Belagavi News In Kannada | News Belgaum

ಗಡಿ ಭಾಗದಲ್ಲಿ ನಡೆದ ಹೋರಾಟಗಳ ಬಗ್ಗೆ ಒಂದು ಗಂಟೆಯ ಉಪನ್ಯಾಸ

🌐 Belgaum News :

ಬೆಳಗಾವಿಯ ಮಹಾಂತೇಶ ನಗರದಲ್ಲಿ
ರವಿವಾರ ಅ.17 ರಂದು ಮುಂಜಾನೆ
ಲಿಂಗಾಯತ ಸಂಘಟನೆಯು ಏರ್ಪಡಿಸಿದ್ದ
ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣ,
ಗೋಕಾಕ ಚಳವಳಿ ಹಾಗೂ ಗಡಿ ಭಾಗದಲ್ಲಿ
ನಡೆದ ಹೋರಾಟಗಳ ಬಗ್ಗೆ ಒಂದು
ಗಂಟೆಯ ಉಪನ್ಯಾಸ ನೀಡಿದೆ.

ಉಪನ್ಯಾಸಕ್ಕಿಂತಲೂ ಸಂಘಟನೆಯ
ಸಹೋದರರು ಹಾಗೂ ಸಹೋದರಿಯರು
ಕಾರ್ಯಕ್ರಮದ ಆರಂಭದಲ್ಲಿ ನಡೆಸಿಕೊಟ್ಟ
ಪ್ರಾರ್ಥನೆ ಚೆನ್ನಾಗಿತ್ತು.ಅನೇಕ ಮಹಿಳೆಯರು
ಹಾಗೂ ಯುವತಿಯರು ಬಸವಣ್ಣನವರ
ವಚನಗಳನ್ನು ಪಠಿಸಿದ್ದು ಅನುಕರಣೀಯ.
ಲಿಂಗಾಯತ ಸಂಘಟನೆಯ
ಅಧ್ಯಕ್ಷ ಶ್ರೀ ಈರಣ್ಣ ದಯನ್ನವರ
ನ್ಯಾಯವಾದಿ ಶ್ರೀ ವ್ಹಿ.ಕೆ.ಪಾಟೀಲ
ಶ್ರೀ ಶಶಿಭೂಷಣ ಪಾಟೀಲ
ಮುಂತಾದ ಪ್ರಮುಖರು ಕಾರ್ಯಕ್ರಮವನ್ನು
ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ನನ್ನ ಉಪನ್ಯಾಸದ
ಆರಂಭದಲ್ಲಿ ಬಸವಣ್ಣನವರ ಕ್ರಾಂತಿಯ
ಹೆಜ್ಜೆಗಳನ್ನು, ಶರಣರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಂದರಗಿ,
ಗೊಡಚಿ,ಕಡಕೋಳ,ಮುರಗೋಡಕ್ಕೆ
ಬಂದದ್ದು,ಕಡಕೋಳದಲ್ಲಿ ಬಿಜ್ಜಳನ
ಸೈನಿಕರ ಜೊತೆ ಸಂಘರ್ಷಕ್ಕೆ ಇಳಿದದ್ದು,
ಸಾವಿರಾರು ಶರಣರು ಹುಬ್ಬಳ್ಳಿಯತ್ತ ಸಾಗಿದ್ದು,ಶ್ರೀ ಚೆನ್ನಬಸವೇಶ್ವರರು
ಬಸವಣ್ಣನವರ ವಚನಗಳ ಮೂಲ
ಪ್ರತಿಗಳನ್ನು ಸಂರಕ್ಷಿಸಿದ್ದು ಇತ್ಯಾದಿ
ಚಾರಿತ್ರಿಕ ಘಟನಾವಳಿಗಳನ್ನು
ಪ್ರಸ್ತಾಪಿಸಿದೆ.ಬಸವಣ್ಣನ ತತ್ವಗಳು
ವಚನಗಳು ಸರ್ವಕಾಲಿಕ ಸತ್ಯ.ಇನ್ನೂ
ಸಾವಿರ ವರ್ಷಗಳ ನಂತರವೂ
ಬಸವಣ್ಣನವರು ಜನಮಾನಸದಲ್ಲಿ
ಶಾಶ್ವತವಾಗಿ ಉಳಿಯುವಂಥ
ಮಹಾ ಮಾನವತಾವಾದಿ ಎಂದು
ಹೇಳಿದೆ.

1924 ರಲ್ಲಿ ಬೆಳಗಾವಿಯಲ್ಲಿ ನಡೆದ 39 ನೇ ಕಾಂಗ್ರೆಸ್ ಅಧಿವೇಶನದಲ್ಲಿ
ಗಂಗೂಬಾಯಿ ಹಾನಗಲ್ಲ ಅವರು
ಹುಯಿಲಗೋಳ ನಾರಾಯಣರಾಯರ
“ಉದಯವಾಗಲಿ ಚೆಲುವ ಕನ್ನಡ
ನಾಡು”ಹಾಡು ಹಾಡಿದ್ದನ್ನು ಹಿಡಿದು
1982 ರ ಗೋಕಾಕ ಚಳವಳಿ ವರೆಗಿನ
ಎಲ್ಲ ನಾಡು,ನುಡಿ ಮತ್ತು ಗಡಿಗೆ
ಸಂಬಂಧಿಸಿದ ಘಟನಾವಳಿಗಳನ್ನು ಉಲ್ಲೇಖಿಸಿದೆ.
ಲಿಂಗಾಯತ ಸಂಘಟನೆಯಿಂದಲೇ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮಗಳು ಆರಂಭವಾದಂತಾಗಿದೆ.
ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘನೆಗಳ ಕ್ರಿಯಾ ಸಮಿತಿ
ಬೆಳಗಾವಿ
9620114466

📱 Read Top News, Belgaum News Updates, Belagavi News in Kannada, Latest News on News Belgaum