Belagavi News In Kannada | News Belgaum

ಇಂದು ಮತ್ತೆ ಮಹಾಬಲೇಶ್ವರ್ ಉದ್ಯಾವನದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭಾವಚಿತ್ರ ವುಳ್ಳ ಬ್ಯಾನರ್  ಭಾವಚಿತ್ರಕ್ಕೆ    ಕಾಂಗ್ರೆಸ್ ಕಾರ್ಯಕರ್ತರಿಂದ ಪೂಜೆ

🌐 Belgaum News :

ಬೆಳಗಾವಿ : ಮತ್ತೆ ನಗರದ ಮಹಾಬಲೇಶ್ವರ್ ಉದ್ಯಾವನದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭಾವಚಿತ್ರ ವುಳ್ಳ ಬ್ಯಾನರ್  ಭಾವಚಿತ್ರಕ್ಕೆ    ಕಾಂಗ್ರೆಸ್ ಕಾರ್ಯಕರ್ತರಿಂದ     ಪೂಜೆ

 

ಮಹಾಬಲೇಶ್ವರ ಥೀಮ್ ಆಧಾರಿತ ಉದ್ಯಾನವನ ಕಾಮಗಾರಿಗೆ ಸ್ಮಾರ್ಟ್ ಸಿಟಿ ಯೋಜನೆಅಡಿ ಕಾಮಗಾರಿಯನ್ನು ರೂಪಿಸಲಾಗಿದ್ದು, ಇಲ್ಲಿ ಕೇವಲ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಉಳ್ಳ ಬ್ಯಾನರ್ ಹಾಕಲಾಗಿತ್ತು. ಇದನ್ನು ಆರೋಪಿಸಿ ಅಂದು ಬೆಳಗಾವಿಯ ಬಿಜೆಪಿ ಗ್ರಾಮೀಣ ಮಂಡಳದ ವತಿಯಿಂದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ಭಾವಚಿತ್ರ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಉಳ್ಳ ಬ್ಯಾನರ್ ಹಾಕಿ ಪ್ರತಿಭಟನೆ ಮಾಡಿದ್ದರು.

 

ಹೌದು ಬೆಳಗಾವಿ ಗ್ರಾಮೀಣ ಭಾಗದ  ಸಹ್ಯಾದ್ರಿ ನಗರದಲ್ಲಿ ಮಹಾಬಲೇಶ್ವರ ಥೀಮ್ ಆಧಾರಿತ ಉದ್ಯಾನವನ ಕಾಮಗಾರಿಗೆ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕಾಮಗಾರಿಯನ್ನು ರೂಪಿಸಲಾಗಿದೆ. ಸುಮಾರು 83ಲಕ್ಷ ಮೌಲ್ಯದ ಕಾಮಗಾರಿ ಚಾಲನೆ ನೀಡುವ ಸಂದರ್ಭದಲ್ಲಿ ಅಲ್ಲಿ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ನಾಯಕರ ಭಾವಚಿತ್ರಗಳನ್ನು ಹೊಂದಿರುವ ಬ್ಯಾನರ್ ಹಾಕದೇ ಕೇವಲ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಉಳ್ಳ ಬ್ಯಾನರ್ ಹಾಕಲಾಗಿದೆ. ಹಾಗಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಶಿಷ್ಠಾಚಾರದ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿದ್ದರು.

 

ಈ ವೇಳೆ ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಧನಂಜಯ್ ಜಾಧವ್ ಮಾದ್ಯಮದವರೊಂದಿಗೆ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಸಹ್ಯಾದ್ರಿ ನಗರದಲ್ಲಿ ಮಾಡಲಾಗುತ್ತಿರುವ ಮಹಾಬಲೇಶ್ವರ ಉದ್ಯಾನವನ ಕಾಮಗಾರಿಗಾಗಿ ಮಾಡಿಸಿದ ಬ್ಯಾನರ್‍ನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ನಾಯಕರ ಭಾವಚಿತ್ರ ಹಾಕದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದ್ದರು.

ಇದೇ ಕಾರಣವಾಗಿ ಮತ್ತೆ ಇಂದು ಕಾಂಗ್ರೆಸ್ಸಿನ ಕಾರ್ಯಕರ್ತರು ಲಕ್ಷ್ಮಿ ಹೆಬ್ಬಾಳ್ಕರ್ ಭಾವಚಿತ್ರವುಳ್ಳ ಬ್ಯಾನರ್  ಅದೇ ಬದಿಯಲ್ಲಿ ಸೈಡಿಗೆ ಅಳವಡಿಸಿ ಪೂಜೆ ಸಲ್ಲಿಸಿದರು


ಈ ಪೂಜೆ ವನಿತಾ ಗೊಂದಳಿ ನೇತೃತ್ವದಲ್ಲಿ ನಡೆಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ನಾಮದೇವ ಹತ್ತಿ ಜನಪ್ರಿಯ ಶಾಸಕರಾದ ದೀನದಲಿತರ ಅಚ್ಚುಮೆಚ್ಚಿನ ಶಾಸಕರಾಗಿ ಅವರು ಮಹಾಬಲೇಶ್ವರ ದೇವಸ್ಥಾನದ ಉದ್ಯಾನವನದಲ್ಲಿ ಸ್ಮಾರ್ಟ್ ಸಿಟಿ ಉದ್ಯಾವನ ನಿರ್ಮಿಸಲು 83,41265 ರು ಅನುದಾನ ಕೊಟ್ಟಿದ್ದರೆ, ಜನರು ಅವರ ಒಂದು ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ನಾವು ಅವರ ಭಾವಚಿತ್ರವುಳ್ಳ ಬ್ಯಾನರಿಗೆ ಇಂದು ಪೂಜೆ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ  ಇಮ್ಜ್ಯಾತ್ ಬಿಂಗಿ ರುದ್ರಯ್ಯ ಹಿರೇಮಠ ಭೀಮಪ್ಪ ಮೇಳವಂಕಿ ದತ್ತು ಗೊಂದಳಿ ಪ್ರವೀಣ್ ಗೊಂದಳ್ಳಿ ಚನ್ನಪ್ಪಾ ವಡ್ಡರ ದೀಪಕ್ ಬುರುಡ ನಾಮದೇವ ಹತ್ತಿ ಇನ್ನುಳಿದ ಕಾರ್ಯಕರ್ತರು ಉಪಸ್ಥಿತರಿದ್ದರು

📱 Read Top News, Belgaum News Updates, Belagavi News in Kannada, Latest News on News Belgaum