Belagavi News In Kannada | News Belgaum

ಕಿವುಡ ಮಾಡಿದ ಕಿತಾಪತಿ ನಾಟಕ ಜನದಟ್ಟಣೆಯ ಯಶಸ್ವಿ ಪ್ರಯೋಗ

🌐 Belgaum News :
ಅಥಣಿಯಲ್ಲಿ ರಾಜು ತಾಳಿಕೋಟಿ ಮಾಲಿಕತ್ವದ ಖಾಸ್ಗತೇಶ್ವರ ನಾಟಕ ಕಂಪನಿಯಲ್ಲಿ ಕಳೆದ ಎರಡು ವರ್ಷಗಳ ಲಾಕ್ ಡೌನ್ ಮತ್ತು ಕೊರೊನಾ ಕಾರಣದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ವೃತ್ತಿ ರಂಗಭೂಮಿಯ ಕಲಾವಿದರನ್ನು ಅಥಣಿ ತಾಲೂಕಿನ ಕಲಾ ಪ್ರೇಕ್ಷಕರು ವೀಕ್ಷಿಸುವ ಮೂಲಕ ಪೋಷಿಸಲು ಮುಂದಾಗಿದ್ದಾರೆ.
ಕೆ ಎನ್ ಸಾಳುಂಕೆ ವಿರಚಿತ ಕಿವುಡ ಮಾಡಿದ ಕಿತಾಪತಿ ನಾಟಕದ
ಪ್ರಮುಖ ಪಾತ್ರಗಳಲ್ಲಿ
ಅಂಜನಕುಮಾರ ಚಿತ್ರದುರ್ಗ, ದ್ವಾರಕಾನಾಥನ ಪಾತ್ರದಲ್ಲಿ,
ಗೀತಾಳ ಪಾತ್ರದಲ್ಲಿ ಪಾಪು ಪ್ರಿಯ ಮತ್ತು ಹಾಸ್ಯ ಪಾತ್ರದಲ್ಲಿ ಪ್ರೇಮಾ ತಾಳಿಕೋಟಿ, ಕಿವುಡನ ಪಾತ್ರದಲ್ಲಿ ಭಿಮಾಶಂಕರ ಹಾಗೂ ಆನಂದ ಮುಧೋಳ,ಜೋಡಿಯ ಹಾಸ್ಯ ಅಭಿನಯ ನಾಟಕ ಕಲಾವಿದರ ಮನಸೋರೆಗೊಳ್ಳುತ್ತಿದೆ.
ಈ ಮೊದಲು ಕಿವುಡನ ಪಾತ್ರದಲ್ಲಿ ರಾಜ್ಯದ ಜನರ ಗಮನಸೆಳೆದ ಹಿರಿಯ ಕಲಾವಿದ ಭೀಮಾಶಂಕರ ಕಿವುಡನ ಪಾತ್ರದ ಅಭಿನಯದ  ಪ್ರಾಮುಖ್ಯತೆಯಲ್ಲಿ ಮೊದಲ ದಿನದ ಎರಡು ಶೋ ಪ್ರಯೋಗ ಯಶಸ್ವಿ ಯಾಗಿ ನಡೆದಿದ್ದು ಅಪಾರ ಜನಸ್ತೋಮದಿಂದ ಜನಮೆಚ್ಚುಗೆಯೊಂದಿಗೆ ನಡೆಯುತ್ತಿದೆ.ಈ ಬಗ್ಗೆ ಸಂಘದ ಸಂಚಾಲಕಿ ಪ್ರೇಮಾ ತಾಳಿಕೋಟಿ ಮಾತನಾಡಿ 1983 ರಿಂದ ಶ್ರೀ ಗುರು ಖಾಸ್ಗತೇಶ್ವರ ನಾಟ್ಯ ಸಂಘ ಹಲವು ಏಳು ಬೀಳುಗಳ ಜೊತೆಗೆ ಹತ್ತಾರು ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗ ಮಾಡುತ್ತ ಬಂದಿದ್ದರೂ ಕೂಡ ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಮಹಾಮಾರಿಯ ಕಾರಣದಿಂದ ನಾಟಕ ಪ್ರಯೋಗಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಿಸಿದ್ದು  ಈಗ ಅಥಣಿಯಲ್ಲಿ ಪ್ರತಿದಿನ ಆರು ಮದ್ಯಾಹ್ನ ಮೂರು ಹದಿನೈದು ಮತ್ತು ಸಂಜೆ ಆರು ಹದಿನೈದಕ್ಕೆ ದಿನಾಲು ಎರಡು ಪ್ರಯೋಗಗಳೊಂದಿಗೆ ಶನಿವಾರ ಮತ್ತು ಭಾನುವಾರ ರಾತ್ರಿ ಒಂಭತ್ತು ಹದಿನೈದಕ್ಕೆ ಮೂರನೆಯ ಶೋ ಇದ್ದು ಈ ಮೊದಲು
ಪ್ರಕಾಶ ಕಡಪಟ್ಟಿ ವಿರಚಿತ ನಾಟಕ ತವರು ಬಿಟ್ಟ ತಂಗಿ ಅರ್ಥಾತ್ ಅಪ್ಪ ಸಂತ್ಯಾಗ ಮಗಳು ಚಿಂತ್ಯಾಗ ನಾಟಕವನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಿದ ಕಲಾಭಿಮಾನಿಗಳು ಸದ್ಯ ನಕ್ಕು ನಗಿಸುವ ಸುಂದರ ಸಾಮಾಜಿಕ ಹಾಸ್ಯಭರಿತ ನಾಟಕ ಕಿವುಡ ಮಾಡಿದ ಕಿತಾಪತಿ ಐವತ್ತು ದಿನ ಪೂರೈಸುವಂತೆ ಕುಟುಂಬದೊಂದಿಗೆ ಬಂದು ವೀಕ್ಷಿಸಿ ಕಲೆಯನ್ನು ಬೆಳೆಸಿ ಕಲಾವಿದರನ್ನು ಉಳಿಸಬೇಕು ಎಂದರು.
📱 Read Top News, Belgaum News Updates, Belagavi News in Kannada, Latest News on News Belgaum