Belagavi News In Kannada | News Belgaum

ಚನ್ನಮ್ಮ ವೀರಜ್ಯೋತಿಗೆ ಸಂಭ್ರಮದ ಸ್ವಾಗತ

🌐 Belgaum News :

 

ಬೆಳಗಾವಿ :ಕಿತ್ತೂರು ಉತ್ಸವದ ಅಂಗವಾಗಿ ಹೊರಟು ಬೆಳಗಾವಿ ನಗರ ಪ್ರವೇಶಿಸಿದ ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ವಿಜಯೋತ್ಸವದ ವೀರಜ್ಯೋತಿಯನ್ನು ಮಂಗಳವಾರ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಖಾನಾಪುರದಿಂದ ಹೊರಟ ವೀರಜ್ಯೋತಿ ಬೆಳಗ್ಗೆ ನಗರದ ರಾಣಿ ಚನ್ನಮ್ಮ ವೃತ್ತಕ್ಕೆ ಬಂದಾಗ ಸಂಸದೆ  ಮಂಗಲಾ ಅಂಗಡಿ, ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎ ಜಿ. ಹಿರೇಮಠ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.
ವೀರಜ್ಯೋತಿ ಮೆರವಣಿಗೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ವೀರಜ್ಯೋತಿಗೆ ಗೌರವ ಸಲ್ಲಿಸಿದರು.
ನಂತರ ವಿಜಯೋತ್ಸವ ಜ್ಯೋತಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಕತಿಗೆ ಪ್ರಯಾಣ ಬೆಳೆಸಿ ನಂತರ ಹುಕ್ಕೇರಿಗೆ ತೆರಳಿತು.//////

📱 Read Top News, Belgaum News Updates, Belagavi News in Kannada, Latest News on News Belgaum