Belagavi News In Kannada | News Belgaum

ಮಹರ್ಷಿ ವಾಲ್ಮಿಕಿ ಜಯಂತಿ ನಗರದ ಆಶ್ರಯ ಕಾಲೋನಿಯಲ್ಲಿ ಆಚರಿಸಲಾಯಿತು

🌐 Belgaum News :

ಮಹರ್ಷಿ ವಾಲ್ಮಿಕಿ ಜಯಂತಿ ನಗರದ ಆಶ್ರಯ ಕಾಲೋನಿಯಲ್ಲಿ ಆಚರಿಸಲಾಯಿತು

ಬೆಳಗಾವಿ: ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ನಗರದ ಆಶ್ರಯ ಕಾಲನಿ ಸಾರಥಿ ನಗರ ಸುತ್ತಮುತ್ತಲಿನ ಗ್ರಾಮಸ್ಥರಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ರವರ ಸಹೋದರ ಚನ್ನರಾಜ ಹಟ್ಟಿಹೊಳಿ ಆಗಮಿಸಿದ್ದರು ಈ ವೇಳೆ ಮಾತನಾಡಿದ ಅವರು ಮಹರ್ಷಿ ವಾಲ್ಮಿಕಿ ಅವರ ರಾಮಾಯಣ 2400 ಶ್ಲೋಕಗಳನ್ನು ಒಳಗೊಂಡಿದ್ದು ತ್ರೇತಾಯುಗ,ದ್ವಾಪರಯುಗಳಲ್ಲಿನ ರಾಮನ ವನವಾಸ,ಮತ್ತು  ಸಮಾಜದ ಆಗುಹೋಗುಗಳನ್ನ ಒಳಗೊಂಡ ಅಧಿಕಾರ ದಾಹ ಮತ್ತು ರಾವಣನ ದುಷ್ಟತನ,ರಾಮನ ಸಚ್ಚಾರಿತ್ರ ಹಾಗೂ ಸೀತಾ ಮಾತೆಯ ಕಥೆಯನ್ನು ಒಳಗೊಂಡ ಪೌರಾಣಿಕ ಕಾವ್ಯವಾಗಿದ್ದು ಒಳ್ಳೆಯ ಮಾರ್ಗದಲ್ಲಿ ನಡೆಯುವವರಿಗೆ ಒಳಿತಾಗುತ್ತದೆ ಮತ್ತು ರಾವಣನಂತಹ ದುಷ್ಟರಿಗೆ ಶಿಕ್ಷೆ ಯಾಗುತ್ತದೆ ಎಂದು ಸತ್ಯದರ್ಶನ ಮಾಡಿಸುವ ಮಹಾಕಾವ್ಯ ಅಂತಹ ಶ್ರೇಷ್ಠ ಕಾವ್ಯ ರಚನೆಯ ಕರ್ತೃ ಮಹರ್ಷಿ ವಾಲ್ಮಿಕಿ ಅವರ ಜಯಂತಿ ಸಂತಸ ತಂದಿದೆ ಎಂದರು. ನಗರದ ಜನರ ಪರವಾಗಿ ಶ್ರೀ ಮಹರ್ಷಿ ವಾಲ್ಮೀಕಿ
ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು


ಇದೇ ಸಂದರ್ಭದಲ್ಲಿ ಚೆನ್ನರಾಜ ಹಟ್ಟಿಹೊಳಿ ಅವರನ್ನು  ಗ್ರಾಮಸ್ಥರು ಸನ್ಮಾನಿಸಿದರು ಹಾಗೂ ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿ ವರದಿ ಕನ್ನಡ ದಿನ ಪತ್ರಿಕೆಯ ಸಂಪಾದಕರನ್ನು ಬೆಳಗಾವಿ ವರದಿ ಕನ್ನಡ ದಿನಪತ್ರಿಕೆ ಒಂದು ವರ್ಷ ತುಂಬಿದ ಕಾರಣ ಪತ್ರಿಕೆಯ ವಾರ್ಷಿಕೋತ್ಸವ ಅಂಗವಾಗಿ ಇದೇ ಸಂದರ್ಭದಲ್ಲಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು

ಈ ವೇಳೆ  ಕಲ್ಲಾಪಾ ಮುನವಳಿ ಬಸಪ್ಪಾ ದಾದುಗೋಳ ನಾನಪ್ಪಾ ಕಲಾದಗಿ ಸಂದಿಪ್ ನಾಯಕ ವನಿತಾ ಗೊಂದಳಿ ಸಿವಪ್ಪಾ ಕಮತ್ಗಿ   ಇಮ್ಜ್ಯಾತ್ ಬಿಂಗಿ ಭೀಮಪ್ಪ ಮೇಳವಂಕಿ ದತ್ತು ಗೊಂದಳಿ ಪ್ರವೀಣ್ ಗೊಂದಳ್ಳಿ ಚನ್ನಪ್ಪಾ ವಡ್ಡರ ದೀಪಕ್ ಬುರುಡ ನಾಮದೇವ ಹತ್ತಿ  ಇನ್ನುಳಿದ ಗ್ರಾಮಸ್ಥರು ಉಪಸ್ಥಿತರಿದ್ದರು

📱 Read Top News, Belgaum News Updates, Belagavi News in Kannada, Latest News on News Belgaum