Belagavi News In Kannada | News Belgaum

ಅಂಗಡಿ ತಾಂತ್ರಿಕ ಮತ್ತುವ್ಯವಸ್ಥಾಪನಾ ಮಹಾವಿದ್ಯಾಲಯ, ಬೆಳಗಾವಿ ಮಹರ್ಷಿ ವಾಲ್ಮೀಕಿಜಯಂತಿಆಚರಣೆ

🌐 Belgaum News :

ಅಂಗಡಿ ತಾಂತ್ರಿಕ ಮತ್ತುವ್ಯವಸ್ಥಾಪನಾ ಮಹಾವಿದ್ಯಾಲಯ, ಬೆಳಗಾವಿ ಮಹರ್ಷಿ ವಾಲ್ಮೀಕಿಜಯಂತಿಆಚರಣೆ
ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ನಮ್ಮ ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದು, ಅದರಲ್ಲಿರುವತತ್ವ, ಸಂಸ್ಕøತಿ, ಇತಿಹಾಸ ಹಾಗೂ ಆದರ್ಶಗಳನ್ನು ಪಾಲಿಸಬೇಕೆಂದು ಸುರೇಶಅಂಗಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕಿಡಾ. ಸ್ಪೂರ್ತಿ ಪಾಟೀಲ ಹೇಳಿದರು.

ನಗರದಅಂಗಡಿತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಬುಧವಾರ, ದಿನಾಂಕ 20.10.2021ರಂದು ಮಹರ್ಷಿ ವಾಲ್ಮೀಕಿಜಯಂತಿಆಚರಣೆಯಕಾರ್ಯಕ್ರಮದಲ್ಲಿಅವರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿರುವ ಆದರ್ಶಗಳು ನೆಮ್ಮದಿಯಜೀವನಕ್ಕೆದಾರಿದೀಪವಾಗಿದೆಎಂದು ಹೇಳಿದರು.

ಆಡಳಿತಾಧಿಕಾರಿ ರಾಜು ಜೋಶಿ, ಪ್ರೊ. ಎಸ್. ಪಿ. ದೊಡಮನಿ, ಡಾ. ಕಿರಣ ಪೋತದಾರ, ಪ್ರೊ. ಅಷ್ಪಕ ಪಠಾಣ, ಸುರೇಶಕಮತೆ, ಬ್ರಿಜೇಶ ಪಾಟೀಲ, ಶಂಕರ ಹಿರೇಮಠ, ಗಿರೀಶ ಮಡ್ಡಿಮನಿ, ಪ್ರೇಮ ಜವಳಿ, ಸಂತೋಷರವಲೂಚೆ, ದೈಹಿಕ ನಿರ್ದೇಶಕ ವಿಶಾಂತದಮೋಣೆ ಸೇರಿದಂತೆಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಫೋಟೊ ಶಿರ್ಷಿಕೆ: ಬೆಳಗಾವಿ ನಗರದಅಂಗಡಿತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಬುಧವಾರ ಮಹರ್ಷಿ ವಾಲ್ಮೀಕಿಜಯಂತಿಯನ್ನುಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕಿಡಾ. ಸ್ಪೂರ್ತಿ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum