪಚುನಾವಣೆ ಅಂಗವಾಗಿ ಅಕ್ಕಿಆಲೂರನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಇಂದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಾನಗಲ್ ಉಪಚುನಾವಣೆ ಗೆಲ್ಲಲು ಯಾವ ರೀತಿ ರಣತಂತ್ರ ರೂಪಿಸಬೇಕು ಎಂದು ಸೂಚನೆ ನೀಡಿರುವೆ. ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ಶ್ರೀನಿವಾಸ ಮಾನೆ ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದರು.

ಇಲ್ಲಿನ ಪ್ರಚಾರಕ್ಕೆ ಸುಮಾರು ನಾಯಕರು ಬರಲಿದ್ದಾರೆ. ನಾಳೆಯಿಂದ ಎಲ್ಲ ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದಾರೆ. ಈ ಕ್ಷೇತ್ರ ಆಡಳಿತ ಪಕ್ಷ ಬಿಜೆಪಿಗೂ ಪ್ರತಿಷ್ಠೆ, ನಮಗೂ ಪ್ರತಿಷ್ಠೆ ಎಂದು ತಿಳಿಸಿದರು.

ಸಿಎಂ ತವರು ಕ್ಷೇತ್ರವಾದರು, ಓಟು ಹಾಕುವವರು ಹಾನಗಲ್ ಕ್ಷೇತ್ರದ ಮತದಾರರು. ಸಿಎಂ ಅವರು ಬಂದು ಹೋಗಲಿ. ಸಿಎಂ, ಪಿಎಂಗೂ ಒಂದೇ ಓಟು. ಜನಸಾಮಾನ್ಯರಿಗೂ ಒಂದೇ ಓಟು. ಸಿಎಂ ಅವರ ಡ್ಯೂಟಿ ಮಾಡತಾರೆ, ನಾವು ನಮ್ಮ ಡ್ಯೂಟಿ ಮಾಡುತ್ತೇವೆ ಎಂದು ಹೇಳಿದರು.

📱 Read Top News, Belgaum News Updates, Belagavi News in Kannada, Latest News on News Belgaum