Belagavi News In Kannada | News Belgaum

ಸಾಂಸ್ಕೃತಿಕ ಸಂಭ್ರಮಗಳು  ಶಾಲೆಗಳಲ್ಲಿ ನಡೆದರೆ  ಕನ್ನಡ ಭಾಷೆ ಉಳಿಸಿ ಬೆಳೆಸಲು ಸಾಧ್ಯ  ಅರವಿಂದರಾವ್ ದೇಶಪಾಂಡೆ ಅಭಿಮತ 

🌐 Belgaum News :
ಸಾಂಸ್ಕೃತಿಕ ಸಂಭ್ರಮಗಳು  ಶಾಲೆಗಳಲ್ಲಿ ನಡೆದರೆ  ಕನ್ನಡ ಭಾಷೆ ಉಳಿಸಿ ಬೆಳೆಸಲು ಸಾಧ್ಯ
 ಸಾಂಸ್ಕೃತಿಕ ಸಂಭ್ರಮ ಹಾಗೂ  ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಆರೆಸ್ಸೆಸ್ ಮುಖಂಡ ಅರವಿಂದರಾವ್ ದೇಶಪಾಂಡೆ ಅಭಿಮತ

 

 ಅಥಣಿ    :  ಭಗವಾನ್ ಬುದ್ಧ, ಜಗಜ್ಯೋತಿ ಬಸವಣ್ಣ  ಮತ್ತು ಸಂವಿಧಾನ ಶಿಲ್ಪಿ ಡಾ. ಬಿ. ಅರ್ ಅಂಬೇಡ್ಕರ್ ಅವರು  ಸಮಾನತೆಯ ಹರಿಕಾರರು,  ಅವರ ತತ್ವಾದರ್ಶಗಳು ನಮ್ಮೆಲ್ಲರಿಗೆ ದಾರಿದೀಪವಾಗಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತದ ಸಹ ಸಂಚಾಲಕ ಹಾಗೂ ಶಿಕ್ಷಣ ಪ್ರೇಮಿ ಅರವಿಂದರಾವ್ ದೇಶಪಾಂಡೆ ಹೇಳಿದರು.
 ಅವರು ರವಿವಾರ ಇಲ್ಲಿನ ತಾಪಂ ಸಭಾಭವನದಲ್ಲಿ ಬುದ್ಧ ಬಸವ ಅಂಬೇಡ್ಕರ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡಿಗರ ಸಾಹಿತ್ಯ,  ಸಾಂಸ್ಕೃತಿಕ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ  ತೃತೀಯ ಸಂಸ್ಕೃತಿಕ ಸಂಭ್ರಮ ಹಾಗೂ ಬುದ್ಧ ಬಸವ ಅಂಬೇಡ್ಕರ ಶಾಂತಿ ಸೌಹಾರ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬುದ್ಧ ಬಸವ ಅಂಬೇಡ್ಕರ್ ಅವರ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ತರುವ ಮೂಲಕ ಸಾಮಾಜಿಕ ಚಿಂತಕರಾಗಿ, ಸಮಾನತೆಯ ಹರಿಕಾರರಾಗಿ  ಸಮೃದ್ಧ ಭಾರತಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರು  ಮಾಡಿದ ಸಾಧನೆಯನ್ನು ತಿಳಿಯಬೇಕಾದರೆ  ಅವರ  ಜೀವನಚರಿತ್ರೆಯನ್ನು ಪ್ರತಿಯೊಬ್ಬರು  ಓದಿ ತಿಳಿಯಬೇಕು. ಇಂದು ಅವರ ಹೆಸರಿನಲ್ಲಿ  ಅನೇಕ ಸಾಧಕರಿಗೆ ಶಾಂತಿ ಸೌಹಾರ್ದ ಪ್ರಶಸ್ತಿ ನೀಡಿ ಗೌರವಿಸುವುದು ಶ್ರೇಷ್ಠ ಕಾರ್ಯವಾಗಿದೆ. ಈ ಪ್ರಶಸ್ತಿ ಮತ್ತು ಸನ್ಮಾನಗಳು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಉತ್ಸಾಹದಿಂದ  ಸಾಧನೆ ಮಾಡಲು ಸ್ಫೂರ್ತಿಯಾಗಿದೆ ಎಂದು ಹೇಳಿದರು.
 ನಮ್ಮ ದೇಶದ ಧರ್ಮ-ಸಂಸ್ಕೃತಿ, ಭಾಷೆಯೇ ಕಲೆಯನ್ನು  ಉಳಿಸಿ ಬೆಳೆಸುವುದು ಅಗತ್ಯವಿದೆ.  ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಸಂಭ್ರಮಗಳು ಕನ್ನಡ ಶಾಲೆಗಳಲ್ಲಿ ನಡೆದರೆ ನಮ್ಮ ಕನ್ನಡ ಭಾಷೆಯನ್ನು ಇನ್ನಷ್ಟು ಗಟ್ಟಿಯಾಗಿ ಬೆಳೆಸಲು ಸಾಧ್ಯವಿದೆ ಎಂದು  ಸಲಹೆ ನೀಡಿದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಹಿರಿಯ ನ್ಯಾಯವಾದಿ ಕೆ ಎಲ್ ಕುಂದರಗಿ ಮಾತನಾಡಿ ನಮ್ಮ ಮಾತೃಭಾಷೆ ಕನ್ನಡಕ್ಕೆ ಇರುವ  ಶಕ್ತಿ ಮತ್ತೆ ಯಾವುದೇ  ಭಾಷೆಗೆ ಇಲ್ಲ. ನಮ್ಮ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೆ ಕೇವಲ ಹೋರಾಟದಿಂದ ಸಾಧ್ಯವಿಲ್ಲ. ನಮ್ಮ ಭಾಷೆಯ ಬಗ್ಗೆ ನಮಗೆ ಸ್ವಾಭಿಮಾನ ಇರಬೇಕು, ನಮ್ಮ ಭಾಷೆಯನ್ನು ನಿತ್ಯ ಬದುಕಿನಲ್ಲಿ ತಪ್ಪದೇ ಬಳಸಬೇಕು. ಅನ್ನದ ಭಾಷೆಯಾಗಿ ಕನ್ನಡವನ್ನು  ಬಳಸಿದಾಗ ನಮ್ಮ ಭಾಷೆಯ ಜೊತೆಗೆ ಕಲೆ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಿದೆ ಎಂದು ಹೇಳಿದರು.
 ಸಾಹಿತಿ ರೋಹಿಣಿ ಯಾದವಾಡ  ಅತಿಥಿ ಉಪನ್ಯಾಸ ನೀಡಿ ಬುದ್ಧ ಬಸವ ಅಂಬೇಡ್ಕರ್ ಅವರು ಮಾಡಿದ ಸಾಮಾಜಿಕ ಸುಧಾರಣೆಗಳನ್ನು  ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಕಕಮರಿ ರಾಯಲಿಂಗೇಶ್ವರ ಸಂಸ್ಥಾನಮಠದ  ಪೂಜ್ಯ ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
 ಈ ಸಂದರ್ಭದಲ್ಲಿ  ಮಹಾರಾಷ್ಟ್ರದ ಕನ್ನಡ  ಶಿಕ್ಷಕ ರಶೀದ್  ಟಪಾಲ,  ಸಾಹಿತಿ ಜಯಶ್ರೀ ಅಬ್ಬಿಗೇರಿ, ಗಣೇಶ್ ಮೋಪಗಾರ, ಮಾರುತಿ ಭಂಡಾರೆ, ಡಾ. ಅನಿಲ್ ಸೌದಾಗರ್, ಅಣ್ಣಪ್ಪ ದರೂರ್, ಎನ್ಆರ್ ಹಿರೇಮನಿ, ಉದಯ್ ಕಾರ್ಮಿಕರ,  ಪ್ರತಾಪ್ ಕುಮಾರ್ ಸೇರಿದಂತೆ  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಬುದ್ಧ ಬಸವ ಅಂಬೇಡ್ಕರ ಶಾಂತಿ ಸೌಹಾರ್ದ ಪ್ರಶಸ್ತಿ ನೀಡಿ ಗೌರವಿಸಲಾಯಿತು.   ಕೊರೋನಾ ಸಂದರ್ಭದಲ್ಲಿ ಸಮಾಜ ಸೇವೆ ಸಲ್ಲಿಸಿದ ಉದ್ದಿಮೆ  ಸುಶಾಂತ್ ಪಟ್ಟಣ ದಂಪತಿಗಳನ್ನು  ಸನ್ಮಾನಿಸಿ ಅಭಿನಂದಿಸಲಾಯಿತು.
ನಂತರ ಶಿಲ್ಪ ಮಂಗರೂಳ, ರುಕ್ಮಿಣಿ ಸುರ್ವೇ, ಕೊಪ್ಪಳ ನಾಗರೀಕ ವೇದಿಕೆ, ಲಕ್ಷ್ಮಿ ತೇರದಾಳ ಮಠ, ಎನ್ ಅಂಬಿಕಾ ಮರಿಯಪ್ಪನ ಹಳ್ಳಿ  ತಂಡದವರಿಂದ ಸಾಂಸ್ಕೃತಿಕ ಸಮೂಹ ನೃತ್ಯ ಪ್ರದರ್ಶನ ಕಾರ್ಯಕ್ರಮಗಳು ಜರುಗಿದವು.
 ಈ ಸಮಾರಂಭದಲ್ಲಿ ಸಮಾಜ ಸೇವಕ  ಮಹಾವೀರ ಪಡನಾಡ,  ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ದು ಕಲ್ಲೂರ್, ಸಮಾಜ ಸೇವಕ ರಾಜೇಂದ್ರ ಐಹೊಳೆ, ಉದ್ದಿಮಿ ಸುಶಾಂತ್ ಪಟ್ಟಣ ದಂಪತಿಗಳು
ಸೇವಕ  ಡಾ. ಅನಿಲ್ ಸೌದಾಗರ್
ಉಪಸ್ಥಿತರಿದ್ದರು.
 ಪ್ರತಿಷ್ಠಾನದ ಅಧ್ಯಕ್ಷ ಮಹದೇವ ಬಿರಾದಾರ್  ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕಾರ್ಯದರ್ಶಿ ಭಾಗ್ಯವಂತಿ ಬಿರಾದಾರ್  ವಂದಿಸಿದರು.
📱 Read Top News, Belgaum News Updates, Belagavi News in Kannada, Latest News on News Belgaum