Belagavi News In Kannada | News Belgaum

ಶಾಸಕ ಶ್ರೀಮಂತ ಪಾಟೀಲರಿಂದ ಪೆನ್ಷನ್ (ಪಿಂಚಣಿ) ಮಹಾ ಅಭಿಯಾನ.

🌐 Belgaum News :

 

ಶೇಡಬಾಳ: ಕಾಗವಾಡ ಮತಕ್ಷೇತ್ರದ ಸಮಸ್ತ ನಾಗರಿಕರಿಗೆ ಅನುಕೂಲವಾಗಲಿ ಎಂಬ ದೃಷ್ಠಿಕೋನದಿಂದ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ ಇವರ ಆದೇಶದ ಮೇರೆಗೆ ದಿನಾಂಕ 22/10/21 ರಿಂದ 10/11/21 ವರಗೆ ಪೆನ್ಷನ್ ಮಹಾ ಅಭಿಯಾನ ಪ್ರಾರಂಭಿಸಲಿದ್ದೇವೆ. ಈ ಕೆಳಕಂಡ ಪಿಂಚಣಿ ಯೋಜನೆಗೆ ಅರ್ಹರಾದ ಫಲಾನುಭವಿಗಳು ಈ ಕೆಳಗೆ ಆಯಾ ಗ್ರಾಮಗಳಿಗೆ ಅನುಸಾರವಾಗಿ ಪ್ರಾರಂಭಿಸಿದ ಶಾಸಕರ ಜನಸಂಪರ್ಕ ಕಾರ್ಯಾಲಯಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ನೀಡಬೇಕೆಂದು ಪ್ರಕಟನೆಯ ಮೂಲಕ ಶಾಸಕರ ಆಪ್ತ ಕಾರ್ಯದರ್ಶಿಗಳು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಇಗಾಗಲೇ ಹಲವಾರು ಗ್ರಾಮಗಳಲ್ಲಿ ಕರ್ನಾಟಕ ಸರ್ಕಾರದಿಂದ ಕೊಡಲ್ಪಡುವ ಪಿಂಚಣಿ ಯೋಜನೆಗಳನ್ನು ಮಂಜೂರು ಮಾಡಿ ಕೊಡಿಸಲಾಗಿದೆ. ಇಲ್ಲಿಯವರೆಗೆ ಇದರ ಲಾಭವನ್ನು ಪಡೆದುಕೊಳ್ಳದೇ ಇರುವ ಕಾಗವಾಡ ಮತಕ್ಷೇತ್ರದ ಸಾರ್ವಜನಿಕರು ಕಾಗವಾಡ ಮತಕ್ಷೇತ್ರದ ಶಾಸಕರ ಜನಸಂಪರ್ಕ ಕಾರ್ಯಾಲಯಕ್ಕೆ ದಾಖಲಾತಿಗಳನ್ನು ನೀಡಬೇಕು.

ಕಾಗವಾಡ ಜನಸಂಪರ್ಕ ಕಾರ್ಯಾಲಯ : ಶಿರಗುಪ್ಪಿ, ಜುಗುಳ, ಮಂಗಾವತಿ, ಶಹಾಪುರ, ಕಾತ್ರಾಳ, ಮೊಳವಾಡ ಫಲಾನುಭವಿಗಳು. ಕಾಗವಾಡ ಜನಸಂಪರ್ಕ ಕಾರ್ಯಾಲಯ ಪಿಆರ್‍ಓ – ದೀಪಕ ಕಾಂಬಳೆ – +917348833549
ಉಗಾರ ಖುರ್ದ ಶಾಸಕರ ಜನಸಂಪರ್ಕ ಕಾರ್ಯಾಲಯ : ಉಗಾರ ಖುರ್ದ್, ಉಗಾರ ಬುದ್ರುಕ, ಐನಾಪುರ, ಮಂಗಸೂಳಿ, ಕೃಷ್ಣಾ ಕಿತ್ತೂರ, ಬನಜವಾಡ, ಕಾತ್ರಾಳ ಫಲಾನುಭವಿಗಳು.

ಉಗಾರ ಜನಸಂಪರ್ಕ ಕಾರ್ಯಾಲಯ ಪಿಆರ್‍ಓ – ಗಣೇಶ ಹಿಮಕರ – 9964608218
ಕೆಂಪವಾಡದ ಶಾಸಕರ ಕೇಂದ್ರ ಕಚೇರಿಯಲ್ಲಿ ಕ್ಷೇತ್ರದ ಇನ್ನುಳಿದ ಎಲ್ಲ ಗ್ರಾಮಗಳ ಫಲಾನುಭವಿಗಳು ದಾಖಲಾತಿಗಳನ್ನು ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಶಾಸಕರ ಆಪ್ತ ಸಹಾಯಕರನ್ನು ಸಂಪರ್ಕಿಸಿ.
ವಿನಾಯಕ ಶಿಂದೆ – 9740885400, ಸಚಿನ ದೇಸಾಯಿ – 7625096452, ರಾಜು ಮಾನೆ – 9741652766

📱 Read Top News, Belgaum News Updates, Belagavi News in Kannada, Latest News on News Belgaum