Belagavi News In Kannada | News Belgaum

ವರುರ್ಣಾಭಟಕ್ಕೆ ನಲುಗಿದ ಉತ್ತರಾಖಂಡ: ಪ್ರವಾಸ ಸ್ಥಗಿತ

🌐 Belgaum News :

ಉತ್ತರಾಖಂಡ:  ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಹಲವೆಡೆ ಭೂಕುಸಿತವಾಗಿದೆ. ಮಳೆಯಲ್ಲಿ ಸಿಲುಕಿ ಐದಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಮೇಘಸ್ಫೋಟದಿಂದ ಬದರಿನಾಥ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ಯಾತ್ರಿಕರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್, ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ಹಾಗೂ ಪೊಲೀಸರು ದೌಡಾಯಿಸಿದ್ದು, ನೀರಿನಲ್ಲಿ ಸಿಲುಕಿದ ವಾಹನಗಳಲ್ಲಿನ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ.

ಭಾರೀ ಮಳೆಗೆ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಖಂಖ್ರಾ-ಖೇಡಾಖಾಲ್-ಖಿರ್ಸು ಸಂಪರ್ಕ ರಸ್ತೆಯಲ್ಲಿ ಭೂಕುಸಿತವಾಗಿ ರಸ್ತೆ ಬಂದ್ ಆಗಿದೆ. ನೈನಿತಾಲ್ ಹಾಗೂ ಉಧಮ್ ಪುರ ನಗರ ಸಂಪರ್ಕಿಸುವ ಹಲದವನಿ ಸೇತುವೆ ಮಳೆಗೆ ಕೊಚ್ಚಿ ಹೋಗಿದೆ. ಈ ಮಳೆಗೆ ರಿಷಿಕೇಶ-ಬದರಿನಾಥ ಹೆದ್ದಾರಿ ಬಂದ್ ಆಗಿದ್ದು, ಈ ಹಿನ್ನೆಲೆ ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.//////

📱 Read Top News, Belgaum News Updates, Belagavi News in Kannada, Latest News on News Belgaum