Belagavi News In Kannada | News Belgaum

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಅಥಣಿ ಶಾಸಕ ಮಹೇಶ ಕುಮಠಳ್ಳಿ

🌐 Belgaum News :
 ಅಥಣಿ: ಹಿಪ್ಪರಗಿ ಆಣೆಕಟ್ಟು ಕೆಳಭಾಗದ ಭೂಮಿ ಕೊರೆತ ತಡೆಯಲು ಸುರಕ್ಷಾ ಗೋಡೆ ನಿರ್ಮಾಣಕ್ಕಾಗಿ ೨೮.೫ ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದ್ದು, ಇಷ್ಟರಲ್ಲಿಯೇ ಪೂರ್ಣಪ್ರಮಾಣದ ಅನುದಾನ ಬಿಡುಗಡೆಯಾಗಲಿದೆ ಎಂದು ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಮಹೇಶ ಕುಮಠಳ್ಳಿ ಹೇಳಿದರು. ಅವರು ತಾಲೂಕಿನ ಬಡಚಿ ಗ್ರಾಮದಲ್ಲಿ ನೀರಿನ ಟ್ಯಾಂಕ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಅಥಣಿ ಮತಕ್ಷೇತ್ರದಲ್ಲಿ ಹೊಸ ಹೊಸ ಶೈಕ್ಷಣಿಕ ಯೋಜನೆಗಳ ಅನುಷ್ಠಾನಕ್ಕೂ ಆದ್ಯತೆ ನೀಡಿದ್ದು, ತೆಲಸಂಗ ಗ್ರಾಮದ ಹೊರವಲಯದಲ್ಲಿ ೨೦ ಕೋಟಿ ರೂ.ಅನುದಾನದಲ್ಲಿ ಡಾ.ಅಂಬೇಡ್ಕರ ವಸತಿ ಶಾಲೆಯ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು. ೯  ಕೋಟಿ ೯೫ ಲಕ್ಷ ರೂ.ಗಳ ಅನುದಾನದಲ್ಲಿ ೮ ಗ್ರಾಮಗಳಲ್ಲಿ ಬಾಂದಾರ ಬ್ರಿಜ್ ಕಾಮಗಾರಿಗಳ ಅನುಷ್ಠಾನಗೊಳ್ಳಲಿದೆ ಮತ್ತು ೩ ಕೋಟಿ ೨೩ ಲಕ್ಷ ರೂ.ಗಳ ಅನುದಾನದಲ್ಲಿ ಜಾಕವೆಲ್ಲ ಹತ್ತಿರ ಕಾಲುವೆಗಳ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ ಎಂದ ಅವರು ಇನ್ನೂ ಎರಡ್ಮೂರು ತಿಂಗಳಲ್ಲಿ ಅಂದಾಜು ೨೦ ಕೋಟಿ ರೂ.ಗಳ ಅನುದಾನ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳಿಗೆ ಮಂಜೂರಾತಿ ಪಡೆದುಕೊಳ್ಳುತ್ತೇನೆ ಎಂದರು.
 ತಾಲೂಕಿನ ಕರ್ಲಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕಲ್ಯಾಣ ಮಂಟಪ, ಹುಲಗಬಾಳಿ ಗ್ರಾಮದ ಯಲ್ಲಮ್ಮ ದೇವಸ್ಥಾನದಲ್ಲಿ ಸಮುದಾಯ ಭವನ ಹಾಗೂ ಕಟಗೇರಿ ಗ್ರಾಮದ ಹೊರವಲಯದಲ್ಲಿ ೧.೪೦ ಕೋಟಿ ರೂ.ಗಳ ಅನುದಾನದಲ್ಲಿ ಕುಡಿಯುವ ನೀರಿನ ಯೋಜನೆಗೆ ಹಾಗೂ ಬಡಚಿ ಗ್ರಾಮದಲ್ಲಿ ೧ ಕೋಟಿ ೪೦ ಲಕ್ಷ ರೂ.ಗಳ ಅನುದಾನದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದ ಅವರು ವಿವಿಧ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳಿಗೆ ತಮ್ಮ ಅವಧಿಯಲ್ಲಿ ಆದ್ಯತೆಗಳಿಗೆ ಅನಗುಣವಾಗಿ ಅನುದಾನ  ತರಲಿದ್ದೇನೆ ಎಂದರು.
     ಈ ಸಂದರ್ಭದಲ್ಲಿ ಕೆ.ಎಮ್.ಎಫ್ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ, ಬಿಜೆಪಿ ಧುರೀಣರಾದ ನಿಂಗಪ್ಪ ನಂದೇಶ್ವರ, ಎಸ್.ಎ.ಮುದಕಣ್ಣವರ, ಅಶೋಕ ಮಗದುಮ್, ಗುತ್ತಿಗೆದಾರರಾದ ತಿಪ್ಪಣ್ಣ ಭಜಂತ್ರಿ, ಗುತ್ತಿಗೆದಾರ ಸಲಗರ, ಬಾಲಾಜಿ ಪಾಟೀಲ, ಮುತ್ತು ಮೊಕಾಶಿ, ಯಕನಾಂಥ ಚವ್ಹಾನ, ವಿಜಯ ಬಡಚ್ಚಿ, ಸಂತೋಷ ಮಾದರ, ರಾಜು ಬೊರಾಡ್ಡೆ, ಶ್ರೀಶೈಲ ಪಾಟೀಲ, ಶಂಕರ ಪವಾರ, ಅರುಣ ಚಿಂಗರಿ, ದೀಪಕ ಸುರವಂಶಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum