Belagavi News In Kannada | News Belgaum

ಬುದ್ದನ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿ

🌐 Belgaum News :

ಶೇಡಬಾಳ : ಗೌತಮ ಬುದ್ದರ ಮಾರ್ಗದರ್ಶನದಲ್ಲಿ ನಾವೆಲ್ಲ ಸಾಗಿದರೆ ಬದುಕು ಬಂಗಾರವಾಗುತ್ತದೆ ಬುದ್ದನ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವಂತೆ ಪೂಜ್ಯ ಭದಂತ ಡಾ//ಯಶಕಶ್ಯಪಾಯನ ಥೆರೋ ಹೇಳಿದರು.

ಅವರು ಇತ್ತೀಚಿಗೆ ಕಾಗವಾಡ ಪಟ್ಟಣದ ಬಿ.ಆರ್.ಅಂಬೇಡಕರ ವೃತ್ತದಲ್ಲಿರುವ ಅಮ್ರಪಾಲಿ ಬುದ್ಧ ವಿಹಾರ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ ಎಷ್ಟೋ ಜನರು ಬುದ್ದರ ಮಾತುಗಳಿಂದ ತಮ್ಮ ನಡವಳಿಕೆಗಳನ್ನ ಬದಲಿಕೊಂಡು ಉತ್ತಮ ಬದುಕು ಸಾಗಿಸಿರುವ ಉದಾಹರಣೆಗಳನ್ನ ನಾವು ಕಾಣಬಹುದಾಗಿದೆ ಪ್ರತಿಯೊಬ್ಬರೂ ಬುದ್ದನ ಅನುಯಾಯಿಗಳಾಗಬೇಕಾದರೆ ಕಳ್ಳತನ, ಮೋಸತನ,ಮಧ್ಯಪಾನ ಇಂತಹ ಕೆಟ್ಟ ಅಭ್ಯಾಸವನ್ನು ಬಿಡಬೇಕು ಎಂದರು.

 

ಅಕ್ಟೋಬರ್ 14 ಧಮ್ಮ ಚಕ್ರ ಪರಿವರ್ತನಾ ದಿನ ಈ ದಿನ ಅಶೋಕ ಚಕ್ರವರ್ತಿ ಕಳಿಂಗ ಯುದ್ದದಲ್ಲಿ ಗೆದ್ದು ಶಸ್ತ್ರಾಸ್ತ್ರಗಳನ್ನ ತ್ಯಜಿಸಿದ ದಿನ ಕಾರಣ ಯುದ್ದದಲ್ಲಿ ಅಪಾರ ಸಾವು ನೋವುಗಳನ್ನ ಕಂಡ ಅಶೋಕ ಚಕ್ರವರ್ತಿಗೆ ಮನಸ್ಸಿಗೆ ತುಂಬಾ ನೋವುಂಟಾಗುತ್ತದೆ ಅವತ್ತೆ ನಿರ್ಧರಿಸಿ ಇನ್ನ ಮುಂದೆ ಯಾವತ್ತೂ ಯುದ್ದದಲ್ಲಿ ಭಾಗಿಯಾಗಲಾರೆ ಎಂದು ನಿರ್ಧರಿಸಿ ಶಸ್ರ್ತ ತ್ಯಾಗ ಮಾಡಿ ಬೌದ್ದ ಧರ್ಮ ಸ್ವೀಕರಿಸಿ ಜಗತ್ತಿಗೆ ಶಾಂತಿ ತೋರಲು ಮುಂದಾಗುತ್ತಾನೆ ಇಂತಹ ಮಹಾನ್ ದಿವಸದಲ್ಲಿ ಅಮ್ರಪಾಲಿ ಬುದ್ದ ವಿಹಾರ ಉದ್ಘಾಟನೆ ಮಾಡಿದ್ದಿರಿ ಈ ವಿಹಾರ ಬುದ್ದರ ತತ್ವಗಳನ್ನ ಸಾರುವ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿ ಜಗತ್ತಿಗೆ ಶಾಂತಿ ಮಂತ್ರ ಪಠಿಸುವಂತಾಗಲಿ ಎಂದು ಹೇಳಿದರು.

ಕಾಗವಾಡ ಪಟ್ಟಣದ ಬಿ.ಆರ್.ಅಂಬೇಡಕರ ವೃತ್ತದಲ್ಲಿರುವ ಅಮ್ರಪಾಲಿ ಬುದ್ಧ ವಿಹಾರವನ್ನು ಪೂಜ್ಯ ಭದಂತ ಡಾ//ಯಶಕಶ್ಯಪಾಯನ ಥೆರೋ ಉದ್ಘಾಟಿಸಿದರು.

ಕಾರ್ಯಕ್ರಮದ ಅಂಗವಾಗಿ ಚೆನ್ನಮ್ಮ ವೃತ್ತದಿಂದ ಗೌತಮ ಬುದ್ಧರ ಭವ್ಯ ಮೂರ್ತಿಯ ಮೆರವಣಿಗೆಯನ್ನು ಮಾಡಲಾಯಿತು. ವಾದ್ಯ ವೈಭವದೊಂದಿಗೆ ಪ್ರಾರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಮ್ರಪಾಲಿ ವಿಹಾರದಲ್ಲಿ ಗೌತಮ ಬುದ್ದರ ಮೂರ್ತಿ ಪ್ರತಿಷ್ಟಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಪೂಜ್ಯ ಬಧಂತ ಆರ್.ಆನಂದ, ಬಧಂತ, ಎಸ್.ಸಂಬೋದಿ, ಬಧಂತ ರಾಹುಲ್ ಬಾಳಾಸಾಬ ಕಾಂಬ್ಳೆ, ಬಾಳಾಸಾಬ ಚೌಹಾನ್, ಅನೀಲ ಚೌಹಾನ್, ವಿಶಾಲ ದೊಂಡಾರೆ, ಅವಿನಾಶ ದೇವಣೆ, ವಕೀಲರಾದ ಮಂಜುನಾಥ ಹೊನಕಾಂಬ್ಳೆ, ವಿಧ್ಯಾಧರ ಮೌರ್ಯ, ಮಹಾಂತೇಶ ಬಡಿಗೇರ, ರಾವಸಾಬ ದೇವರಮನಿ, ಕುಮಾರ ಚೌಹಾನ್, ಜಿತೇಂದ್ರ ಕಾಂಬ್ಳೆ, ಯಲ್ಲಪ್ಪ ಕಾಂಬ್ಳೆ, ದೀಪಕ ಕಾಂಬ್ಳೆ ಮತ್ತಿತರರು ಉಪಸ್ಥಿತರಿದ್ದರು.

ಅನಿಲ ದೊಂಡಾರೆ ಪ್ರಾಸ್ತಾವಿಕ ಮಾತನಾಡಿದರು. ಪ್ರಮೋದ ದೊಡಮನಿ ಸ್ವಾಗತಿಸಿದರು. ಪ್ರಕಾಶ ದೊಂಡಾರೆ ವಂದಿಸಿದರು. ಶಿವಾಜಿ ಕಾಂಬಳೆ ಕಾರ್ಯಕ್ರಮ ನಿರೂಪಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum