Belagavi News In Kannada | News Belgaum

ರಾಯಲ್ ಸ್ಟಾಗ್ ಐಸಿಸಿ ಪುರುಷರ ಟಿ 20 ವಿಶ್ವಕಪ್‍ಗಾಗಿ #InItToWinIt ಚಳುವಳಿ

🌐 Belgaum News :

ರಾಯಲ್ ಸ್ಟಾಗ್ ಐಸಿಸಿ ಪುರುಷರ ಟಿ 20 ವಿಶ್ವಕಪ್‍ಗಾಗಿ #InItToWinIt ಚಳುವಳಿ

ಹುಬ್ಬಳ್ಳಿ : ಐಸಿಸಿ ಪುರುಷರ ಟಿ 20 ವಿಶ್ವಕಪ್‍ಗಾಗಿ InItToWinIt ಎಂಬ ಹೊಸ ಅತ್ಯುನ್ನತ ಉತ್ಸಾಹದ ಅಭಿಯಾನವನ್ನು ಘೋಷಿಸಲು ಸೀಗ್ರಾಮ್‍ನ ರಾಯಲ್ ಸ್ಟಾಗ್ ಹೆಮ್ಮೆ ಪಡುತ್ತಿದೆ. ಈ ಅಭಿಯಾನವು ಕೇವಲ ಕ್ರಿಕೆಟ್ ಆಟವನ್ನು ಸಂಭ್ರಮಿಸುವುದಲ್ಲದೆ, ಕಪ್ ಅನ್ನು ಮನೆಗೆ ತರುವ ಪ್ರಯತ್ನದಲ್ಲಿ ಟೀಮ್ ಇಂಡಿಯಾವನ್ನು ಬೆಂಬಲಿಸುತ್ತದೆ.
ಅಭಿಯಾನದಲ್ಲಿ ಭಾರತೀಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಜಸ್‍ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಹಾಗೂ ವಿಶ್ವದ ಸೂಪರ್ ಸ್ಟಾರ್‍ಗಳಾದ ಕೇನ್ ವಿಲಿಯಮ್ಸನ್, ಆಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್ ಮತ್ತು ಫಾಫ್ ಡು ಪ್ಲೆಸಿಸ್‍ರವರಿದ್ದಾರೆ.
ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕಪ್‍ನ ಅನ್ವೇಷಣೆಯಲ್ಲಿ ನೀಲಿ ಬಣ್ಣದ ಪುರುಷರ ಹಿಂದೆ ಒಟ್ಟುಗೂಡಿಸಲು ಪ್ರಯತ್ನಿಸುತ್ತದೆ.
ಈ ವರ್ಷ, ಇದು ಕ್ರಿಕೆಟ್ ಪ್ರೀತಿಸುವ ರಾಷ್ಟ್ರದ ಭಾವನೆಯನ್ನು ತನ್ನ ಹ್ಯಾಶ್-ಟ್ಯಾಗ್ #InItToWinIt ಮೂಲಕ ಸೆರೆಹಿಡಿಯಲು ಪ್ರಯತ್ನಿಸುವ ಮೂಲಕ ರಾಷ್ಟ್ರವು ಒಟ್ಟಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಹುರಿದುಂಬಿಸುತ್ತದೆ.
#InItToWinIt ಅಭಿಯಾನವು ರೋಮಾಂಚಕ ಗ್ರಾಹಕ ಪ್ರಚಾರದೊಂದಿಗೆ ಪ್ರಾರಂಭಗೊಂಡಿದ್ದು, ಅಲ್ಲಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಭಾಗವಹಿಸುವ ಅಥವಾ 7329073290 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಯುಎಇಯಲ್ಲಿ ಟಿ 20 ವಿಶ್ವಕಪ್ ಅನ್ನು ಲೈವ್ ಆಗಿ ವೀಕ್ಷಿಸುವ ಅವಕಾಶವನ್ನು ಪಡೆಯಬಹುದು.
ಪ್ರಚಾರವನ್ನು ಡಿಜಿಟಲ್, ಪ್ರೆಸ್, ರೇಡಿಯೋ ಮತ್ತು ಔಔಊ ನಂತಹ ಮಾಧ್ಯಮಗಳಾದ್ಯಂತ ಹೆಚ್ಚು ಮಾರ್ದನಿಸುವ ಯೋಜನೆಯ ಮೂಲಕ ವಿಸ್ತರಿಸಲಾಗುವುದು.
ಈ ಕುರಿತು ಮಾತನಾಡಿದ ಕಾರ್ತಿಕ್ ಮೊಹಿಂದ್ರಾ, ಅಒಔ, ಪೆರ್ನೋಡ್ ರಿಕಾರ್ಡ್ ಇಂಡಿಯಾ, ಕ್ರಿಕೆಟ್‍ನೊಂದಿಗಿನ ನಮ್ಮ ಪ್ರಯಾಣವು 2000 ರಲ್ಲಿ ಆರಂಭವಾಯಿತು ಮತ್ತು ಅಂದಿನಿಂದ ನಾವು ಕ್ರೀಡೆಯೊಂದಿಗೆ ನಮ್ಮ ಒಡನಾಟವನ್ನು ಬಲಪಡಿಸಿದ್ದೇವೆ. 2018 ರಿಂದಲೂ, ನಾವು ನಮ್ಮ ಗ್ರಾಹಕರ ಅತ್ಯುತ್ಸಾಹವಾದ ಕ್ರಿಕೆಟ್ ಪ್ರಯಾಣದಲ್ಲಿ ಐಸಿಸಿಗೆ ಹೆಮ್ಮೆಯ ಪಾಲುದಾರರಾಗಿದ್ದೇವೆ ಎಂದರು.
ವಿಶ್ವಕಪ್ ಗೆಲ್ಲುವ – ಸಾಂಘಿಕ ಕನಸನ್ನು ಒಟ್ಟುಗೂಡಿಸುವ ಮೂಲಕ ಒಂದು ಅನನ್ಯ ರೀತಿಯಲ್ಲಿ #InItToWinIt ಎಂದು ಕೂಗಿ ಸಾಮಾಜಿಕ ಚಳುವಳಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತೇವೆ. ವಿಶ್ವಕಪ್ ಲೈವ್ ವೀಕ್ಷಿಸುವ ಮೂಲಕ ಕ್ರಿಕೆಟ್ ಮತ್ತು ರಾಯಲ್ ಸ್ಟಾಗ್ ನ ಕಟ್ಟಾ ಅಭಿಮಾನಿಗಳಿಗೆ ನಿಜವಾಗಿಯೂ ದೊಡ್ಡದಾಗಿ ಜೀವಿಸುವ ಅನುಭವವನ್ನು ನೀಡಲು ಅನುವು ಮಾಡಿಕೊಡುತ್ತದೆ ಎಂದರು.

 

📱 Read Top News, Belgaum News Updates, Belagavi News in Kannada, Latest News on News Belgaum