Belagavi News In Kannada | News Belgaum

ಸತ್ತಿ ಗ್ರಾಮದ ಚಾಮುಂಡೇಶ್ವರಿ ದೇವಿ ಭಕ್ತರ ಪಾಲಿನ ಕಾಮಧೇನು

ಕೋಳಗೇರಿ ಅಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅಭಿಮತ

🌐 Belgaum News :
ಅಥಣಿ: ತಾಲೂಕಿನ ಸತ್ತಿ ಗ್ರಾಮದ ಕೃಷ್ಣಾ ನದಿಯ ದಂಡೆಯಲ್ಲಿ ನೆಲೆಸಿರುವ ಮಾತೆ ಶ್ರೀ ಚಾಮುಂಡೇಶ್ವರಿ ದೇವಿಯು ಉತ್ತರ ಕರ್ನಾಟಕದ ಭಕ್ತರ ಪಾಲಿನ ಕಾಮಧೇನುವಾಗಿದ್ದಾಳೆ. ಭಕ್ತಿಯಿಂದ ದೇವಿಯ ಸನ್ನಿಧಿಗೆ ಆಗಮಿಸುವ ಸಾವಿರಾರು ಭಕ್ತರು ದೇವಿಯ ಕೃಪೆಗೆ ಪಾತ್ರರಾಗುತ್ತಿರುವುದು ಉತ್ತರ ಕರ್ನಾಟಕದ ಭಕ್ತರ ಪಾಲಿನ ಪುಣ್ಯವಾಗಿದೆ, ವರ್ಷದಿಂದ ವರ್ಷಕ್ಕೆ ಈ ದೇವಸ್ಥಾನ ಅಭಿವೃದ್ಧಿಹೊಂದುತ್ತಿರುವುದು ಸಂತಸ ತಂದಿದೆ ದೇವಸ್ಥಾನಗಳು ನಮ್ಮೇಲ್ಲರ ಮನಸ್ಸಿಗೆ ನೆಮ್ಮದಿ ಕಲ್ಪಿಸುತ್ತವೆಂದು ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಹೇಳಿದರು.
ಸಮೀಪದ ಸತ್ತಿ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಾ ಪ್ರತಿಯೊಬ್ಬ ಮನಷ್ಯನಿಗೆ ಮಾನಸಿಕ ನೆಮ್ಮದಿ ತುಂಬಾ ಮುಖ್ಯವಾಗುತ್ತದೆ. ಆ ಮಾನಸಿಕ ನೆಮ್ಮದಿ ಧಾರ್ಮಿಕ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಮಾತ್ರ ದೊರೆಯುತ್ತದೆ. ಭಾರತ ದೇಶ ಭವ್ಯ ಸಂಸ್ಕೃತಿ ಹೊಂದಿದ ದೇಶವಾಗಿದೆ. ಹೆತ್ತ ತಾಯಿಯ ಹೊತ್ತ ಭೂಮಿಯ ಹಾಗೂ ಭಾರತ ಮಾತೆಯ ಋಣ ತಿರೀಸಲು ನಾವೇಲ್ಲರೂ ಪ್ರಾಮಾಣಿಕವಾಗಿ ಸೇವೆ ಮಾಡಬೇಕು.
ಮಾನವಾಗಿ ಜನಸಿದ ಮೇಲೆ ಮಾನವೀಯ ಗುಣಗಳು ನಮ್ಮಲ್ಲಿಇರಬೇಕೆಂದು ಹೇಳಿದ ಅವರು ಅಥಣಿ ತಾಲೂಕಿನ ಸಮಗ್ರ ಆಭಿವೃದ್ಧಿಯೊಂದೆ ನಮ್ಮ ಸಂಕಲ್ಪವಾಗಿದೆ. ಮುಂದಿನ ದಿನಗಳಲ್ಲಿ ಅಥಣಿ ಮತಕ್ಷೇತ್ರ ರಾಜ್ಯದಲ್ಲಿಯೇ ಮಾದರಿಯಾಗಿ ಅಭಿವೃದ್ಧಿ ಹೊಂದಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಭೀಮಾಶಂಕರ, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷ ಸಂಜು ಜಮಖಂಡಿ, ಉಪಾಧ್ಯಕ್ಷ ಮಲ್ಲಪ್ಪ ಹಂಚಿನಾಳ, ಖಜಾಂಜಿ ಬಸವರಾಜ ಹಂಚಿನಾಳ, ಕಾರ್ಯದರ್ಶಿ ಈರಪ್ಪ ಮುಡಸಿ, ಅಜೀತ ಪಾಟೀಲ, ಈರಗೊಂಡ ಹಂಚಿನಾಳ, ರಮೇಶ ಲಿಂಗರಡ್ಡಿ, ಕಲ್ಲಪ್ಪ ಜಮಖಂಡಿ, ಇಸ್ಮಾಯಿಲ್ ಅಥಣಿ, ದೇವಯ್ಯಾ ಮಠಪತಿ, ಸಿದ್ದಯ್ಯಾ ಮಠಪತಿ, ರಮೇಶ ಹುಲ್ಯಾಳ, ಅಡವೇಶ ಗಣಿ, ಲಕ್ಷ್ಮಣ ಭಜಂತ್ರಿ, ಶ್ರೀಮಂತ ಹುಲ್ಯಾಳ, ಶ್ರೀಶೈಲ ಜಮಖಂಡಿ, ಕುಬೇರ ಮಗದುಮ್, ಸದಾಶಿವ ಬಿರಾದರ, ಸಚಿನ ಜಮಖಂಡಿ ಹಾಗೂ ಇತರರು ಉಪಸ್ಥಿತರಿದ್ದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. //////
📱 Read Top News, Belgaum News Updates, Belagavi News in Kannada, Latest News on News Belgaum