Belagavi News In Kannada | News Belgaum

ಕನ್ಯೆ ನೋಡಲು ಹೋದ ಯುವಕ ನೀರುಪಾಲು

🌐 Belgaum News :

ಇಲಕಲ್ :  ಸಂಬಂಧಿಕರೊಡನೆ ಕನ್ಯೆ ನೋಡಲು ಹೋದ ಯುವಕನೋರ್ವ ನೀರುಪಾಲಾಗಿರುವ ದುರ್ಘಟನೆ  ಬಲಕುಂದಿ ಗ್ರಾಮದಲ್ಲಿ  ಇಂದು ನಡೆದಿದೆ.

ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಪ್ರತಾಪ್ ನಾಯಕ್ (24)  ಸಮೀಪದ ಬಲಕುಂದಿ ತಾಂಡ ಕೆ ಕನ್ಯೆ ನೋಡಲು ಶನಿವಾರ ಬಂದವನು ಸಂಬಂಧಿಕರಾದ ತಿಪ್ಪಣ್ಣ ಚವಾಣ್ ರವರ ಮನೆಯಲ್ಲಿ ಉಳಿದುಕೊಂಡಿದ್ದ, ಭಾನುವಾರ ಕನ್ಯೆ ನೋಡಿಕೊಂಡು ಊರಿಗೆ ಹೋಗುವ ವಿಚಾರ ಮಾಡಿಕೊಂಡಿದ್ದ. ಇಂದು ಬೆಳಗಿನ ಜಾವ ಬಹಿರ್ದೆಸೆಗೆಂದು ಹೋದವನು ಕಾಲುಜಾರಿ ಕಾಲುವೆಯಲ್ಲಿ ಬಿದ್ದು ನೀರು ಪಾಲಾಗಿದ್ದಾನೆ.

 

ಸುದ್ದಿ, ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಅವರು ತೆರಳಿ ಜಗದೀಶ್ ಗಿರಡ್ಡಿ ನೇತೃತ್ವದಲ್ಲಿ ಅಗ್ನಿಶಾಮಕ ತಂಡ ಕಾರ್ಯಾಚರಣೆ ಪ್ರಾರಂಭಿಸಿ ಕೇವಲ 10 ನಿಮಿಷದಲ್ಲಿ ಮೃತ ಯುವಕನ ಶವವನ್ನು ಶೋಧಕಾರ್ಯ ನಡೆಸಿ ಶವವನ್ನು ಹೊರತೆಗೆಯಲಾಯಿತು.  ಮೃತನ ಜೊತೆ ಬಂದ ತಾಯಿ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

 

ಕಾರ್ಯಾಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಜಗದೀಶ್ ಗಿರಡ್ಡಿ ಭೀಮಪ್ಪ ವಣಿಕ್ಯಾಳ ಅಮೀನಸಾಬ್ ಕಂದಗಲ್ ಅಶೋಕ ಕಾಮ ಬಸವರಾಜ ಕಟ್ಟಿಮನಿ ಸಂತೋಷ್ ಕೆಲೂರು ಎಲ್ಲಾ ಸಿಬ್ಬಂದಿಗಳು ಶೋಧಕಾರ್ಯ ನಡೆಸಿ ಕೇವಲ 10 ನಿಮಿಷದಲ್ಲಿ ಶವವನ್ನು ಹೊರತೆಗೆದು ಪೊಲೀಸ್ ಮತ್ತು ಸಂಬಂಧಿಕರ ವಶಕ್ಕೆ ವಹಿಸಿಕೊಡಲಾಯಿತು.

📱 Read Top News, Belgaum News Updates, Belagavi News in Kannada, Latest News on News Belgaum